ಸುದ್ದಿ9 ನವದೆಹಲಿ: ಮೋದಿ ಪ್ರಧಾನಿಯಾಗಿ ತನ್ನ ಚೊಚ್ಚಲ ಭಾಷಣ ಮಾಡಿದ ನರೇಂದ್ರ ಮೋದಿ ನಾನು ನಿಮ್ಮ ಪ್ರಧಾನ ಸೇವಕ, ಇಡೀ ಜಗತ್ತಿನಲ್ಲಿ ಮೇಡ್ ಇನ್ ಇಂಡಿಯಾ ವಸ್ತುಗಳು ಸಿಗುವಂತಾಗಬೇಕು, ಭಾರತದ ಪ್ರತಿಯೊಂದೂ ವ್ಯಕ್ತಿಗಳೂ ಬ್ಯಾಂಕ್ ಖಾತೆ ಹೊಂದಬೇಕು, ಹರೆಯದ ಹೆಣ್ಣುಮಗವಿನ ಕಾಳಜಿ ತೆಗೆದುಕೊಳ್ಳುವಂತೆ ಕಾಳಜಿ ತೆಗೆದಕೊಳ್ಳಬೇಕು ಎಂಬುದು ಮೋದಿ ಭಾಷಣದ ಮುಖ್ಯಾಂಶಗಳು.

Narendramodi

Narendramodi.jpg1

Narendramodi.jp

ದೆಹಲಿಯ ಕೆಂಪುಕೋಟೆಯಲ್ಲಿ 68ನೇ ಸ್ವಾತಂತ್ರೋತ್ಸವದ ಧ್ವಜಾರೋಹಣವನ್ನು ನೆರವೇರಿಸಿ ಪ್ರಧಾನಿ ಭಾಷಣ ಮಾಡಿದರು.
ಮೋದಿ ಮೇಡ್ ಇಂಡಿಯಾ ಕಲ್ಪನೆ: ಇಷ್ಟವರೆಗೆ ವಿದೇಶದಿಂದ ವಸ್ತುಗಳನ್ನು ಆಮದುಗೊಳಿಸುತ್ತಿದ್ದೆವು, ಆದರೆ ಈ ಬಾರಿ ಅದು ನಿಲ್ಲಿಸಿ, ವಿದೇಶದಿಂದ ಆಮದಾಗುವ ವಸ್ತುಗಳನ್ನು ನಮ್ಮ ದೇಶದಲ್ಲಿಯೇ ಉತ್ಪಾದಿಸೋಣ. ನಮ್ಮ ಪ್ರತಿಯೊಂದು ವಸ್ತುಗಳ ಮೇಲೂ ಮೇಡ್ ಇಂಡಿಯಾ ಎಂಬ ಬರಹ ಕಾಣಬೇಕು ಎಂದರು

ಮಹಾತ್ಮಾ ಗಾಂಧಿ ಅವರ 150ನೇ ಜನ್ಮದಿನವನ್ನು ಸ್ವಚ್ಚತಾ ದಿನವಾಗಿ ಆಚರಿಸೋಣ ಎಂದು ಕರೆ ನೀಡಿದ ಪ್ರಧಾನಿ ಮೋದಿ, ದೇಶದ ಪ್ರತಿ ಶಾಲೆಯಲ್ಲೂ ಶೌಚಾಲಯ ನಿರ್ಮಾಣವಾಗಬೇಕು ಎಂದು ಹೇಳಿದರು. ಗ್ರಾಮಗಳಲ್ಲೂ ಸಹ ಶೌಚಾಲಯ ನಿರ್ಮಾಣವಾಗಬೇಕು ಎಂದರು.

ಹೂಡಿಕೆದಾರರು ಭಾರತದಲ್ಲಿ ಬಂದು ಹೂಡಿಕೆ ಮಾಡುವಂತೆ ಮನವಿ ಮಾಡಿದರು. ಭಾರತ ಯುವಕರ ದೇಶ ಎಂದ ಮೋದಿ ಪ್ರತಿಭಾನ್ವಿತ ಯುವಕರು ನಮ್ಮ ದೇಶದಲ್ಲಿ ಇದ್ದಾರೆ. ಇಂತಹ ಯುವಕರ ಪ್ರಯೋಜನ ಪಡೆಯಲು ನಾವು ಯೋಜನೆ ರೂಪಿಸಬೇಕಿದೆ ಎಂದರು.

By Suddi9

Leave a Reply

Your email address will not be published. Required fields are marked *