ಬಂಟ್ವಾಳ: ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ದುರುದ್ದೇಶದಿಂದ ಹಿಂದು ಕಾರ್ಯಕರ್ತರ ಮೇಲೆ ಉದ್ದೇಶಪೂರ್ವಕವಾಗಿ ಪ್ರಕರಣಗಳನ್ನು ದಾಖಲಿಸಲಾಗುತ್ತಿದೆ ಎಂದು ಬಿಜೆಪಿ ಮುಖಂಡ ರಾಜೇಶ್ ನಾಯಕ್ ಉಳಿಪ್ಪಾಡಿಗುತ್ತು ಆರೋಪಿಸಿದ್ದಾರೆ.
ಹಿಂದು ಜಾಗರಣಾ ವೇದಿಕೆ ಜಿಲ್ಲಾಧ್ಯಕ್ಷ ರತ್ನಾಕರ ಶೆಟ್ಟಿ ಮೇಲಿನ ಗಡಿಪಾರು ಆದೇಶ ಹಿಂಪಡೆಯುವಂತೆ ಆಗ್ರಹಿಸಿ ಹಿಂದೂ ಜಾಗರಣಾ ವೇದಿಕೆ ಹಾಗೂ ಹಿಂದೂ ಜಾಗರಣಾ ವೇದಿಕೆ ಮಹಿಳಾ ಘಟಕ ಅಮ್ಟಾಡಿ ಸಂಯುಕ್ತಾಶ್ರಯದಲ್ಲಿ ತಾಲೂಕಿನ ಬಿ.ಸಿ.ರೋಡಿನಲ್ಲಿರುವ ಮಿನಿ ವಿಧಾನಸೌಧ ಎದುರು ಒಂದು ವಾರಗಳ ಕಾಲ ನಡೆಯುತ್ತಿರುವ ಧರಣಿಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಹಿಂದುಗಳನ್ನು ದಮನಿಸಲು ಗಡಿಪಾರುಗಳಂತಹ ಆದೇಶಗಳನ್ನು ಹೊರಡಿಸುವುದ ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಸತ್ಯಜಿತ್ ಸುರತ್ಕಲ್, ಪ್ರಾಂತ ಕಾರ್ಯದರ್ಶಿ ರಾಧಾಕೃಷ್ಣ ಅಡ್ಯಂತಾಯ, ಸುಲೋಚನಾ ಜಿ.ಕೆ ಭಟ್, ವಿಹಿಂಪ ಮುಖಂಡ ಅಶೋಕ ಶೆಟ್ಟಿ ಸರಪಾಡಿ ಮಾತನಾಡಿದರು.
ಧರಣಿಯಲ್ಲಿ ವಿಠಲ ಅಲ್ಲಿಪಾದೆ, ಮಚ್ಚೇಂದ್ರ ಸಾಲಿಯಾನ್, ಬಾಲಕೃಷ್ಣ ಕಲಾಯಿ, ಗುರುರಾಜ್ ಬಂಟ್ವಾಳ, ರಾಮ್ ದಾಸ್ ಬಂಟ್ವಾಳ, ಶೇಖರ ಶೆಟ್ಟಿ, ಬಬಿತಾ ಕೋಟ್ಯಾನ್, ಸತೀಶ್ ಶೆಟ್ಟಿ, ಜಗದೀಶ್ ಕಾಮಾಜೆ, ದೇವದಾಸ ಶೆಟ್ಟಿ, ಹರೀಶ್ ಶೆಟ್ಟಿ ಪಡು, ರವಿರಾಜ್ ಬಿ.ಸಿ.ರೋಡ್, ಚಂದ್ರಕುಮಾರ್, ಮತ್ತಿತತರು ಭಾಗವಹಿಸಿದ್ದರು.



