
ಫರಂಗಿಪೇಟೆ: ಇಲ್ಲಿನ ಕಿದ್ಮತುಲ್ ಇಸ್ಲಾಂ ಎಸೊಸಿಯೇಶನ್ ವತಿಯಿಂದ ಮೊಹಿಯುದ್ದೀನ್ ಜುಮಾ ಮಸೀದಿ ಸಹಯೋಗದೊಂದಿಗೆ ಮಾ.25 ರಂದು ಫರಂಗಿಪೇಟೆ ಜಂಕ್ಷನ್ ನಲ್ಲಿ ನಡೆಯಲಿರುವ 10 ಜೋಡಿಗಳ ಸರಳ ಸಾಮೂಹಿಕ ವಿವಾಹಕ್ಕೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ಈ ಸಾಮೂಹಿಕ ವಿವಾಹಕ್ಕೆ ಅರ್ಹ ವಧು ಅಥವಾ ವರ ಫೆ.15ರ ಒಳಗೆ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಮುಹಮ್ಮದ್ ಬಾವ ದೂ. 98458 15033, ಎಫ್. ಉಮರ್ ಫಾರೂಕ್ ದೂ. 99160 72059, ಯೂಸುಫ್ ಅಲಂಕಾರ್ ದೂ. 99015 10636 ಅವರನ್ನು ಸಂಪರ್ಕಿಸಬಹುದು ಎಂದು ಕಿದ್ಮತುಲ್ ಇಸ್ಲಾಂ ಎಸೋಸಿಯೇಶನ್ ಸದಸ್ಯ ಹಾಗೂ ಮೊಹಿಯುದ್ದೀನ್ ಜುಮಾ ಮಸೀದಿಯ ಉಪಾಧ್ಯಕ್ಷ ಎಫ್. ಉಮರ್ ಫಾರೂಕ್ ಪ್ರಕಟನೆಯಲ್ಲಿ ಕೋರಿದ್ದಾರೆ.
