man-beated-african1

ಮಂಗಳೂರು: ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ  ಕಾಂಗ್ರೆಸ್ ಮುಖಂಡ ಅಮೃತ್ ಕದ್ರಿ ಎಂಬಾತ ಹಲ್ಲೆ ನಡೆಸಿರುವ ಘಟನೆ ನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ.

ಪುಟ್ಟರಾಜು ಹಲ್ಲೆಗೊಳಗಾದ ಪೊಲೀಸ್ ಸಿಬ್ಬಂದಿ ಎಂದು ಗುರುತಿಸಲಾಗಿದೆ.

ಏನಿದು ಘಟನೆ: ಹೊಸ ವರ್ಷಾಚರಣೆ ಹಿನ್ನೆಲೆ ರವಿವಾರ ರಾತ್ರಿ ಸುಮಾರು 11:30ರ ವೇಳೆ ನಗರದ ಬಿಜೈ-ಸರ್ಕೀಟ್ ಬಳಿ ಪೂರ್ವ ಪೊಲೀಸ್ ಸಂಚಾರ ಠಾಣೆಯ ಸಬ್ ಇನ್ಸ್ ಸ್ಪೆಕ್ಟರ್ ಆರ್.ಕೆ.ಗರಾವ್ ಹಾಗೂ ಸಿಬ್ಬಂದಿ ವರ್ಗದವರು ವಾಹನ ತಪಾಸಣೆ ನಡೆಸುತ್ತಿದ್ದಾಗ ಈ ವೇಳೆ ಕಾಂಗ್ರಸ್ ಮುಖಂಡ ಅಮೃತ್ ಕದ್ರಿ ಎಂಬಾತ ಇದೇ ಮಾರ್ಗವಾಗಿ ಬರುತ್ತಿದ್ದು, ಇದನ್ನು ಕಂಡ ಸಿಬ್ಬಂದಿ ಪುಟ್ಟರಾಜು ಕಾರನ್ನು ನಿಲ್ಲಿಸಲು ಸೂಚಿಸಿದ್ದಾರೆ ಎನ್ನಲಾಗಿದೆ.

ಅಮೃತ್ ಕಾರನ್ನು ಬದಿಗೆ ನಿಲ್ಲಿಸಿ, ನನ್ನ ಕಾರು ನಿಲ್ಲಿಸಲು ನೀನ್ಯಾರು? ನಾನು ಅಮೃತ್ ಕದ್ರಿ ಎಂದು ನಿನಗೆ ಅರಿವಿಲ್ಲವೆ. ನಿನ್ನ ವಿರುದ್ಧ ಮೇಲಾಧಿಕಾರಿಗೆ ದೂರು ನೀಡುವುದಾಗಿ ಏಕವಚನದಿಂದ ಮಾತನಾಡಿದಲ್ಲದೆ, ಕಾರಿನಿಂದ ಇಳಿದು ಪುಟ್ಟರಾಜು ಅವರಿಗೆ ಹಲ್ಲೆ ನಡೆಸಿ ಗೂಂಡಾಗಳಂತೆ ವರ್ತಿಸಿದ್ದಾನೆ ಎಂದು ತಿಳಿದು ಬಂದಿದೆ.

ಇದಲ್ಲದೆ, ಕುಡಿತದ ಮತ್ತಿನಲ್ಲಿದ್ದ ಅಮೃತ್ ಗೆ ಪೊಲಿಸರು ನೀಡಿದನ್ನು ಕೂಡ ಸ್ವೀಕರಿಸದೆ ಕಾರು ಚಲಾಯಿಸಿ ಸ್ಥಳದಿಂದ ತೆರೆಳಿದ್ದಾನೆ ಎನ್ನಲಾಗಿದೆ.

ಈ ಬಗ್ಗೆ ಅಮೃತ್ ವಿರುದ್ಧ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

By Suddi9

Leave a Reply

Your email address will not be published. Required fields are marked *