ವಿಟ್ಲ: ಲಯನ್ಸ್ ಕ್ಲಬ್, ಲಯನೆಸ್ ಕ್ಲಬ್ ಮತ್ತು ಲಿಯೋ ಕ್ಲಬ್ ಹಾಗೂ ಶ್ರೀರಾಮ ಫ್ರೆಂಡ್ಸ್ ಸಂಯುಕ್ತಾಶ್ರಯದಲ್ಲಿ ದ.ಕ.ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಸಹಯೋಗದಿಂದ ಇಲ್ಲಿನ ದ.ಕ.ಜಿ.ಪಂ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ರವಿವಾರ ರಕ್ತದಾನ ಶಿಬಿರ ನಡೆಯಿತು.
ಶಿಬಿರಕ್ಕೂ ಮುನ್ನ ನಡೆದ ಸಭಾ ಕಾರ್ಯಕ್ರಮವನ್ನು ಶ್ರೀರಾಮ ಫ್ರೆಂಡ್ಸ್ ಗೌರವಾಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರು ಉದ್ಘಾಟಿಸಿದ್ದು, ಶ್ರೀರಾಮ ಫ್ರೆಂಡ್ಸ್ ಅಧ್ಯಕ್ಷ ರವಿಕುಮಾರ್ ಕಟ್ಟೆ, ವೈದ್ಯಾಧಿಕಾರಿಗಳಾದ ಡಾ. ಗೀತಪ್ರಕಾಶ್, ಡಾ. ಬದ್ರುದ್ದೀನ್, ಡಾ.ಶರತ್, ಲಯನ್ಸ್ ಮಾಜಿ ಅಧ್ಯಕ್ಷ ಪ್ರಭಾಕರ ಶೆಟ್ಟಿ ದಂಬೆಕಾನ, ಡಾ.ಶರತ್ಚಂದ್ರ ಶೆಟ್ಟಿ, ವೀರಾಂಜನೇಯ ವ್ಯಾಯಮ ಶಾಲೆಯ ದೇಜಪ್ಪ ಪೂಜಾರಿ ನಿಡ್ಯ, ಲಯನ್ ಕಾರ್ಯದರ್ಶಿ ಗಂಗಾಧರ ಮತ್ತು ಲಿಯೋ ಅಧ್ಯಕ್ಷ ಜಾಸ್ಮಿನ್ ಮತ್ತಿತರರು ಉಪಸ್ಥಿತರಿದ್ದರು.
ಸಭಾಧ್ಯಕ್ಷತೆ ವಹಿಸಿದ್ದ ಲಯನ್ಸ್ ಕ್ಲಬ್ ಅಧ್ಯಕ್ಷೆ ವಿನ್ನಿ ಮಸ್ಕರೇನಸ್ ಸ್ವಾಗತಿಸಿದರು. ಶ್ರೀರಾಮ ಫ್ರೆಂಡ್ಸ್ ಗೌರವ ಸಲಹೆಗಾರ ರಾಮದಾಸ ಶೆಟ್ಟಿ ವಂದಿಸಿದರು. ಮಂಗೇಶ್ ಭಟ್ ಕಾರ್ಯಕ್ರಮ ನಿರೂಪಿಸಿದರು.


