ಮಂಗಳೂರು: ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ ಸಭೆ ಇತ್ತೀಚೆಗೆ ನಗರದಲ್ಲಿ ನಡಯಿತು.
ಈ ವೇಳೆ ಸಮಿತಿಯ ನೂತನ ಅಧ್ಯಕ್ಷರಾಗಿ ಹಾಜಿ ಎನ್.ಎಸ್ ಕರೀಂ, ಉಪಾಧ್ಯಕ್ಷರಾಗಿ ಇಸ್ಮಾಯೀಲ್ ಪನೀರ್, ಕಾರ್ಯದರ್ಶಿಗಳಾಗಿ ಡಿ.ಎಂ ಮೊಹಮ್ಮದ್, ಮೊಹಿದ್ದೀನ್ ಕುಂಞಿ ಕಿನ್ಯ, ಸಂಘಟನಾ ಕಾರ್ಯದರ್ಶಿಯಾಗಿ ಝಕರಿಯ್ಯಾ ಮಲಾರ್ ಅವರನ್ನು ಸಚಿವ ಯು.ಟಿ ಖಾದರ್ ಶಿಫಾರಸಿನ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಪ್ರಕಟನೆ ತಿಳಿಸಿದೆ.


