30btl-Sujir

ಬಂಟ್ವಾಳ: ನೆಮ್ಮದಿ ಹಾಗೂ ಶಾಂತಿಯುತ ಜೀವನ ನಡೆಸಲು ದೇವರು ಮತ್ತು ದೈವಗಳ ಆರಾಧನೆ ಅಗತ್ಯವಿದೆ ಎಂದು ಮಾಣಿಲ ಶ್ರೀಧಾಮ ಮೋಹನದಾಸ ಪರಮಹಂಸ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ತಾಲೂಕಿನ ಪುದು ಗ್ರಾಮದ ಸುಜೀರು ಶ್ರೀ ದೈವರಾಜ ಕೋರ್ದಬ್ಬು ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವ ಪ್ರಯುಕ್ತ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದ್ದರು.

ಈ ವೇಳೆ ಮೋನಪ್ಪ ಪೂಜಾರಿ, ಮೋಹನದಾಸ ಕರ್ಕೇರಾ, ಅರುಣ್ ಕುಮಾರ್ ನುಳಿಯಾಲುಗುತ್ತು ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಧಾಮರ್ಮಿಕ ಪರಿಷತ್ ಸದಸ್ಯ ಜಗನ್ನಾಥ ಚೌಟ, ಸೇವಾಂಜಲಿ ಪ್ರತಿಷ್ಠಾನ ಆಡಳಿತ ಟ್ರಸ್ಟಿ ಕೃಷ್ಣಕುಮಾರ್ ಪೂಂಜಾ, ಕಳ್ಳಿಗೆ ಗ್ರಾ.ಪಂ. ಉಪಾಧ್ಯಕ್ಷ ಪುರುಷ ಎನ್. ಸಾಲ್ಯಾನ್, ಒಡಿಯೂರು ಗ್ರಾಮ ವಿಕಾಸ ಯೋಜನೆ ಪ್ರಧಾನ ಸಂಚಾಲಕ ತಾರಾನಾಥ ಕೊಟ್ಟಾರಿ, ತುಳು ಜಾನಪದ ವಿದ್ವಾಂಸ ಕೆ.ಕೆ. ಪೇಜಾವರ, ತುಂಬೆ ಶ್ರೀ ಶಾರದ ಪ್ರತಿಷ್ಠಾನ ಅಧ್ಯಕ್ಷ ಗಣೇಶ್ ಸುವರ್ಣ ಮತ್ತಿತರರು ಇದ್ದರು. ಅರುಣ್ಕುಮಾರ್ ಸ್ವಾಗತಿಸಿ, ರೋಹಿತ್ ವಂದಿಸಿದರು.

 

 

By suddi9

Leave a Reply

Your email address will not be published. Required fields are marked *