download (1)

‘ಮರಣದ ನೋವ ನುಂಗಿ
ಜನ್ಮ ನೀಡಿದ
ಜನನಿ ಜನ್ಮ ಮಾತೆಯ
ಜಾಡಿಸಬ್ಯಾಡ..’

‘ಹುಟ್ಟಿಸಿದಾತನ
ಹೊರಗಟ್ಟಿ
ತಾನೇ ಗಟ್ಟಿ ಮುಟ್ಟೆಂದು
ಮೆಟ್ಟಿ ನಿಲ್ಲಬ್ಯಾಡ..’

‘ಜ್ಞಾನವ ಕರುಣಿಸಿ
ವಿಜ್ಞಾನದ ಬೀಜವ
ಬಿತ್ತಿದ ಜ್ಞಾನಗುರುವನ್ನ
ಜ್ಞಾಪಿಸದಿರಬ್ಯಾಡ..’

‘ಧನಿಕನಾದೆನೆಂಬ
ದರ್ಪದಿಂದ
ಧನವನ್ನ ದಾನ ನೀಡದೆ
ಜಿಪುಣನ್ಯಾಗಬ್ಯಾಡ..’

‘ಜಗ ನಿಯಂತ್ರಿಸೋ
ಜಗದೊಡೆಯನ
ಜಪಮಾಲೆ ಜಪಿಸಿ
ಜಯಿಸಲು ಮರಿಬ್ಯಾಡ..’

 ಕವಿ: ಕ-ಶಿಖ, ಬಜಪೆ

IMG-20171216-WA0295

By suddi9

Leave a Reply

Your email address will not be published. Required fields are marked *