ನವದೆಹಲಿ(ಆಗಸ್ಟ್ 12): ಸ್ವಾತಂತ್ರ್ಯೋತ್ಸವಕ್ಕೆ ಭಾರತೀಯ ಪ್ರಜೆಗಳಿಗೆ ಒಳ್ಳೆಯ ಗಿಫ್ಟ್ ಸಿಗಲಿದೆ. ಆಗಸ್ಟ್ 15ರ ವೇಳೆಗೆ ಪೆಟ್ರೋಲ್ ದರ 2.50 ರು ಕಡಿಮೆಯಾಗಲಿದೆ ಎಂಬ ಸುದ್ದಿ ಕೇಳಿಬರುತ್ತಿದೆ. ಲೀಟರಿಗೆ ಸುಮಾರು 70 ರುಪಾಯಿ ಬೆಲೆಗೆ ಪೆಟ್ರೋಲ್ ಲಭ್ಯವಿರಲಿದೆ. ಕಳೆದ ಒಂದು ವರ್ಷದಲ್ಲಿ ಇದು ಅತೀ ಕಡಿಮೆ ಬೆಲೆಯಾಗಿದೆ. ಅಂತಾರಾಷ್ಟ್ರೀಯ ತೈಲ ಬೆಲೆಗಳು ಇಳಿಕೆಯಾದ ಪರಿಣಾಮ ಭಾರತದಲ್ಲೂ ಆಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ಕುಸಿಯದೇ ಹೋಗಿದ್ದರೆ ಪೆಟ್ರೋಲ್ ಬೆಲೆ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇತ್ತು. ಆಗಸ್ಟ್ 1ರಂದು ಪೆಟ್ರೋಲ್ ಬೆಲೆ ಸುಮಾರು ಒಂದು ರುಪಾಯಿಯಷ್ಟು ತಗ್ಗಿತ್ತು. ಈ ಹಿನ್ನೆಲೆಯಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಎರಡನೇ ಬಾರಿ ಪೆಟ್ರೋಲ್ ಬೆಲೆ ಇಳಿದಂತಾಗುತ್ತದೆ.petrol-filling-440

By suddi9

Leave a Reply

Your email address will not be published. Required fields are marked *