ಕೈಕಂಬ: ಗುರುಪುರದ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಲಾದ ಈ ಬ್ರಿಟಿಷರ ಕಾಲದ್ದು. ಅಂದರೆ ಇದೀಗ ಅದಕ್ಕೆ ಸರಿ ಸುಮಾರು 70ಕ್ಕೂ ಅಧಿಕ ವರ್ಷಗಳಾಗಿವೆ. ಅಲ್ಲಿಂದ ಇದಕ್ಕೆ ಕಬ್ಬಿಣದ ತಡೆಗೋಡೆ ಮತ್ತು ಡಾಮರು ಹಾಕಿದ್ದು ಬಿಟ್ಟರೆ ಅದಿನ್ನೂ ಬದಲಾಗದೆ ಹಾಗೆಯೇ ಉಳಿದಿದೆ.
ಬ್ರಿಟಿಷರು ನಿಮರ್ಿಸಿದ ಸೇತುವೆ;

ಈ ಸೇತುವೆಯನ್ನು ನಿಮರ್ಿಸಿದವರು ಬ್ರಿಟಿಷರು. ಅವರು ಅಲ್ಲಿ ಕುದುರೆ ಸವಾರಿ ಮಾಡಿಸಲೆಂದು ಗುರುಪುರದ ಫಲ್ಗುಣಿ ನದಿಗೆ ಅಡ್ಡಲಾಗಿ ಒಂದು ಸೇತುವೆ ನಿಮರ್ಿಸಿದರು. ಆ ಸಂದರ್ಭದಲ್ಲಿ ರಸ್ತೆಯಲ್ಲಿ ವಾಹನ ಸಂಚರಿಸಬಹುದೆಂಬ ಪರಿಕಲ್ಪನೆ ಅವರಲ್ಲಿರಲಿಲ್ಲ. ಕೇವಲ ಕುದುರೆ ಗಾಡಿ ಹೋಗಲು ಸಾಕೆನಿಸುವಷ್ಟು ಸಪೂರವಾದ ಸೇತುವೆ ನಿಮರ್ಿಸಸಿದರು. ಈ ಸೇತುವೆಯ ಮುಖಾಂತರ ಕುದುರೆ ಗಾಡಿಯಲ್ಲಿ ಸರಕುಗಳನ್ನು ಹೇರಿಕೊಂಡು ಮಂಗಳೂರಿಗೆ ಸಾಗಿಸುತ್ತಿದ್ದರು. ಹಳ್ಳಿಗಳ ವ್ಯಾಪಾರಿಗಳು ಅಕ್ಕಿ, ಮಡಿಕೆ ಮುಂತಾದ ವಸ್ತುಗಳನ್ನು ಹೇರಿಕೊಂಡು ಇದೇ ಸೇತುವೆಯ ಮುಖಾಂತರ ಹಾದು ಹೋಗಿ ಅದನ್ನು ಮಂಗಳೂರಿನ ಹಂಪನಕಟ್ಟೆಯಂತಹಾ ಪ್ರದೇಶಗಳಲ್ಲಿ ಮಾರಾಟ ನಡೆಸುತ್ತಿದ್ದರು. ಅಲ್ಲದೆ ಬ್ರಿಟಿಷ್ ದೊರೆಗಳು ಈ ಭಾಗದ ಜಾಮೀನ್ದಾರರನ್ನು ಭೇಟಿಯಾಗಿ ಅವರಿಂದ ಬ್ರಿಟಿಷ್ ಸರಕಾರಕ್ಕೆ ಸಲ್ಲಬೇಕಾಗಿದ್ದ ಕಪ್ಪಕಾಣಿಕೆಗಳು, ಅಕ್ಕಿ ಮುಂತಾದ ವಸ್ತುಗಳನ್ನು ಕುದುರೆ ಗಾಡಿಗಳಲ್ಲಿ ಹೇರಿಕೊಂಡು ಹೋಗಲು ತನ್ನ ಅನುಕೂಲಕ್ಕಾಗಿ ಕಟ್ಟಿದ ಸೇತುವೆ ಇದು.
ಬ್ರಿಟಿಷ್ ದೊರೆಗಳು ಗುರುಪುರದ ಅಕ್ಕಪಕ್ಕದ ಜಾಮೀನ್ದಾರರನ್ನು ಭೇಟಿಮಾಡಲು ಸಹ ಇದೇ ಸೇತುವೆಯನ್ನು ಉಪಯೋಗಿಸುತ್ತಿದ್ದರು. ಹೀಗೆ ಬ್ರಿಟಿಷರು ತನ್ನ ವೈಯಕ್ತಿಕ ವ್ಯಾಪಾರಕ್ಕೆಂದು ನಿಮರ್ಿಸಿದ ಈ ಸೇತುವೆಯಲ್ಲೇ ಮುಂದೊಂದು ದಿನ ರಾಷ್ಟ್ರೀಯ ಹೆದ್ದಾರಿ 13 ನಿಮರ್ಾಣವಾಯ್ತು. ಅಲ್ಲಿಂದ ಮಂಗಳೂರಿನಿಂದ ಮೂಡಬಿದ್ರೆ, ಕಾರ್ಕಳ, ಶಿವಮೊಗ್ಗ, ಬೆಂಗಳೂರಿನಂತಹಾ ನಗರಗಳಿಗೆ ಸಂಪರ್ಕವ್ನು ಏರ್ಪಡಿಸುವಂತೆ ಮಾಡಲಾಯ್ತು.
ಇಷ್ಟೆಲ್ಲಾ ಬದಲಾವಣೆ ನಡೆದರೂ ಗುರುಪುರದ ಸೇತುವೆ ಮಾತ್ರ ಬದಲಾಗಲಿಲ್ಲ. ಸ್ವಾತಂತ್ರಯ ಸಿಕ್ಕಿ ಆರು ದಶಕಗಳು ಕಳೆದರೂ ಈ ಸೇತುವೆ ಬದಲಾದದ್ದಾಗಲೀ, ಅಗಲವಾದದ್ದಾಗಲೀ ನಡೆಯಲೇ ಇಲ್ಲ. ಭಾರತೀಯರು ಆಧುನೀಕರಣಕ್ಕೆ ಒಗ್ಗಿಕೊಂಡು ಘನವಾಹನಗಳನ್ನು ರಸ್ತೆಗೆ ಇಳಿಸಿದರೂ ಜಪ್ಪಯ್ಯ ಎಂದರೂ ಗುರುಪುರ ಸೇತುವೆ ಮಾತ್ರ ಇನ್ನೂ ಬ್ರಿಟಿಷರು ನಿಮರ್ಿಸಿದಪಳುವಳಿಕೆಯಾಗಿಯೇ ಉಳಿದಿದೆ.
ಈ ಸೇತುವೆ ಕೇವಲ ಒಂದು ಬಸ್ ಹೋಗುವಷ್ಟು ಮಾತ್ರ ಅಗಲವಾಗಿದೆ. ಚಾಲಕ ಎಚ್ಚರಿಕೆಯಿಂದ ಸಂಚರಿಸಿದರೆ ಮಾತ್ರ ಸೇತುವೆ ದಾಟಬಹುದು. ಇಲ್ಲದಿದ್ದರೆ ಅಪಾಯ ಕಟ್ಟಿಟ್ಟಬುತ್ತಿ. ಎದುರುಬದುರಾಗಿ ಸಂಚರಿಸಿದ ವಾಹನಗಳಿಗೆ ಸೈಡ್ ಕೊಡಲೂ ಸಾಧ್ಯವಿಲ್ಲ. ಒಂದು ವೇಳೆ ಸಂಚರಿಸಿದರಂತೂ ಅಲ್ಲೂ ಅಪಘಾತವಾಗಬಹುದು.
ಘನವಾಹನಗಳು ಸಂಚರಿಸಿದರಂತೂ ಸೇತುವೆ ಘಡ ಘಡ ಅಲುಗಾಡುತ್ತದೆ. ಇದಕ್ಕೆ ನಿಮರ್ಿಸಲಾದ ಪಿಲ್ಲರ್ ಅಂದರೆ ಕಂಬಗಳು ಶಿಥಿಲಗೊಂಡಿದೆ. ಎಷ್ಟಾದರೂ ಬ್ರಿಟಿಷರು ನಿಮರ್ಿಸಿದ್ದ ಸೇತುವೆಲ್ಲವೇ ಆದುದರಿಂದ ಇಷ್ಟು ವರ್ಷ ಬಾಳಿಕೆ ಬಂದಿದೆ. ಎಷ್ಟಾದರೂ ಮನುಷ್ಯರಂತೆ ವಸ್ತುವಿಗೂ ಆಯುಷ್ಯ ಎಂಬುವುದೊಂದಿದೆ. ಹೀಗಾಗಿ ಈ ಸೇತುವೆಯ ಆಯುಷ್ಯವೂ ಮುಗಿದ ಲಕ್ಷಣ ಸ್ಪಷ್ಟವಾಗಿ ಗೋಚರಿಸುತ್ತಿದೆ. ಪಿಲ್ಲರ್ ಶಿಥಿಲಾವಸ್ತೆಗೆ ತಲುಪಿದ್ದು, ಬೀಳುವ ಹಂತಕ್ಕೆ ತಲುಪಿ ನಿಂತಿದೆ. ನದಿಯ ತಡೆಗೋಡೆ ಕುಸಿಯುವ ಹಂತಕ್ಕೆ ತಲುಪಿದ್ದು, ಬಹಳಷ್ಟು ಭಾಗ ನೀರಿನಲ್ಲಿ ಕೊಚ್ಚಿಕೊಂಡುಹೋಗಿದೆ. ಇದರ ಮೇಲೆಯೇ ಸೇತುವೆ ಪವಡಿಸಿದೆ. ಈ ಬಾರಿ ಸುರಿದ ಭಾರೀ ಮಳೆಗೆ ನೆರೆ ಪರಿಸ್ಥಿತಿ ಉಂಟಾಗಿತ್ತು. ಇದರಿಂದಾಗಿ ಈ ಭಾಗದಲ್ಲಿ ಭಾರೀ ಮಣ್ಣಿನ ಸವಕಳಿ ಉಂಟಾಗಿದ್ದು ಮಣ್ಣಿನ ಬಹಳಷ್ಟು ಭಾಗ ನೀರುಪಾಲಾಗಿದೆ.
ಅಲ್ಲದೆ ಇಲ್ಲಿ ಬಹಳಷ್ಟು ತಿಂಗಳಿನಿಂದ ನೀರಿನಿಂದ ಮರಳು ತೆಗೆಯುತ್ತಿದ್ದು ಇದರಿಂದ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಇದರಿಂದಾಗಿಯೂ ಅತಿಯಾದ ಮಣ್ಣಿನ ಸವಕಳಿ ಉಂಟಾಗುತ್ತಿದ್ದು ಸೇತುವೆಗೆ ಭಾರೀ ಪ್ರಮಾಣದ ಹೊಡೆತ ಬೀಳುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಹಲವಾರು ವರ್ಷಗಳಿಂದ ಬೀದಿ ದೀಪ ಸ್ಥಗಿತ; ಗುರುಪುರ ಬಳಿಯ ಪರಾರಿಯಿಂದ ಸೇತುವೆ ತನಕ ಬೀದಿ ದೀಪ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ವಾಹನಗಳು ತನ್ನ ಸ್ವಂತ ಬೆಳಕನ್ನು ಉಪಯೋಗಿಸಿ ಸಂಚಾರ ನಡೆಸುತ್ತವೆಯೇ ಹೊರತು ಸ್ಥಳೀಯಾಡಳಿತ ಕಣ್ಣಿದ್ದೂ ಕುರುಡನಂತೆ ವತರ್ಿಸುತ್ತಿದೆ.
ವಾಹನ ಸಂಚಾರಕ್ಕೆ ಅಯೋಗ್ಯ ಸೇತುವೆ; ಈ ಸೇತುವೆ ಸಂಚಾರಕ್ಕೆ ಸಂಪೂರ್ಣವಾಗಿ ಅಯೋಗ್ಯವಾಗಿದೆ ಎನ್ನುತ್ತಾರೆ ವಾಹನ ಸವಾರರು, ಬಸ್ ಚಾಲಕ ಗಂಗಯ್ಯ ಎನ್ನುವವರ ಪ್ರಕಾರ ಈ ಭಾಗದಲ್ಲಿ ವಾಹನ ಚಲಾಯಿಸುವುದೆಂದರೆ ಜೀವ ಬಾಯಿಗೆ ಬಂದಂತ ಪರಿಸ್ಥಿತಿ ಉಂಟಾಗುತ್ತದೆ, ಸ್ವಲ್ಪ ಎಚ್ಚರ ತಪ್ಪಿದರೂ ಅಪಘಾತ ತಪ್ಪಿದ್ದಲ್ಲ. ಆದರೂ ಬಹಳ ಜಾಗರೂಕತೆಯಿಂದ ಸಂಚಾರ ನಡೆಸುತ್ತೇವೆ. ಎದುರಿನ ವಾಹನಗಳಿಗೆ ಸಂಜ್ಞೆಯನ್ನು ಕಳಿಸುತ್ತೇವೆ. ಈ ಸಂದರ್ಭದಲ್ಲಿ ಎದುರಿನ ವಾಹನದವರಿಗೆ ಗೊತ್ತಾಗದೇ ಇದ್ದಾಗ ಟ್ರಾಫಿಕ್ ಜಾಂ ಉಂಟಾಗುವ ಸಾಧ್ಯತೆ ಇರುತ್ತದೆ.
ಬೈಕ್ ಸವಾರರಿಗೂ ಈ ಸೇತುವೆ ಅಪಾಯಕಾರಿಯಾಗಿದೆ. ಸೇತುವೆಯ ಬಲ ಭಾಗದಿಂದ ಎಡಭಾಗದಲ್ಲಿ ಗಾಳಿ ಸಂಚಾಋ ಅದಿಕವಾಗಿರುವುದರಿಂದ ಬೈಕ್ ಇಲ್ಲಿ ನಡುಗಲು ಆರಂಭವಾಗುತ್ತದೆ, ಕೆಲವೊಮ್ಮೆ ಜಾಸ್ತಿ ಗಾಳಿ ಇದ್ದರೆ ಬೈಕ್ ಓಲಾಡುತ್ತದೆ ಎನ್ನುತ್ತಾರೆ ಇಲ್ಲಿ ನಿತ್ಯವೂ ಸಂಚಾರ ನಡೆಸುವ ವಿನ್ಸೆಂಟ್.
ಅಲ್ಲದೆ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಪಘಾತ ಉಂಟಾಗಿದ್ದು ಹಲವಾರ ಮಂದಿ ಗಾಯಗೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಈ ಭಾಗದಲ್ಲಿ ರಸ್ಯೆ ಅಪಘಾತಕ್ಕೆ ಮಹಿಳೆಯೋರ್ವರು ಜೀವ ಕಳೆದುಕೊಂಡ ಉದಾಹರಣೆ ಇದೆ.
ಆದುರಿಂದ ಈ ಸೇತುವೆಯನ್ನು ಸಂಪೂರ್ಣವಾಗಿ ಕೆಡವಿ ನೂತನ ಅತ್ಯಾಧುನಿಕ ಸೇತುವೆ ನಿಮರ್ಿಸುವುದು ಅಗತ್ಯವಾಗಿದೆ.
