ಸುದ್ದಿ9ಬಜ್ಪೆ: ನಗರದ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಮುಂಜಾನೆ ಖ್ಯಾತ ತಮಿಳು ನಟ `ಸ್ಟೈಲ್ಕಿಂಗ್’ ರಜನೀಕಾಂತ್ ಕಾಣಿಸಿಕೊಂಡು ಕ್ಷಣಕಾಲ ಅಲ್ಲಿದ್ದವರನ್ನು ದಂಗುಬಡಿಸಿದರು.
ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಆಗಮಿಸಿದ್ದ ರಜನೀಕಾಂತ್ ಶ್ವೇತರ್ವಣದ ಬಟ್ಟೆಯಲ್ಲಿ ತಮ್ಮ ಎಂದಿನ ಶೈಲಿಯಲ್ಲೇ `ವಣಕ್ಕಂ’ ಎಂದು ಜನರಿಗೆ ವಂದಿಸಿದರು. ರಜನಿ ವಿಮಾನ ಇಳಿದು ಹೊರಬರುತ್ತಲೇ ಮುತ್ತಿಕೊಂಡ ಅಭಿಮಾನಿಗಳು ಮೊಬೈಲ್, ಕೆಮರಾಗಳಲ್ಲಿ ಫೊಟೋ ಕ್ಲಿಕ್ಕಿಸಿ ಕೃತಾರ್ಥರಾದರೆ ಪೊಲೀಸರಿಗೆ ಜನರನ್ನು ಚದುರಿಸುವುದೇ ಕೆಲಸವಾಯಿತು.
ಮಾಧ್ಯಮಗಳ ಜೊತೆ ಕೆಲ ನಿಮಿಷ ಮಾತನ್ನಾಡಿದ ರಜನಿ, ಖಾಸಗಿ ಕಾರ್ಯಕ್ರಮದ ನಿಮಿತ್ತ ಮಂಗಳೂರಿಗೆ ಬಂದಿದ್ದೇನೆ ಎಂದು ಹೇಳಿದರು. ರಜನಿಕಾಂತ್ ಜೊತೆ ಕೆಲವರು ಕೈಕುಲುಕಿದರೆ ಕೆಲವರು ದೂರದಲ್ಲೇ ಫೋಟೊ ಕ್ಲಿಕ್ಕಿಸಿ ಅಭಿಮಾನವನ್ನು ಪ್ರಕಟಿಸಿದರು. `ತಲೈವಾ’ ಎಂದೇ ಕರೆಯಲಾಗುವ ರಜನೀಕಾಂತ್ ಅಚಾನಕ್ ಆಗಿ ದರ್ಶನ ನೀಡಿದ್ದು
ಸಿನಿಪ್ರಿಯರು `ಥ್ರಿಲ್’ ಆಗುವಂತೆ ಮಾಡಿತು.

