ಕಾಡುಗುಡ್ಡದಲ್ಲಿ ಅಲೆದಾಡಿ ಸುಸ್ತಾದವರಿಗೆ ಬಾಯಾರಿಕೆಯನ್ನು ತಣಿಸುವ ಕೇರಿ ಬಣ್ಣದ ರಸಭರಿತ ಸಿಹಿಯಾದ ಹಣ್ಣೊಂದು ಸಿಗುತ್ತದೆ, ಈ ಹಣ್ಣನ್ನು ಚಾಕಲೇಟ್ನಂತೆ ಚೀಪಬಹುದು. ಚಾಕಲೇಟ್ನಂತೆ ಸಿಹಿಯಾಗಿರುವ ಈ ಹಣ್ಣು ನಿಸರ್ಗದತ್ತವಾಗಿ ಸಿಗುತ್ತಿದ್ದು, ಸದ್ಯ ಇದು ಅಳಿವಿನಂಚಿಲ್ಲಿದೆ. ಈ ಹಣ್ಣನ್ನು ಬೊಲರಾ ಹಣ್ಣೆಂದು ಕರೆಯಲಾಗುತ್ತದೆ.

bolara hannu3 bolara hannu1
ದಕ್ಷಿನ ಕನ್ನಡದ ಕಾಡುಗುಡ್ಡದಲ್ಲಿ ಸಿಗುವ ಈ ಹಣ್ಣು ಕೇಸರಿ ಬಣ್ಣದಿಂದ ಕೂಡಿದೆ. ಚಿಕ್ಕ ಲಿಂಬೆ ಹಣ್ಣಿನಷ್ಟು ದೊಡ್ಡದಿರುವ ಹಣ್ಣಿನ ತಿರುಳು ರಸಭರಿತವಾಗಿದ್ದು ತಿನ್ನಲು ಸಿಹಿಯಾಗಿರುತ್ತದೆ. ಈ ಹಣ್ಣಿನ ಸಿಪ್ಪೆ ತೆಗೆದು ಹಾಗೆಯೇ ಬಾಯಿಗಿಟ್ಟರೆ ಚಾಕಲೇಟ್ ಚೀಪಿದಂತೆ ಟೈಂಪಾಸ್ ಮಾಡಲು ಚೆನ್ನಾಗಿರುತ್ತದೆ. ಚೀಪಿದಷ್ಟೂ ಸಿಹಿಯನ್ನು ನೀಡುವ ಈ ಹಣ್ಣು ಚಿಕ್ಕದಾದರೂ ಮನಸ್ಸಿಗೆ ಸಾಕಷ್ಟು ತೃಪ್ತಿ ನೀಡುತ್ತದೆ.
ಒಂದು ಹಣ್ಣಿನಲ್ಲಿ ಎರಡು ಅಥವಾ ಮೂರು ಬೀಜಗಳಿರುತ್ತದೆ. ಈ ಬೀಜಗಳು ತಿರುಳಿನಿಂದ ಮುಚ್ಚಿರುತ್ತದೆ. ಹಣ್ಣನ್ನು ಚೀಪುತ್ತಾ ಹಾಗೆಯೇ ನುಂಗಿದರೂ ಏನೂ ಆಗುವುದಿಲ್ಲ. ತಿರುಳು ಹಳದಿ ಭಾಗದಿಂದ ಕೂಡಿದ್ದು ಸಾಕಷ್ಟು ಆಕರ್ಷಣೀಯವಾಗಿ ಕಾಣುತ್ತದೆ.
ಈ ಹಣ್ಣಿನ ಗಿಡ ಬಿಳಲಿನಿಂದ ಕೂಡಿರುತ್ತದೆ. ಬಳ್ಳಿಯಲ್ಲಿ ಟಿಸಿಲೊಡೆದು ಹಸಿರು ಬಣ್ಣದ ಕಾಯಿ ಮಾಗಲು ಮೂರು ತಿಂಗಳು ಬೇಕು. ಇದು ವರ್ಷಪೂತರ್ಿ ಹಣ್ಣು ಕೊಡುವ ಸಸ್ಯ. ಯಾರಾದರೂ ಕಾಡಲ್ಲಿ ಸಂಚರಿಸಿದಾಗ ಆಕಸ್ಮತ್ ಆಗಿ ಇದು ಗೋಚರವಾಗುತ್ತದೆ. ಈ ಹಣ್ಣನ್ನು ತಿಂದರೆ ಹುಳದ ಸಮಸ್ಯೆ ಪರಿಹಾರವಾಗುತ್ತದೆ ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಇದರ ಸಿಪ್ಪೆ ಗಡುಸಾಗಿರುವುದರಿಂದ ಹುಳಹುಪ್ಪಟೆಗಳು ಅಷ್ಟು ಸುಲಭವಾಗಿ ಈ ಹಣ್ಣನ್ನು ಮುಟ್ಟುವುದಿಲ್ಲ. ಆದರೆ ಜಾಸ್ತಿ ಮಾಗಿದರೆ ಹುಳಗಳು ತಿನ್ನಲಾರಂಭಿಸುತ್ತದೆ.
ಈ ಹಣ್ಣನ್ನು ಆಯ್ಕೆ ಮಾಡುವಾಗ ಎಚ್ಚರವಹಿಸುವುದು ಸೂಕ್ತ. ಬೊಲಾರಾ ಹಣ್ಣಿನಂತೆಯೇ ಕೆಲವೊಂದು ವಿಷದ ಹಣ್ಣುಗಳಿರುವ ಸಸ್ಯಗಳಿರುತ್ತದೆ. ಆದ್ದರಿಂದ ಎಚ್ಚರ ಅಗತ್ಯ. ಸದ್ಯ ಈ ಸಸ್ಯ ಅಳಿವಿನಂಚಿನಲ್ಲಿದೆ ಎಂಬುದೇ ಬೇಸರದ ವಿಷಯ.

By suddi9

Leave a Reply

Your email address will not be published. Required fields are marked *