ಮುಂಬೈ: ಕರುನಾಡ ಸಿರಿ ಸಂಸ್ಥೆ ವತಿಯಿಂದ ಡಿ.24ರಂದು ಇಲ್ಲಿನ ಮಾಟುಂಗಾ ಪೂರ್ವದ ಭಾವುದಾಜಿ ರಸ್ತೆಯಲ್ಲಿನ ಮೈಸೂರು ಅಸೋಸಿಯೇಶನ್ನ ಕಿರು ಸಭಾಗೃಹದಲ್ಲಿ ‘ಕರುನಾಡ ಸಿರಿ ವಾರ್ಷಿಕ ಸಮ್ಮೇಳನ’ ಬೆಳಗ್ಗೆ 9.30ಕ್ಕೆ ಆಯೋಜಿಸಲಾಗಿದೆ.
ಅಂದು ನಡೆಯುವ ಸಮ್ಮೇಳನದಲ್ಲಿ ಮುಂಬಯಿಯ ಸಮಾಜ ಸೇವಕಾ, ಓರ್ವ ಆದರ್ಶ ಶಿಕ್ಷಕನಾಗಿ ಇತ್ತೀಚೆಗೆ ದಕ್ಷಿಣ ಅಮೇರಿಕ ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ಗೆ ಭಾಜನರಾದ ಎನ್ಕೆಇಎಸ್ ಪ್ರೌಢಶಾಲೆಯ ಅಧ್ಯಾಪಕ ಡಾ. ಅಮರೀಶ್ ಚಂದ್ರಪ್ಪ ಪಾಟೀಲ ಅವರ ಪುಸ್ತಕ ಬಿಡುಗೊಳ್ಳಲಿದೆ. ಅಲ್ಲದೆ, ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಸಮ್ಮೇಳನದ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿವೆ ಎಂದು ಪ್ರಕಟನೆ ತಿಳಿಸಿದೆ.
