ಅದೊಂದು ನಿಜಕ್ಕೂ ಅದ್ಭುತ ಮದುವೆ. ಅಲ್ಲಿ ಎಲ್ಲಾ ಮದುವೆಯಂತೆ ಸಡಗರ-ಸಂಭ್ರಮವಿತ್ತು. ಗಂಡು-ಹೆಣ್ಣಿಗೆ ಧಾರೆ ಎರೆದು ಕೊಡೋ ಮೂಲಕ ಸಂಪ್ರದಾಯಬದ್ದವಾಗಿ ಮದುವೆಯೂ ನಡೆಯಿತು. ಕೊನೆಗೆ ಎಲ್ಲಾ ಮುಗಿದ ಮೇಲೆ ಭರ್ಜರಿ ನಾನ್ ವೆಜ್ ಊಟವೂ ಇತ್ತು. ಆದ್ರೆ ಈ ಮದುವೆ ಮಾತ್ರ ಎಲ್ಲಾ ಮದುವೆಯಂತಲ್ಲ. ಬದಲಾಗಿ ಈ ಮದುವೆಯಲ್ಲೊಂದು ಅಚ್ಚರಿಯಿತ್ತು. ಅಷ್ಟಕ್ಕೂ ಆ ಅಚ್ಚರಿ ಏನೂ ಅಂತೀರಾ? ಹಾಗಿದ್ರೆ ಈ ಸ್ಟೋರಿ ನೋಡಿ.ತಟ್ಟೆಯಲ್ಲಿ ಹೊಚ್ಚ ಹೊಸ ಸೀರೆಯ ಜೊತೆಗೆ ಒಂದಷ್ಟು ಹೂವನ್ನ ಹಿಡಿದು ಕೊಂಡು ನಿಲ್ಲೋ ಮೂಲಕ ವರನ ಮನೆಯತ್ತ ದಿಬ್ಬಣ ಹೊರಟಿರೋ ಇವ್ರೆಲ್ಲಾ ವಧುವಿನ ಕಡೆಯವ್ರು. ಮದುವೆ ಅನ್ನೋ ನೂರಾರು ಜನ್ಮಗಳ ಅಪೂರ್ವ ಬಂಧನಕ್ಕೆ ಸಾಕ್ಷಿಯಾಗೋಕೆ ಅಂತಾನೆ ಇವ್ರೆಲ್ಲಾ ಇಲ್ಲಿಗೆ ಬಂದಿದ್ರು. ದ.ಕ ಜಿಲ್ಲೆಯ ಬಂಟ್ವಾಳ ತಾಲೂಕಿನ ಶಂಬೂರು ಅನ್ನೋ ಗ್ರಾಮದಲ್ಲಿ ಸಂಜೆ ಹೊತ್ತಿನ ಗೋಧೋಳಿ ಮುಹೂರ್ತದಲ್ಲಿ ಮದುವೆ ನಡೆಸೋಕೆ ಸಿದ್ದತೆ ನಡೆಸಲಾಗಿತ್ತು. ಆದ್ರೆ ಈ ಮದುವೆ ಮಾತ್ರ ಅಂತಿಂಥ ಮದುವೆಯಲ್ಲ. ಹಾಗಂತ ಇದು ಜಗತ್ತಿನ ಅತ್ಯಂತ ಅದ್ದೂರಿ ಮದುವೇನಾ ಅಂತ ಅಂದುಕೊಂಡ್ರೂ ಅಲ್ಲವೇ ಅಲ್ಲ. ಹಾಗಿದ್ರೆ ಆ ಮದುವೆಯಲ್ಲಿರೋ ವಿಶೇಷತೆ ಏನೂ ಅಂದ್ರೆ ಆ ಮದುವೆಯಲ್ಲಿ ವಧು-ವರರೂ ಇಬ್ಬರೂ ಇಲ್ಲ. ಅರೆ ಇದೇನಾಪ್ಪ? ವಧು-ವರರೇ ಇಲ್ದೇ ಮದುವೆ ಮಾಡ್ತಾರ ಅಂತ ಅಚ್ಚರಿ ಪಡ್ತಿದೀರಾ. ಹೌದು, ಈ ಮದುವೆಯಲ್ಲಿ ಗಂಡು-ಹೆಣ್ಣು ಇರಲಿಲ್ಲ. ಆದ್ರೆ ಮದುವೆ ಮಾತ್ರ ಹಿಂದೂ ಸಂಪ್ರದಾಯದಂತೆ ವಿಧಿವತ್ತಾಗಿ ನಡೆದು ಹೋಯ್ತು. ಅಸಲಿಗೆ ಇಲ್ಲಿ ನಡೆದಿರೋದಿ ಪ್ರೇತಗಳ ಮದುವೆ. ತುಳುನಾಡಿನ ಸಂಪ್ರದಾಯದಲ್ಲಿ ಸತ್ತವರಿಗೆ ಮದುವೆ ಮಾಡೋ ಸಂಪ್ರದಾಯವಿದ್ದು, ಇದೇ ಕಾರಣಕ್ಕೆ ಇಲ್ಲೂ ಕೂಡ ಸತ್ತ ಜೋಡಿಯೊಂದಕ್ಕೆ ಮದುವೆ ಮಾಡಲಾಯ್ತು.
ಅಸಲಿಗೆ ಈ ಮದುವೆಯನ್ನ ತುಳುನಾಡಿನಲ್ಲಿ ಅಷಾಡ ಅಂದ್ರೆ ಆಟಿ ತಿಂಗಳಲ್ಲಿ ನಡೆಸೋದು ವಾಡಿಕೆ. ಮನೆಯಲ್ಲಿ ಮದುವೆಯಾಗದೇ ಇರೋ ಗಂಡು ಅಥವಾ ಹೆಣ್ಣು ಮೃತರಾಗಿದ್ರೆ, ಅವ್ರು ಅತೃಪ್ತ ಆತ್ಮಗಳಾಗಿ ತೊಂದರೆ ಕೊಡ್ತಾರಂತೆ. ಅಲ್ಲದೇ ಆ ಮನೆಯಲ್ಲಿ ಮತ್ತೊಂದು ಮದುವೆ ಆಗೋದಿದ್ರೂ ಅಂಥವರಿಂದ ತೊಂದ್ರೆ ತಪ್ಪಿದ್ದಲ್ಲವಂತೆ. ಇದೇ ಕಾರಣಕ್ಕೆ ಅಂತಹ ಅತೃಪ್ತ ಆತ್ಮಗಳಿಗೆ ಮದುವೆ ಮಾಡಿಸೋ ಮೂಲಕ ಅವುಗಳನ್ನ ತೃಪ್ತಿಪಡಿಸೋ ಸಂಪ್ರದಾಯ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ. ಇನ್ನು ಈ ಮದುವೆ ಜೀವಂತವಿದ್ದವ್ರ ಮದುವೆಯಂತೆ ವಿಧಿವತ್ತಾಗಿ ನಡೆಯುತ್ತೆ. ಮದುವೆಗೂ ಮುನ್ನ ಒಂದೇ ಜಾತಿಯ ಗಂಡು-ಹೆಣ್ಣಿನ ಹುಡುಕಾಟ ನಡೆದು ಕಂಕಣ ಕೂಡಿ ಬಂದ್ರೆ ನಿಶ್ಚಿತಾರ್ಥವಾಗುತ್ತೆ. ನಂತ್ರ ಸರಿಯಾದ ಸಮಯ ನೋಡಿಕೊಂಡು ಮದುವೆ ಮಾಡಲಾಗುತ್ತೆ. ಈ ವೇಳೆ ಹೆಣ್ಣಿನ ಸೀರೆ ಮತ್ತು ಗಂಡಿನ ಉಡುಗೆಯನ್ನ ಕುರ್ಚಿಯ ಮೇಲಿಟ್ಟು ಧಾರೆ ಎರೆಯೋ ಮೂಲಕ ತಾಳಿ ಕಟ್ಟೋ ಸಂಪ್ರದಾಯವನ್ನ ಕೂಡ ನೆರವೇರಿಸಲಾಗುತ್ತೆ. ಕೊನೆಗೆ ಮದುವೆ ಮುಗಿದ ಮೇಲೆಯೂ ಈ ಎರಡೂ ಕುಟುಂಬಗಳು ಸಂಬಂಧಿಕರಂತೆ ಇದ್ದು, ಪರಸ್ಪರ ಅನ್ಯೋನ್ಯವಾಗಿ ಇರಬೇಕು ಅನ್ನೋದು ವಾಡಿಕೆ. ಇನ್ನು ಈ ಮದುವೆ ವೇಳೆ ಮದುವೆಗೆ ಬಂದವ್ರು ಮುಯ್ಯಿ ಒಪ್ಪಿಸೋ ಸಂಪ್ರದಾಯ ಕೂಡ ಇದೆ. ಕೊನೆಗೆ ಮದುವೆ ಮುಗಿದ ಮೇಲೆ ಭರ್ಜರಿ ಕೋಳಿ ಊಟ ಕೂಡ ಇತ್ತು.
`ಇನ್ನು ಶಂಬೂರಿನಲ್ಲಿ ನಡೆದ ಈ ವಿವಾಹದಲ್ಲಿ ಒಂದಾದ ಜೋಡಿಯ ಹೆಸ್ರು ಕರುಣಾಕರ ಮತ್ತು ಶಕೀಲಾ. ಈ ಇಬ್ಬರೂ ಅನಾರೋಗ್ಯದಿಂದ ಮೃತಪಟ್ಟಿದ್ರು. ಒಟ್ಟಿನಲ್ಲಿ ಬದುಕಿದ್ದಾಗ ವೈವಾಹಿಕ ಜೀವನಕ್ಕೆ ಕಾಲಿಡೋಕೆ ಆಗದೇ ಇದ್ರೂ ಅಂಥವರಿಗೆ ಸತ್ತ ಮೇಲಾದ್ರೂ ಮದುವೆಯ ಸಂಪ್ರದಾಯವನ್ನು ಹಿರಯವರಾದ ನರಿಕೊಂಬು ಗ್ರಾಮದ ಕೋಡಿಬೆಟ್ಟು ಗೋಪಾಲ ಪೂಜಾರಿ ಅವರ ತ್ರತೀಯ ಪುತ್ರ ಕರುಣಾಕರ ಮತ್ತು ಶಂಭೂರು ಶಾಂತಿಲಗುತ್ತು ಮನೆಯ ಸುರೇಂದ್ರ ಪೂಜಾರಿ ಅವರ ದ್ವೀತೀಯ ಪುತ್ರಿ ಶಕೀಲ ಎಂಬ ಹೆಸರಿನ ವದು ವರರಿಗೆ ಮದುವೆ ನೆರವೇರಿಸಿ ವಿಶಿಷ್ಟ ಆಚರಣೆ ನಡೆಸಲಾಯಿತು ಸದ್ಯ ಕರಾವಳಿಯ ತುಳುನಾಡಿನಲ್ಲಿ ಚಾಲ್ತಿಯಲ್ಲಿದೆ.





