ಗುರುಪುರ : ಶ್ರೀ ವರದರಾಜ ಭಜನಾ ಮಂಡಳಿಯಿಂದ ಗುರುಪುರ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನ. 30ರಂದು ಅಹೋರಾತ್ರಿ ಶ್ರೀರಾಮ ಸಂಕೀರ್ತನೆ ಹಾಗೂ ಶ್ರೀ ಗೀತಾ ಜಯಂತಿ ಮಹೋತ್ಸವ ಆರಂಭಗೊಂಡಿತು.
ಈ ಸಂದರ್ಭದಲ್ಲಿ ಪುಷ್ಪಾಲಂಕೃತವಾದ ರಜತ ಲಾಲಕಿ ಉತ್ಸವ, ಶ್ರೀ ರಾಮನಾಥ ದಾಮೋದರ ದೇವಳದಿಂದ ನಜರು ಕಾಣಿಕೆ ಮೆರವಣಿಗೆ ಹಾಗೂ ಮಹಾಪೂಜೆ ನಡೆಯಿತು.
ಡಿ.1ರಂದು ಪ್ರಥಮ ಮುಕ್ಕೋಟಿ ದ್ವಾದಶಿ ಅಂಗವಾಗಿ ಬೆಳಿಗ್ಗೆ ರಜತ ಲಾಲಕಿಯಲ್ಲಿ ಶ್ರೀ ದೇವರ ಫಲ್ಗುಣಿ ನದಿ ಸ್ನಾನ ಮತ್ತು ಪೇಟೆ ಸವಾರಿ ಜರುಗಲಿದೆ. ರಾತ್ರಿ 8 ಗಂಟೆಗೆ ದೇವಸ್ಥಾನದಲ್ಲಿ ಸಣ್ಣ ರಥೋತ್ಸವ ಜರುಗಿತು .
