ಉಡುಪಿ: ದುಷ್ಶಟಗಳು ಮನುಷ್ಯನ್ನುಅನಾರೋಗ್ಯವಂತನಾಗಿ ಮಾಡುದಲ್ಲದೆ ಸಮಾಜದಲ್ಲಿಆತನಘನತೆಯನ್ನು ಕುಸಿಯುವಂತೆ ಮಾಡುತ್ತದೆ ಹೀಗಾಗಿ ಈ ರೀತಿಯ ದುಷ್ಶಟಗಳಿಂದ ಯುವಜನಾಂಗದೂರಯಿರುವುದು ಒಳಿತು ಎಂದುಖ್ಯಾತ ಮಾನಸಿಕ ರೋಗತಜ್ಞರಾದಡಾ|| ವಿರೂಪಾಕ್ಷದೇವರಮನೆ ಹೇಳಿದರು.

ಅವರುಜಯಂಟ್ಸ್ ಬ್ರಹ್ಹಾವರದ ವತಿಯಿಂದ ನಗರದ ಸರ್ಕಾರಿ ಪ.ಪೂಈ ಕಾಲೇಜಿನಎನ್.ಎಸ್.ಎಸ್ ವಿದ್ಯಾರ್ಥಿಗಳಿಗೆ ನಡೆದ ವಿಶೇಷ ವ್ಯಕ್ತಿತ್ವ ವಿಕಸನ ತರಬೇತಿಯಲ್ಲಿ ಮಾತನಾಡಿದರು.ಕುಡಿತದ ಬಗ್ಗೆ ಅನೇಕ ಮೂಡನಂಬಿಕೆಗಳಿವೆ ಇದು ಸಲ್ಲದು,ವಿದ್ಯಾರ್ಥಿಗಳು ಉತ್ತಮ ಹವ್ಯಾಸಗಳನ್ನು ರೂಡಿಸಿಕೊಂಡು ಬರಬೇಕೆ ಹೊರತುಕೆಟ್ಟಚಟ ಬೇಡಎಂದರು.
ಕಾರ್ಯಕ್ರಮದಅದ್ಯಕ್ಷತೆಯನ್ನುಜಯಂಟ್ಸ್ ಫೆಡರೇಶನ್‍ಅದ್ಯಕ್ಷ ಮಧುಸೂಧನ್ ಹೇರೂರು ವಹಿಸಿ ಶುಭ ಹಾರೈಸಿದರು.ವೇದಿಕೆಯಲ್ಲಿ ಉಪನ್ಯಾಸಕ ಪರಮೇಶ್ವರ್,ಹಳೆ ವಿದ್ಯಾರ್ಥಿರಾಘವೇಂದ್ರ ಪ್ರಭುಕರ್ವಾಲು,ಸುಂದರ ಪೂಜಾರಿ,ವಿವೇಕಾನಂದಕಾಮತ್,ವೈದ್ಯಕೀಯ ಪ್ರತಿನಿಧಿ ಸಂಘದ ಶ್ರೀನಾಥ್ ಮುಂತಾದವರಿದ್ದರು.ಉಪನ್ಯಾಸಕಿಅನುರಾಧ ಜಿ ನಿರೂಪಿಸಿದರು.
