ಮುಂಬಯಿ: ಬೊರಿವಲಿ ಪಶ್ಚಿಮದ ಎಲ್‍ಐಸಿ ಕಾಲೊನಿ ನಿವಾಸಿ ಟಿ.ಬಿ ಹುನ್ನೂರು ಪ್ರಸಿದ್ಧಿಯ ತುಳಸಿಗಿರೀಶ್ ಬಾಲರಾಮ ರಾವ್ (72.) ಅವರು ಕಳೆದ ರವಿವಾರ (ಅ.22) ಹೃದಯಾಘಾತದಿಂದ ನಿಧನರಾದರು.T B Rao Hunnooru (A)

ಬಾಗಲಕೋಟೆ ಹುಣ್ಣೂರು ಮೂಲದ ಟಿ.ಬಿ ಹುನ್ನೂರು ಮುಂಬಯಿ ಮಹಾನಗರದ ಹತ್ತಾರು ಸಂಘ ಸಂಸ್ಥೆಗಳ ಪೋಷಕರಾಗಿ ಉದಾರ ದಾನಿಗಳಾಗಿ ಜನಾನುರಾಗಿದ್ದರು. ಪೇಜಾವರ ಮಠ ಮುಂಬಯಿ ಶಾಖೆಯ ಪೂರ್ಣಪ್ರಜ್ಞಾ ವಿದ್ಯಾಪೀಠ ಪ್ರತಿಷ್ಠಾನದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವಾ ನಿರತರಾಗಿದ್ದರು. ಹುನ್ನೂರು ಪರಿವಾರವು ಸದಾ ಧಾರ್ಮಿಕ ಕಾರ್ಯಕ್ರಮಗಳಲ್ಲಿ ತೊಡಗಿಸಿ ಕೊಂಡಿದ್ದ ಹುನ್ನೂರು ಇತ್ತೀಚೆಗ ಷ್ಟೇ ಪರಿವಾರದ ಸೇವಾರ್ಥವಾಗಿ ಲಿಫ್ಟ್ (ಎಲೆವ್ಹೇಟರ್) ಕೊಡ ಮಾಡಿದ್ದರು.

ಮೃತರು ಪತ್ನಿ (ಮಂಜುಳಾ ಟಿ.ಹುನ್ನೂರು) ಎರಡು ಗಂಡು ಸೇರಿದಂತೆ ಅಪಾರ ಬಂಧು ಬಳಗ ಅಗಲಿದ್ದಾರೆ. ತುಳಸಿಗಿರೀಶ್ ನಿಧನಕ್ಕೆ ಪೂರ್ಣಪ್ರಜ್ಞ ವಿದ್ಯಾಪೀಠ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ| ಎ.ಎಸ್ ರಾವ್, ಕಾರ್ಯನಿರತ ಅಧ್ಯಕ್ಷ ಡಾ| ಸುರೇಶ್ ಎಸ್.ರಾವ್ ಕಟೀಲು, ಗೌರವ ಕಾರ್ಯದರ್ಶಿಗಳಾದ ಬಿ.ಆರ್ ಗುರುಮೂರ್ತಿ ಮತ್ತು ಪೆರ್ಣಾಂಕಿಲ ಹರಿದಾಸ್ ಭಟ್, ಗೌರವ ಕೋಶಾಧಿಕಾರಿ ಅವಿನಾಶ್ ಶಾಸ್ತ್ರಿ, ಆಡಳಿತ ವಿಶ್ವಸ್ಥರು, ಕಾರ್ಯಕಾರಿ ಸಮಿತಿ ಸದಸ್ಯರು ಪೇಜಾವರ ಮಠ ಮುಂಬಯಿ ಶಾಖೆಯ ಪ್ರಬಂಧಕರಾ ಪ್ರಕಾಶ ಆಚಾರ್ಯ ರಾಮಕುಂಜ, ರಾಮದಾಸ ಉಪಾಧ್ಯಾಯ ರೆಂಜಾಳ, ಹರಿ ಭಟ್, ನಿರಂಜನ್ ಗೋಗ್ಟೆ, ಉದ್ಯಮಿ ಧನರಾಜ್ ಪುತ್ರನ್ ಮತ್ತಿತರ ಗಣ್ಯರು ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.

By suddi9

Leave a Reply

Your email address will not be published. Required fields are marked *