ಮಂಗಳೂರು: ಮಂಗಳೂರು ಆಸುಪಾಸಿನ ಸಾರ್ವಜನಿಕರಿಗಾಗಿ ತಾರಸಿ ತೋಟ ಕೃಷಿ ತರಬೇತಿ ಶಿಬಿರವನ್ನು ಹೃದಯವಾಹಿನಿ ಕರ್ನಾಟಕ ಸಂಸ್ಥೆಯುಅ. 28 ರಂದು ಶನಿವಾರ ಉರ್ವಸ್ಟೋರ್‍ನಲ್ಲಿ ಏರ್ಪಡಿಸಿರುತ್ತದೆ. ಶಿಬಿರದಲ್ಲಿ ನಿಮ್ಮ ಮನೆಯಲ್ಲಿ ಲಭ್ಯವಿರುವ ಜಾಗದಲ್ಲಿ ಸೊಪ್ಪು, ತರಕಾರಿಗಳನ್ನು, ಹಣ್ಣು ಹಂಪಲು ಹಾಗೂ ಔಷಧಿ ಗಿಡ, ಮರಗಳನ್ನು ಬೆಳೆಯಲು ಸಾಧ್ಯವೆಂಬುದನ್ನು ತಾರಸಿ ತೋಟ ಕೃಷಿ ತಜ್ಞ ಕೃಷ್ಣಪ್ಪ ಗೌಡ ಪಡ್ಡಂಬೈಲು ಅವರು ಶಿಬಿರಾಥಿರ್ಗಳಿಗೆ ತೋರಿಸಿ ಕೊಡಲಿದ್ದಾರೆ ಹಾಗೂ ಮನೆಯಲ್ಲಿ ದೊರೆಯುವ ತ್ಯಾಜ್ಯಗಳಿಂದ ಸಾವಯವ ಗೊಬ್ಬರವನ್ನು ತಯಾರಿಸುವ ಮಾಹಿತಿಯನ್ನು ನೀಡಲಿದ್ದಾರೆ.IMG-20171002-WA0195

ರಾಸಾಯನಿಕ ರಹಿತ ಹಣ್ಣು ಮತ್ತು ತರಕಾರಿಗಳನ್ನು ಮನೆಯಲ್ಲಿಯೇ ಬೆಳೆದು ಉಪಯೋಗಿಸುವುದರಿಂದ ಆರೋಗ್ಯ ವೃದ್ಧಿಗೆ ಹೆಚ್ಚು ಅನುಕೂಲವಾಗುತ್ತದೆ. ಸೀಮಿತ ಜನರಿಗೆ ಮಾತ್ರ ತರಬೇತಿ ಪಡೆಯಲು ಅವಕಾಶ ಇರುವುದರಿಂದ ಮೊದಲು ಹೆಸರು ನೊಂದಾಯಿಸಿ ಕೊಂಡವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹೆಸರು ನೊಂದಾಯಿಸಲು ಕೊನೆಯ ದಿನಾಂಕ: 27.10.2017 ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ದೂರವಾಣಿ 0824-4281531/ 9886510087

By suddi9

Leave a Reply

Your email address will not be published. Required fields are marked *