ಮಂಗಳೂರು: ದೀಪಾ ಕಂಫರ್ಟ್ ಹೋಟೆಲಿನ ಸಭಾಭವನದಲ್ಲಿ   ಸೋಮವಾರ  ಕಾಂಗ್ರೇಸ್ ನಿಂದ  ಬಿಜೆಪಿ  ಪಕ್ಷಕ್ಕೆ ಸೇರುವ ಕುರಿತು  ಸಮಾಜದ ಬಾಂಧವರ ಸಮಾನ ಮನಸ್ಕ ಗೆಳೆಯರ ಜೊತೆ ಸಭೆ ನಡೆಸಿದರು.   ಹಿತೈಷಿಗಳು ಮತ್ತು ಸಮಾಜ ಭಾಂದವರ  ಹರಿಕಷ್ಣ ಬಂಟ್ವಾಳ್  ಅವರಿಗೆ  ನಿಮ್ಮೊಟ್ಟಿಗೆ ನಾವೆಲ್ಲರೂ ಇದ್ದೇವೆ  ಎಂದು ಸಂಫೂರ್ಣ ಬೆಂಬಲ ಸೂಚಿಸಿದರು.

db5d5e55-c839-4505-be7f-7d23f8d55d5d ಈ ಸಂದರ್ಭದಲ್ಲಿ ಮಾತನಾಡಿದ   ಅವರು ಕಾಂಗ್ರೆಸ್ ಪಕ್ಷದಿಂದ ತನಗೆ ಮತ್ತು ಜನಾರ್ದನ ಪೂಜಾರಿಯವರಿಗೆ ಆದ ಅನ್ಯಾಯ,ಅವಮಾನದ ಬಗ್ಗೆ ವಿವರವಾಗಿ ಸಭೆಯ ಮುಂದಿಟ್ಟು ,ಇದರಿಂದ ಬೇಸರಗೊಂಡಿದ್ದೇನೆ .ಅದಕ್ಕಾಗಿ ದೇಶಭಕ್ತಿಯ ಕಿಚ್ಚಿ ನಿಂದ ನಾನು ಬಿಜೆಪಿ ಯನ್ನು ಸೇರ್ಪಡೆಗೊಳ್ಳುತ್ತಿದ್ದೇನೆ ನಿಮ್ಮೆಲ್ಲರ ಸಹಕಾರ ಆಶೀರ್ವಾದ ಬೇಕೆಂದು ಕೇಳಿದಾಗ ಎಲ್ಲರೂ ಚಪ್ಪಾಳೆ ಮೂಲಕ ನಿಮ್ಮೊಟ್ಟಿಗೆ ನಾವೆಲ್ಲರೂ ಇದ್ದೇವೆ ಮುಂದೆ ಸಾಗಿ ಎಂದರು. ಕಾರ್ಯಕ್ರಮದಲ್ಲಿ   ರುಕ್ಮಯ ಪೂಜಾರಿ , ಗಂಗಾಧರ ಪೂಜಾರಿ, ಮೋಹನ್ ಅಮೀನ್  ಎಲ್ಲಾ ತಾಲೂಕು ಬಿಲ್ಲವ ಸಂಘದ   ಮುಕಂಡರು  ,ಬಿರ್ವೆರ್ ಕುಡ್ಲದ ಯುವಕರು,
ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *