ಬಂಟ್ವಾಳ : ರಾಯಿ-ಕೊಯಿಲ-ಅರಳ ಹಿಂದೂ ಧರ್ಮೋತ್ಥಾನ ವೇದಿಕೆ ಟ್ರಸ್ಟ್ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿ ವತಿಯಿಂದ 15ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವು ಸೆ. 30ರಿಂದ ಅ.1ರವರೆಗೆ ಕೊಯಿಲ ಮಾವಂತೂರು ಶ್ರೀ ಮಹಾಗಣಪತಿ ದೇವಸ್ಥಾನದ ಬಳಿ ಶ್ರೀ ಶಾರದಾ ನಗರದಲ್ಲಿ ಜರಗಲಿದೆ.ಸೆ. 30ರಂದು ಬೆಳಗ್ಗೆ ಧ್ವಜಾರೋಹಣ, ವೇ|ಮೂ| ರಾಜಾರಾಮ್ ಭಟ್ ಅವರಿಂದ ಶ್ರೀ ಶಾರದಾ ಮೂರ್ತಿಯ ಪ್ರತಿಷ್ಠೆ , ಭಜನೆ, ಮಧ್ಯಾಹ್ನ ಮಹಾಪೂಜೆ,ಬಳಿಕ ಯಕ್ಷ ಕಲಾ ತಂಡ ಕೊಯಿಲದವರಿಂದ ಯಕ್ಷ ಸಂಕೀರ್ತನೆ, ಸಂಜೆ ರಾಯಿ ಶ್ರೀ ಮಹಾಲಿಂಗೇಶ್ವರ ಬಾಲ ಯಕ್ಷಗಾನ ಕೇಂದ್ರದಿಂದ ಶ್ರೀ ಕೃಷ್ಣ ಲೀಲೆ, ಕಾಳಿಂಗ ಮರ್ಧನ, ಕಂಸ ವಧೆ ಯಕ್ಷಗಾನ ನಡೆಯಲಿದೆ.

ಅ.1ರಂದು ಬೆಳಗ್ಗೆ ಪೂಜೆ, ಭಜನೆ, ಬಳಿಕ ವಿಠಲ ನಾಯಕ್ ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ. ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಅಧ್ಯಕ್ಷತೆ ವಹಿಸಲಿರುವರು. ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಸಂಸ್ಕಾರ ಭಾರತಿ ಜಿಲ್ಲಾ ಸಂಚಾಲಕ ಸೂರ್ಯ ನಾರಾಯಣ ಭಟ್ ಪ್ರಧಾನ ಭಾಷಣ ಮಾಡಲಿರುವರು. ವಿಧಾನ ಪರಿಷತ್ ಸದಸ್ಯರಾದ ಬಿ.ಜೆ. ಪುಟ್ಟಸ್ವಾಮಿ, ಶ್ರೀನಿವಾಸ ಪೂಜಾರಿ ಕೋಟಾ, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು. ಮಧ್ಯಾಹ್ನ ಮಹಾಪೂಜೆ, ಅನ್ನ ಸಂತರ್ಪಣೆ, ಬಳಿಕ ಯಕ್ಷ-ನಾಟ್ಯ-ಹಾಸ್ಯ ವೈಭವ, ಕೃಷ್ಣಾರ್ಪಣಂ ಕಾರ್ಯಕ್ರಮ, ನಾಟ್ಯ ವೈಭವ ಕಾರ್ಯಕ್ರಮ ,ಬಳಿಕ ಶಾರದಾ ಮಾತೆಯ ಶೋಭಾಯಾತ್ರೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.

By Suddi9

Leave a Reply

Your email address will not be published. Required fields are marked *