ಬಂಟ್ವಾಳ: ವಟಪುರ ಕ್ಷೇತ್ರ ಪ್ರತೀತಿಯ ಬಂಟ್ವಾಳ ಶ್ರೀ ತಿರುಮಲ ವೆಂಕಟರಮಣ ದೇವಳದಲ್ಲಿ ಶ್ರೀಶಾರದಾ ಮಾತೆಯನ್ನು ಗುರುವಾರ ಪ್ರತಿಷ್ಠಾಪಿಸುವ ಮೂಲಕ “ಬಂಟ್ವಾಳ ದಸರಾದ ಸುವರ್ಣಮಹೋತ್ಸವ”ಕ್ಕೆ ಚಾಲನೆ ದೊರೆತಿದೆ.
ಸುವರ್ಣಮಹೋತ್ಸವದ ಸಮಿತಿ ಗೌರವಾಧ್ಯಕ್ಷ ಲಕ್ಮ್ಮಣ ಕಾಮತ್ ,ಅಧ್ಯಕ್ಷ ಗೋವಿಂದ ಪ್ರಭು ಸಹಿತ ಪದಾಧಿಕಾರಿಗಳು, ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು,ದೇವಳದ ಮೊಕ್ತೇಸರರು ,ಭಕರು ಉಪಸ್ಥಿತರಿದ್ದರು. ಸುವರ್ಣಮಹೋತ್ಸವದ ಹಿನ್ನಲೆಯಲ್ಲಿ ಶಾರದ ಪ್ರತಿಷ್ಠಾಪನ ಮಂಟಪವನ್ನು ಅತ್ಯಂತ ಸುಂದರ,ಕಲಾತ್ಮಕವಾಗಿ ರಚಿಸಲಾಗಿದೆ.
ಹಾಗೆಯೇ ದೇವಳದ ಒಳಾಂಗಣದಲ್ಲೂ ಫಲಷುಷ್ಪಗಳಿಂದ ಶೃಂಗರಿಸಲಾಗಿದ್ದು,ಭಕ್ತರನ್ನು ಆಕರ್ಷಿಸುತ್ತಿದೆ.ಸುವರ್ಣಮಹೋತ್ಸವದ ಅಂಗವಾಗಿ ಐದು ದಿನಗಳ ಕಾಲ ರಾತ್ರಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಶುಕ್ರವಾರ ಶ್ರೀ ದೇವಿಗೆ ಕಾಶೀ ಮಠಾಧೀಶರಾದ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಸ್ವರ್ಣಾಭರಣ ಸಮರ್ಪಣೆ, ಶ್ರೀ ಶತಚಂಡಿಕಾಯಾಗ ನಡೆಯಲಿದೆ.ಪ್ರತಿದಿನ ದೇವಿಯನ್ನುವಿಶೇಷವಾಗಿಅಲಂಕರಿಸಲಾಗುತ್ತಿದೆ .ಅ.1 ರಂದು ಶೋಭಾಯಾತ್ರೆ ನಡೆಯಲಿದೆ.
