ಫರಂಗಿ ಪೇಟೆ: ಎಸ್ ಡಿ ಪಿ ಐ ಪಿ ಎಫ್ ಐ ಸಂಘಟನೆಗಳನ್ನು ನಿಷೇಧ ಹೇರಬೇಕೆಂದು ಆಗ್ರಹಿಸಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಪ್ರತಿಭಟನಾ ಸಭೆ ಕರೆ ನೀಡಲಾಗಿದ್ದು ರಾಜ್ಯದಾದ್ಯಂತ ಎಲ್ಲಾ ಗ್ರಾಮ ಪಂಚಾಯತ್ ನಲ್ಲೂ ಒಂದೇ ದಿನ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಯಿತು .ಪುದು ಪಂಚಾಯತ್ ನಲ್ಲಿ ಪ್ರತಿಭಟನೆ ನಡೆಸಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ದಲ್ಲಿ ಮಂಗಳೂರು ಮಂಡಲ ಪ್ರದಾನ ಕಾರ್ಯದರ್ಶಿ ಮನೋಜ್ ಆಚಾರ್ಯ ನಾಣ್ಯ , ಉಪಾಧ್ಯಕ್ಷರಾದ ಪ್ರವೀಣ್ ಶೆಟ್ಟಿ , ಪುದು ಶಕ್ತಿ ಕೇಂದ್ರ ಪ್ರದಾನ ಕಾರ್ಯದರ್ಶಿ ದಿನೇಶ್ ಆರ್ ಶೆಟ್ಟಿ ಕೊಟ್ಟಿಂಜ , ಬಂಟ್ವಾಳ ಎ ಪಿ ಎಂ ಸಿ ಸದಸ್ಯ ವಿಠ್ಠಲ್ ಸಾಲ್ಯಾನ್ ಪುದು ಬಿ ಜೆ ಪಿ ಅಧ್ಯಕ್ಷ ಧೀರಜ್ ಮಾರಿಪಳ್ಳ , ಯುವಮೋರ್ಚಾ ಅಧ್ಯಕ್ಷ ಮನೋಜ್ ಮಾರಿಪಳ್ಳ , ಅಶ್ರಫ್ ಫರಂಗಿಪೇಟೆ , ಹನೀಫ್ ಅಮೆಮಾರ್ , ನಾಗೇಶ್ ಕೊಟ್ಟಾರಿ , ಸುಬ್ರಮಣ್ಯ ರಾವ್ , ಲಕ್ಷ್ಮಣ್ ಶೆಟ್ಟಿ ಕುಂಪಣ ಮಜಲು ಎ ಕೆ ಗಿರೀಶ್ ಶೆಟ್ಟಿ , ಕಿರಣ್ ಅರ್ಕುಳ ಮತ್ತಿತರರು ಉಪಸ್ಥಿತರಿದ್ದರು.

