ಬಂಟ್ವಾಳ: ನರಿಕೊಂಬು ಗ್ರಾಮದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಪಡಿತರ ಸಾಮಗ್ರಿಯನ್ನು ಗ್ರಾಮಸ್ಥರು ತಡೆದಿದ್ದು ಆಹಾರ ಇಲಾಖೆಯ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ. 50 ಕೆಜಿ ಯ 14ಗೋಣಿ ಅಕ್ಕಿ ಪತ್ತೆಯಾಗಿದ್ದು ಇದನ್ನು ವಶಪಡಿಸಿದ ತಹಶೀಲ್ದಾರ್ ಪುರಂಧರ ಹೆಗ್ಡೆ ನೇತೃತ್ವದ ತಂಡ ಪ್ರಕರಣ ದಾಖಲಿಸಿ ನಗರ ಠಾಣೆಗೆ ಹಸ್ತಾಂತರ ಮಾಡಿದೆ. ಆಹಾರ ನಿರೀಕ್ಷಕ ಶ್ರೀನಿವಾಸ್, ಗ್ರಾಮಲೆಕ್ಕಾಧಿಕಾರಿ ನಾಗರಾಜ್, ತಾಲೂಕು ಕಛೇರಿ ಸಿಬ್ಬಂದಿಗಳಾದ ಸದಾಶಿವ ಕೈಕಂಬ, ಶೀತಲ್, ಶಿವಪ್ರಸಾದ್, ಸುಂದರ್, ಲಕ್ಷ್ಮಣ್ ಕಾರ್ಯಾಚರಣೆಯಲ್ಲಿದ್ದರು. ನಗರ ಠಾಣಾಧಿಕಾರಿ ರಕ್ಷತ್ ಗೌಡ ಪ್ರಕರಣ ದಾಖಲಿಸಿದ್ದು ತನಿಖೆ ನಡೆಸುತ್ತಿದ್ದಾರೆ. IMG-20170802-WA0268

By Suddi9

Leave a Reply

Your email address will not be published. Required fields are marked *