ಬಂಟ್ವಾಳ: ಮಹಿಳೆಯರು ಸೌಂದರ್ಯದ ಜೊತೆಯಲ್ಲಿ ಆರೋಗ್ಯದ ಕಡೆಗೂ ಹೆಚ್ಚಿನ ಗಮನ ಹರಿಸಬೇಕಾಗಿದೆ. ಯಾಕೆಂದರೆ ತಾಯಂದಿರ ಆರೋಗ್ಯ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀಳತ್ತದೆ. ಈ ದೃಷ್ಟಿಯಿಂದ ಮಹಿಳೆಯರು ಹೆಚ್ಚು ಪೌಷ್ಟಿಕ ಆಹಾರವನ್ನು ಸೇವಿಸಬೇಕು ಎಂದು ಪುರಸಭಾ ಅಧ್ಯಕ್ಷ ರಾಮಕೃಷ್ಣ ಆಳ್ವ ಹೇಳಿದರು. ಅವರು ಮಹಿಳಾ ಮತ್ತಯ ಮಕ್ಕಳ ಅಭಿವೃದ್ದಿ ಇಲಾಖೆ ಮತ್ತು ರೋಟರಿ ಕ್ಲಬ್ ಬಂಟ್ವಾಳ , ರೋಟರಿ ಆನ್ಸ್ ಕ್ಲಬ್ ಬಂಟ್ವಾಳ ಇವರ ವತಿಯಿಂದ ನಡೆದ ಪಂಜಿಕಲ್ಲು ವಲಯ ಮಟ್ಟದ ಸ್ತನ್ಯ ಪಾನ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 
ತಾಯಿ ಮಗುವಿನ ಉತ್ತಮ ಆರೋಗ್ಯಕ್ಕಾಗಿ ಹಸುವಿನ ಹಾಲನನು ಉಪಯೋಗಿಸಿ ಎಂದರು. ಜೊತೆಗೆ ಇಲಾಖೆಯ ಜೊತೆ ನಿರಂತರ ಸಂಪರ್ಕದಲ್ಲಿ ಸರಕಾರದ ಸವಲತ್ತುಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಕ್ಲಬ್ನ ಅಧ್ಯಕ್ಷ ಸಂಜೀವ ಪೂಜಾರಿ ವಹಿಸಿದ್ದರು. ವೇದಿಕೆಯಲ್ಲಿ ರೋಟರಿ ಆನ್ಸ್ ನ ನಿಕಟಪೂರ್ವ ಅಧ್ಯಕ್ಷೆ ಡಾ| ಶಶಿಕಲಾ ಸೋಮಾಯಾಜಿ, ವೈದ್ಯಾಧಿಕಾರಿ ಡಾ| ವಾಣಿಶ್ರೀ, ತಾ.ಪಂ.ಸದಸ್ಯೆ ಮಲ್ಲಿಕಾ ವಿ ಶೆಟ್ಟಿ, ರೋಟರಿ ಕ್ಲಬ್ನ ಕಾರ್ಯದರ್ಶಿ ನಾರಾಯಣ ಹೆಗ್ಡೆ ಮತ್ತು ರೋಟರಿ ಆನ್ಸ್ ನ ನಿಯೋಜಿತ ಅಧ್ಯಕ್ಷೆ ಗೌರಿ ಶೆಣ್ಯೆ ಉಪಸ್ಥಿತರಿದ್ದರು. ಹಿರಿಯ ಮೇಲ್ವಿಚಾರಕಿ ಗಾಯತ್ರಿ ಕಂಬಳಿ ಸ್ವಾಗತಿಸಿ ಅಂಗನವಾಡಿ ಕಾರ್ಯಕರ್ತೆ ಪ್ಲೇವಿ ಡಿಸೋಜ ವಂದಿಸಿದರು
