ಸುದ್ದಿ9ಮೂಡಬಿದಿರೆ:ಉಷ್ಣ ವಿದ್ಯುತ್ ಸ್ಥಾವರ ವಿರೋಧಿಸಿ ಮೂಡುಬಿದರೆಯಲ್ಲಿ ಪಂಜಿನ ಮೆರವಣಿಗೆ
ಮೂಡುಬಿದರೆ : ನಿಡ್ಡೋಡಿ ಗ್ರಾಮದಲ್ಲಿ ಸಕರ್ಾರ ಮಾಡಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರವನ್ನು ವಿರೋಧಿಸಿ ನಿಡ್ಡೋಡಿ ಮಾತೃಭೂಮಿ ಸಂರಕ್ಷಣಾ ಸಮಿತಿ ವತಿಯಿಂದ ಮೂಡುಬಿದರೆಯಲ್ಲಿ ಶನಿವಾರ ರಾತ್ರಿ ಪಂಜಿನ ಮೆರವಣಿಗೆ ನಡೆಯಿತು.
ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್ ಸ್ಥಾವರ ಮಾಡಿದಲ್ಲಿ ಅಲ್ಲಿನ ಕೃಷಿ ಮತ್ತು ಕೃಷಿಕರಿಗೆ ತೊಂದರೆಯಾಗುತ್ತದೆ. ಆದ್ದರಿಂದ ಈ ಯೋಜನೆಯನ್ನು ಕೈಬಿಡಿ ಇಲ್ಲದಿದ್ದರೆ ತೀವ್ರ ಹೋರಾಟದ ಎಚ್ಚರಿಕೆಯನ್ನು ನೀಡುವ ಮೂಲಕ ಈ ಪಂಜಿನ ಮೆರವಣಿಗೆಯನ್ನು ಆಯೋಜಿಸಿ ಮೂಡುಬಿದರೆ ತಹಸೀಲ್ದಾರ್ ಅವರ ಅನುಪಸ್ಥಿತಿಯಲ್ಲಿ ಸಿಬಂದಿ ರಾಮಚಂದ್ರ ರಾವ್ ಅವರಿಗೆ ಸಮಿತಿಯ ವತಿಯಿಂದ ಮನವಿ ಸಲ್ಲಿಸಲಾಯಿತು.
ಮೂಡುಬಿದರೆ ಸ್ವಾರಾಜ್ಯ ಮೈದಾನದಿಂದ ಹೊರಟ ಮೆರವಣಿಗೆಯು ಪೇಟೆಯ ಮೂಲಕ ಸಾಗಿ ತಹಸೀಲ್ದಾರ್ ಕಚೇರಿಗೆ ಆಗಮಿಸಿತ್ತು. ಮೆರವಣಿಗೆಯಲ್ಲಿ ಸುಮಾರು 2ಸಾವಿರದಷ್ಟು ಜನರು ಭಾಗವಹಿಸಿದ್ದರು.
ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಫೋನ್ಸ್ ಡಿ”ಸೋಜಾ, ಗೌರವಾಧ್ಯಕ್ಷ ಜಗನಾಥ್ ಶೆಟ್ಟಿ, ಉಪಾಧ್ಯಕ್ಷ ಭಾಸ್ಕರ್ ದೇವಸ್ಯ,ಭುವನಾಭಿರಾಮ ಉಡುಪ, ಕೆ.ಪಿ.ಸುಚರಿತ ಶೆಟ್ಟಿ, ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದಶರ್ಿ ಯಾದವಶೆಟ್ಟಿ, ಕಾರ್ಯದಶರ್ಿ ವಿನೋದರ್ ಸುವರ್ಣ, ರವಿಪೂಜಾರಿ ತೊಡಂಕಿಲ, ಸುಧಾಕರ ಸುವರ್ಣ, ಗಿರೀಶ್ ಕೊಂಚಾಡಿ ಮತ್ತಿತರರು ಭಾಗವಹಿಸಿದ್ದರು.


