ಬಂಟ್ವಾಳ:ಉತ್ತಮ ಶಿಕ್ಷಣಕ್ಕಾಗಿ ಸರಕಾರ ಹೆಚ್ಚಿನ ಆದ್ಯತೆ ನೀಡುತ್ತಿದ್ದು,ಸರಕಾರದ ಸವಲತ್ತನ್ನು ಸದ್ಬಳಕೆ ಮಾಡಿಕೊಂಡು ಉತ್ತಮ ಶಿಕ್ಷಣ ಪಡೆಯ ಬೇಕು ಎಂದು ವಿದ್ಯಾಂಗ ಉಪ ನಿರ್ದೇಶಕರ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ಪುರುಷೋತ್ತಮ ಅವರು ಹೇಳಿದರು.
ಬಂಟ್ವಾಳ ತಾಲೂಕು ಉಳಿ ಕಕ್ಯಪದವು ಶ್ರೀ ಪಂಚದುರ್ಗಾ ಪರಮೇಶ್ವರಿ ಪ್ರೌಢಶಾಲೆಯಲ್ಲಿ ಸರಕಾರ ಕೊಡಮಾಡಿದ ಉಚಿತ ಸೈಕಲ್‍ನ್ನು ವಿದ್ಯಾರ್ಥಿಗಳಿಗೆ ವಿತರಿಸಿ ಅವರು ಮಾತನಾಡಿದರು.

ಶಾಲಾ ಸಂಚಾಲಕ ಜಾರಪ್ಪ ಶೆಟ್ಟಿ ಖಂಡಿಗೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳು ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಬೇಕೆಂದು ಹೇಳಿದರು.ಉಳಿ ವ್ಯ.ಸೇ.ಬ್ಯಾಂಕ್ ಅಧ್ಯಕ್ಷ ಎ.ಚೆನ್ನಪ್ಪ ಸಾಲ್ಯಾನ್,ಕಕ್ಯಪದವು ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಯು.ದಾಮೋದರ್ ನಾಯಕ್,ತಾ.ಪಂ.ಸದಸ್ಯೆ ಬೇಬಿ ಕೃಷ್ಣಪ್ಪ,ಗ್ರಾ.ಪಂ.ಉಪಾಧ್ಯಕ್ಷ ಸುರೇಶ್ ಮೈರ,ಸದಸ್ಯರಾದ ಚಿದಾನಂದ ರೈ ಕಕ್ಯ,ವಿಶಾಲಾಕ್ಷಿ ಸುಧೆಕಾರ್,ಸುಂದರಿ,ಗುಲಾಬಿ,ಶಾಂತಾ ಜೆ.,ಎ.ಸಂಜೀವ ಗೌಡ ಅಗ್ಪಲ,ಕಕ್ಯಬೀಡು ದೇವಸ್ಥಾನದ ಉತ್ಸವ ಸಮಿತಿ ಉಪಾಧ್ಯಕ್ಷ ವಿಶ್ವನಾಥ ಸಾಲ್ಯಾನ್ ಬಿತ್ತ,ರಾಮಯ್ಯ ಭಂಡಾರಿ,ವೀರೇಂದ್ರ ಕುಮಾರ್ ಜೈನ್,ಕಾಡುಮಠ ಪ್ರೌಢ ಶಾಲೆಯ ಮುಖ್ಯ ಶಿಕ್ಷಕಿ ಬಬಿತಾ ಅವರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕ ಜಗನ್ನಾಥ ಶೆಟ್ಟಿ ಅವರು ಸ್ವಾಗತಿಸಿದರು.ಶಿಕ್ಷಕ ಚಂದ್ರಶೇಖರ ದಾಮ್ಲೆ ವಂದಿಸಿದರು.ಭೀಮಾನಾಯ್ಕ್ ಹಾಗೂ ಚಂದ್ರಶೇಖರ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
