ಬಂಟ್ವಾಳ: ಜುಲೈ,20: ವ್ಯಕಿಯ ಮಾನಸಿಕ ದೈಹಿಕ ಮತ್ತು ಶಾರೀರಿಕ ಬೆಳವಣಿಗೆಗೆ ಶಾಖೆಯು ಮೂಲಮಂತ್ರ. ಶಾಖೆಯ ಮೂಲಕ ಒಂದು ಸಂಘಟನೆಗಟ್ಟಿಯಾಗುವುದಲ್ಲದೆ ನಮ್ಮಜೀವನದಲ್ಲಿ ಸಾಮರಸ್ಯ ಕಂಡುಕೊಳ್ಳಲು ಸಾಧ್ಯವಾಗುತ್ತದೆಎಂದುರಾಷ್ಟ್ರ ಸೇವಿಕಾ ಸಮಿತಿಯ ಮಂಗಳೂರು ವಿಭಾಗದ ಸಹಕಾರ್ಯವಾಹಿಕ ಶ್ರೀಮತಿ ಕಲ್ಪನಾ ಭಟ್‍ಹೇಳಿದರು.ಅವರು ಶ್ರೀರಾಮಕಾಲೇಜಿನಲ್ಲಿ ಸಮಿತಿಯಗುರುಪೂಜಾಉತ್ಸವದಲ್ಲಿ ಪಾಲ್ಗೊಂಡುಬೌದ್ಧಿಕ್ ನೀಡಿದರು.
ವೇದಿಕೆಯಲ್ಲಿ ರಾಷ್ಟ್ರ ಸೇವಿಕಾ ಸಮಿತಿಯ ಹೊಯ್ಸಳ ಪ್ರಾಂತದ ಸಹಸಂಚಾಲಿಕ ಡಾ|ಕಮಲಾ ಪ್ರಭಾಕರ್ ಭಟ್ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿಒಟ್ಟು 900 ಸೇವಿಕೆಯರು ಭಾಗವಹಿಸಿದ್ದು ತೇಜಸ್ವಿನಿ ಬಿ.ವಿಮುಖ್ಯಶಿಕ್ಷಕಿಯಾಗಿದ್ದರು. ವಿನುತಾಲಕ್ಷ್ಮೀ ಸ್ವಾಗತಿಸಿ,ಶೋಭಾ ವಿ ಶೆಟ್ಟಿ ವಂದಿಸಿದರು.
