ಜುಲೈ.13 : ಶಿಕ್ಷಣ ನಿರಂತರವಾದ ಪ್ರಕ್ರಿಯೆಯಾಗಿದ್ದು ಅದಕ್ಕೆ ಕೊನೆ ಎಂಬುದು ಇಲ್ಲ. ಬುದ್ಧಿವಂತಿಕೆಯಿಂದ ಪಡೆಯುವ ಶಿಕ್ಷಣ ತರಗತಿಯಲ್ಲಿ ಪಡೆಯುವ ಶಿಕ್ಷಣಕ್ಕಿಂತ ಶ್ರೇಷ್ಠವಾದುದು ಎಂದು ಶ್ರೀ ರಾಮಕುಂಜೇಶ್ವರ ಕಾಲೇಜು ರಾಮಕುಂಜ ಇಲ್ಲಿನ ಉಪನ್ಯಾಸಕ ಕೃಷ್ಣಮೂರ್ತಿ ಅಭಿಪ್ರಾಯಪಟ್ಟರು. ಅವರು ಶ್ರೀರಾಮ ಪ್ರಥಮದರ್ಜೆ ಮಹಾವಿದ್ಯಾಲಯ ಕಲ್ಲಡ್ಕ ಇಲ್ಲಿನ ರಾಷ್ಟ್ರೀಯ ಸೇವಾಯೋಜನೆಯ 2017-18ರ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು.WP_20170713_15_16_07_Pro

ಪ್ರಸ್ತುತ ಯುವ ಜನಾಂಗ ಗೊತ್ತು ಗುರಿ ಇಲ್ಲದೆ ಸಾಗುತ್ತಿದ್ದು ಸಹಜವಾದ ಮೌಲ್ಯಗಳನ್ನು ಮರೆತಿದೆ. ಅತಿಥಿಸತ್ಕಾರ, ಸಂಘಜೀವನ ಹಿರಿಯರಿಗೆ ಗೌರವ ಕೊಡುವುದು ಮುಂತಾದ ಮೌಲ್ಯಗಳನ್ನು ಮರೆಯುತ್ತಿದ್ದು ಇದನ್ನು ಮತ್ತೆ ಯುವಜನತೆಗೆ ತಲುಪಿಸುವಲ್ಲಿ ರಾಷ್ಟ್ರೀಯ ಸೇವಾಯೋಜನೆ ಪ್ರಯತ್ನಿಸುತ್ತಿದೆ ಎಂದರು. ರಾಷ್ಟ್ರೀಯ ಸೇವಾ ಯೋಜನೆಯ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೆ ವೇದಿಕೆ ಒದಗಿಸಿದ್ದು ವಿದ್ಯಾರ್ಥಿಗಳಲ್ಲಿ ಧೈರ್ಯ, ಕಠಿಣ ಪರಿಸ್ಥಿತಿ ಎದುರಿಸುವ ಸಾಮಥ್ರ್ಯ ಸಹಾಯ ಮಾಡುವ ಗುಣ ಸ್ವಾವಲಂಬನೆಯೆ ಮೊದಲಾದ ಗುಣಗಳನ್ನು ಬೆಳೆಸುತ್ತದೆ ಎಂದರು.ಸಮಾರಂಭದಲ್ಲಿ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ವಸಂತಮಾಧವ ಉಪಸ್ಥಿತರಿದ್ದರು. ಸೇವೆ ಮನುಷ್ಯನ ಸಹಜವಾದ ಸ್ವಭಾವವಾಗಿದ್ದು ಸ್ವಾರ್ಥರತಹಿತವಾದ ಸೇವೆಯನ್ನು ಮಾಡಿದರೆ ಅದರ ಮೌಲ್ಯ ಹೆಚ್ಚಾಗುತ್ತದೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಕೃಷ್ಣಪ್ರಸಾದ ಕಾಯರಕಟ್ಟೆ ವಹಿಸಿ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ವೇದಿಕೆಯಲ್ಲಿ ಉಪನ್ಯಾಸಕರಾದ ಹರೀಶ್.ಎ ಮತ್ತು ಸುನಿತಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ವರದರಾಜ್ ಕಾರ್ಯಕ್ರಮ ನಿರೂಪಿಸಿ, ಚಿನ್ಮಯ್ ಸ್ವಾಗತಿಸಿ, ಸಂತೋಷ್ ಕುಮಾರ್ ಇವರು ಧನ್ಯವಾದ ಸಮರ್ಪಿಸಿದರು. ಮಂಜುನಾಥ್ ವೈಯಕ್ತಿಕ ಗೀತೆ ಹಾಡಿದರು.

By suddi9

Leave a Reply

Your email address will not be published. Required fields are marked *