ಪೊಳಲಿ: ಕೇಂದ್ರ ಸರಕಾರದ ಸಾಧನೆಗಳನ್ನು ಮತ್ತು ಸರಕಾರದ ವಿವಿಧ ಯೋಜನೆಗಳನ್ನು ಗ್ರಾಮೀಣ ಜನರಿಗೂ ತಲುಪಬೇಕೆಂಬ ಉದ್ದೇಶದಿಂದ ಭಾಜಪ ರಾಷ್ಟ್ರವ್ಯಾಪಿ ಪಂ .ದೀನದಯಾಳ್ ಉಪಾದ್ಯಾಯ ಜನ್ಮಶತಾಬ್ದಿ ಮಹಾಸಂಪರ್ಕ ಅಭಿಯಾನ ಹಮ್ಮಿಕೊಂಡಿದ್ದು ಇದರಂತೆ ಭಾರತೀಯ ಜನತಾ ಪಕ್ಷದ ನಾಯಕರಿಂದ ಹಿಡಿದು ಬೂತ್ ಮಟ್ಟದ ಕಾರ್ಯಕರ್ತರು ಮನೆ ಮನೆಗೆ ಭೇಟಿ ನೀಡಿ ಜನರೊಂದಿಗೆ ಬೆರೆತು ಕೇಂದ್ರ ಸರಕಾರದ ಸಾಧನೆಗಳನ್ನು ಮತ್ತು ರಾಜ್ಯ ಸರಕಾರದ ವೈಫಲ್ಯಗಳನ್ನು ಜನರಿಗೆ ಮನಮುಟ್ಟುವಂತೆ ತಿಳಿಸಿಕೊಡುವ ವಿನೂತನ ಕಾರ್ಯಕ್ರಮ ಇದಾಗಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

4vp kariyangala ವಿಸ್ತಾರಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಭಾಜಪ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋಶಾಧಿಕಾರಿ ಕಿರಣ್ ರೈ ” ಈ ಅಭಿಯಾನವು ದೇಶವ್ಯಾಪಿಯಾಗಿದ್ದು ವಿಸ್ತಾರಕರರೆಲ್ಲರೂ 15 ದಿನಗಳ ಕಾಲ ಗ್ರಾಮದಲ್ಲೆ ವಾಸ್ತವ್ಯ ಹೂಡಿ ಮನೆಮನೆ ಭೇಟಿ ಜೊತೆಗೆ ಅಂಗನವಾಡಿ, ಇನ್ನಿತ್ತರ ಸ್ವ ಸಹಾಯ ಗುಂಪಿನ ಸದಸ್ಯರ ಜೊತೆ ಸಭೆ ನಡೆಸಿ, ಕೇಂದ್ರ ಸರಕಾರದ ಯಾವ ಯೋಜನೆಗಳು ಜನರಿಗೆ ತಲುಪುತ್ತಿಲ್ಲ ಎಂಬುದರ ವರದಿ ಸಿದ್ದಪಡಿಸಿ ಆಯಾ ಯೋಜನೆಗಳು ಜನರಿಗೆ ತಲುಪಿಸುವತ್ತ ಮನಸ್ಸು ಮಾಡಿದ್ದೇವೆ” ಎಂದು ಸುದ್ದಿ9ಗೆ  ತಿಳಿಸಿದರು.



4 vp kariyangal 1ಈ ಮಹಾಸಂಪರ್ಕ ಅಭಿಯಾನಕ್ಕೆ ಕರಿಯಂಗಳ ಗ್ರಾಮದಲ್ಲಿ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು ಎಲ್ಲರಿಗೂ ಭಾಜಪ ದ ಮೇಲೆ ವಿಶ್ವಾಸವಿದೆ ಎಂದು ವಿಸ್ತಾರಕರು ತಿಳಿಸಿದರು.
ಕರಿಯಂಗಳ ಗ್ರಾಮ ವಿಸ್ತಾರಕರಾಗಿ ಭಾಜಪ ಮಂಗಳೂರು ದಕ್ಷಿಣ ಕೋಶಾಧಿಕಾರಿ ಕಿರಣ್  ರೈ , ಮಹಿಳಾ ಮೋರ್ಚಾದ ಕಾರ್ಯದರ್ಶಿ ಹರಿಣಿ ವಿಜೇಂದ್ರ , ಉಪಾಧ್ಯಕ್ಷೆ ಪ್ರಭಾ ರಾಜೇಶ್ ಕೊಟ್ಟಾರಿ , ಮಂಗಳೂರು ದಕ್ಷಿಣ ಶಕ್ತಿ ಕೇಂದ್ರದ ಗಣೇಶ್ , ಸ್ನೇಹಾ ಹೇಮಂತ್ , ಜಪ್ಪಿನಮೊಗರು ವಾರ್ಡ ಕಾರ್ಯದರ್ಶಿ ಸುಮತಿ , ಕರಿಯಂಗಳ ಗ್ರಾ.ಪಂ.ಅಧ್ಯಕ್ಷೆ ಚಂದ್ರಾವತಿ , ಸದಸ್ಯ ಸುರೇಶ್ ಮಣಿಕಂಠಪುರ,ಲೋಕೇಶ್ ಭರಣಿ , ಶಕುಂತಲಾ ಭಾಜಪ ಕರಿಯಂಗಳ ಯುವ ಮೋರ್ಚ ಕಾರ್ಯಕರ್ತ ನಿತಿನ್ ಮತ್ತಿತ್ತರಿದ್ದರು.

By Suddi9

Leave a Reply

Your email address will not be published. Required fields are marked *