ದಿನಾಂಕ: 05-04-2014ರಂದು ಪ್ರಜ್ಞೆ ಇಲ್ಲದೆ ಸುಮಾರು 45 ವರ್ಷ ಪ್ರಾಯದ ಗಂಡಸನ್ನು ಬಿಸಿರೋಡು ಎಂಬಲ್ಲಿಂದ 108 ಅಂಬುಲೆನ್ಸ್ ನವರು ಜಿಲ್ಲಾ ವೆನ್ಲಾಕ್ ಆಸ್ಪತ್ರೆಗೆ ತಂದು ದಾಖಲು ಮಾಡಿರುತ್ತಾರೆ. ಸದ್ರಿಯವರು ಚಿಕಿತ್ಸೆ ಪಲಕಾರಿಯಾಗದೆ ದಿನಾಂಕ: 18-05-2014 ರಂದು ಮೃತಪಟ್ಟಿರುತ್ತಾರೆ. ಸದ್ರಿಯವರ ವಾರಿಸುದಾರರು ಈವರೆಗೆ ಪತ್ತೆಯಾಗಿರುವುದಿಲ್ಲ. ವಾರಿಸುದಾರರು ಪತ್ತೆಯಾದರೆ ಬಂಟ್ವಾಳ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಲು ಕೋರಲಾಗಿದೆ.
1) ಪ್ರಾಯ: ಸುಮಾರು 45 ವರ್ಷ
2) ಎತ್ತರ: ಸುಮಾರು 5″7′ ಅಡಿ
3) ಬಣ್ಣ: ಗೋದಿ ಮೈ ಬಣ್ಣ
4) ಧರಿಸಿದ ಬಟ್ಟೆ: ಬ್ಲೂ ಕಲರ್ ಟೀ ಶರ್ಟ್ , ಸ್ಲೇಟ್ ಕಲರ್ ಪ್ಯಾಂಟು
ಬಂಟ್ವಾಳ ನಗರ ಪೊಲೀಸ್ ಠಾಣೆ (ದೂರವಾಣಿ 08255-232111), ಪೊಲೀಸ್ ವೃತ್ತ ನಿರೀಕ್ಷಕರು ಬಂಟ್ವಾಳ ವೃತ್ತ (ದೂರವಾಣಿ 08255-235000) ಸಂಪರ್ಕಿಸುವರೇ ಕೋರಲಾಗಿದೆ.
ಸಹಿ/-
ಪೊಲೀಸ್ ಉಪ ನಿರೀಕ್ಷಕರು
ಬಂಟ್ವಾಳ ನಗರ ಪೊಲೀಸ್ ಠಾಣೆ

