ಕೈಕಂಬ:ಹಿಂದು ಧರ್ಮ-ಸಂಸ್ಕೃತಿ -ಸಂಸ್ಕಾರಗಳ ದಮನಕ್ಕೆ ಆಕ್ರಮಗಳು ನಡೆಯುತ್ತಿವೆ. ಮೂಲ ನಂಬಿಕೆಗಳನ್ನೇ ಮೂಡನಂಬಿಕೆಗಳೆಂದು ಪ್ರತಿಬಿಂಬಿಸಿ ರಾಜಕೀಯ ಪ್ರೇರಿತ ಆಡಳಿತದ ದಬ್ಬಾಳಿಕೆಗೆ ಪ್ರಯತ್ನ ನಡೆದಿದೆ. ಮನೆ ಮನೆಗಳಲ್ಲಿ ಸಂಸ್ಕಾರ ಜಾಗೃತಿ ಮೂಡಿಸುವುದು ಹಿರಿಯರ ಕರ್ತವ್ಯ ನಂಬಿಕೆಯು ನೆಲೆಗಟ್ಟಿದ ಜೀವನ ಪದ್ಧತಿಯೇ ಹಿಂದೂ ಧರ್ಮ ಹಿಂದುಗಳ ಹಾಗೂ ಧರ್ಮದ ಮೇಲೆ ರಾಕ್ಷಸೀ ಪ್ರವೃತ್ತಿಯ ದಾಳಿ-ಘಾಸಿಗಳಾದಾಗ ಸಂಘಟಿತ ಹೋರಾಟ ನಡೆಯುವುದು. ಸಮಾಜದಲ್ಲಿ ಸಂಘರ್ಷವಿಲ್ಲದೆ ಸಾಂತ್ವಾನ- ಸಾಮರಸ್ಯದ ಬದುಕು ಕಾಣುವುದೇ “ರಾಮತಾರಕಯಾಗ’ದ ಸದುದ್ದೇಶ ಜತೆಗೆ ಅೈಂಬುಲೆನ್ಸ್ ಲೋಕಾರ್ಪಣೆ ಮಾನವೀಯ ಮೌಲ್ಯದ ಉತ್ತಮ ಧೈಯವುಳ್ಳ ಸತ್ಕಾರ್ಯ ಎಂದು ಶ್ರೀ ರಾಮ ವಿದ್ಯಾ ಸಂಸ್ಥೆ ಕಲ್ಲಡ್ಕ ಇದರ ಅಧ್ಯಕ್ಷ ಡಾ. ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.01

ಅವರು ಭಾನುವಾರ ಎಡಪದವು ಶ್ರೀ ರಾಮಮಂದಿರ ಇದರ ಆಶ್ರಯದಲ್ಲಿ ಶ್ರೀ ರಾಮ ಮಂದಿರ ಹಾಗೂ ಬಜರಂಗದಳ ಇವರ ಜಂಟಿ ಸಹಬಾಗಿತ್ವದಲ್ಲಿ ಜರುಗಿದ ‘ ಶ್ರೀ ರಾಮ ತಾರಕ ಯಾಗ’ ಹಾಗೂ ಶ್ರೀ ರಾಮ ರಕ್ಷೆ’ ಅಂಬುಲೆನ್ಸ್ ವಾಹನದ ಲೋಕರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

03
ಕೇಮಾರು ಶ್ರೀ ಸಾಂದೀಪನೀ ಸಾಧನಾಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನವಿತ್ತು ಮಾತನಾಡಿ ‘ಸಾಮಾಜಿಕಕಳಕಳಿಯ ಸಾಮೂಹಿಕ ಹಿತಚಿಂತನೆಯ ಕಾರ್ಯ ಯಶಸ್ವಿಯಾಗುತ್ತದೆ.ಕುಟುಂಬಿಕ ಆಚರಣೆಗಳಲ್ಲಿ ಸಂಸ್ಕಾರ ಕ್ಷೀಣಿಸುತ್ತಿದೆ. ಮಕ್ಕಳಿಗೆ ಸಂಸ್ಕಾರ-ಸಂಸ್ಕೃತಿಯ ಜಾಗೃತಿ ಮೂಡಿಸಬೇಕಾದ ಜವಾಬ್ದಾರಿ ಇರುವವರೇ ಅವುಗಳಿಂದ ದೂರವಿದ್ದಾರೆ. ಶ್ರೀ ರಾಮ ತಾರಕಯಾಗದಿಂದ ಮನಶಾಂತಿ ಹಾಗೂ ಸ್ವಾಸ್ಯಪೂರ್ಣ ಸಮಾಜಕ್ಕೆ ಪೂರಕ ಎಂದರು.

02
ಗುರುಪುರ ವಜ್ರದೇಹಿ ಶ್ರೀ ರಾಜಶೇಖರಾನಂದಸ್ವಾಮೀಜಿ ಅವರು’ಮಂದಿರದ ಮೂಲಕ ಮಾನವ ಕಲ್ಯಾಣದ ಯೋಜನೆಗಳ ಸಕಾರಗೊಳಿಸುವ ಪ್ರಯತ್ನ ಶ್ಲಾಘನೀಯ’ ಎಂದರು.
ರಾಜೇಶ್ ನಾಯ್ಕ್ ಉಳಿಪಾಡಿಗುತ್ತು, ದ.ಕ ಜಿಲ್ಲೆ ವಿ.ಹಿ.ಪ ಅಧ್ಯಕ್ಷಜಗದೀಶ್ ಶೇಣವ,ಬಜರಂಗದಳ ಪ್ರಾಂತಸಂಚಾಲಕ ಶರಣ್ ಪಂಪವೆಲ್ ಉಪಸ್ಥಿತರಿದ್ದರು.
ಧಾಮೀಕ ಕಾರ್ಯಕ್ರಮಗಳು ಕುದುರೆಬೆಟ್ಟು ವೆಂಕಟೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ರತೀಶ್ ಭಟ್ ಪಲ್ಕೆ ಅವರ ನೇತ್ರತ್ವದಲ್ಲಿ ಜರಗಿದವು ಮಂದಿರದ ಅಧ್ಯಕ್ಷ ಮುರಳೀಧರ ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.ಸತೀಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

By Suddi9

Leave a Reply

Your email address will not be published. Required fields are marked *