ಬಂಟ್ವಾಳ : ಮಾಣಿಯ ಕ್ವಾಲಿಟಿ ಫ್ರೆಂಡ್ಸ್ ಇದರ 2ನೇ ವಾರ್ಷಿಕ `ಕ್ವಾಲಿಟಿ ಕ್ರೀಡೋತ್ಸವ 2017′ ಇತ್ತೀಚೆಗೆ ಮಾಣಿ ಗಾಂಧಿ ಮೈದಾನದಲ್ಲಿ ನಡೆಯಿತು.ಕಾರ್ಯಕ್ರಮವನ್ನು ಮಾಣಿ ಶ್ರೀ ಉಳ್ಳಾಲ್ತಿ ದೈವಸ್ಥಾನದ ಆಡಳಿತ ಮೊಕ್ತೇಸರ ಸಚಿನ್ ರೈ ಮಾಣಿಗುತ್ತು ಉದ್ಘಾಟಿಸಿದರು.Quality 2

ಜಿಲ್ಲಾ ಪಂಚಾಯತ್ ಸದಸ್ಯೆ ಮಂಜುಳಾ ಮಾವೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಜಿ.ಪಂ. ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ತಾ.ಪಂ. ಸದಸ್ಯರುಗಳಾದ ಮಂಜುಳಾ ಕುಶಲ ಎಂ. ಪೆರಾಜೆ, ಆದಂ ಕುಂಞ, ಪಾಣೆಮಂಗಳೂರು ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಜಯಂತಿ ಪೂಜಾರಿ ಬಾಕಿಲ, ಬಂಟ್ವಾಳ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ಕುಲಾಲ್ ನೆಟ್ಲ, ತಾ.ಪಂ. ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಮಾಧವ ಮಾವೆ, ಚಲನಚಿತ್ರ ನಟ ಚೇತನ್ ರೈ ಮಾಣಿ, ಮಾಣಿ ಗ್ರಾ.ಪಂ. ಅಧ್ಯಕ್ಷೆ ಮಮತ ಎಸ್. ಶೆಟ್ಟಿ, ಸದಸ್ಯರಾದ ಇಬ್ರಾಹಿಂ ಕೆ. ಮಾಣಿ, ನಾರಾಯಣ ಶೆಟ್ಟಿ ತೋಟ, ನೇರಳಕಟ್ಟೆ ಸಿ.ಎ. ಬ್ಯಾಂಕ್ ಮಾಣಿ ಶಾಖಾಧಿಕಾರಿ ಸಂಜೀವ ಪೂಜಾರಿ, ಉದ್ಯಮಿ ಎಂ. ನಾಗರಾಜ ಶೆಟ್ಟಿ ಮಾಣಿ, ಯುವ ವಾಹಿನಿ ಮಂಗಳೂರು ಕೇಂದ್ರ ಸಮಿತಿಯ ಸಮಾಜ ಸೇವಾ ನಿರ್ದೇಶಕ ಕೆ. ಪ್ರಭಾಕರ ಸಾಲ್ಯಾನ್, ಡಾ. ಶ್ರೀನಾಥ್ ಆಳ್ವ, ಮಾಣಿ ಗ್ರಾ.ಪಂ. ಸದಸ್ಯ ಸುದೀಪ್ ಕುಮಾರ್ ಶೆಟ್ಟಿ, ಮಾಣಿ ವಲಯ ಯುವ ಕಾಂಗ್ರೆಸ್ ಅಧ್ಯಕ್ಷ ವಿಕೇಶ್ ಶೆಟ್ಟಿ, ಬಂಟ್ವಾಳ ಎಪಿಎಂಸಿ ಸದಸ್ಯ ಕುಶಲ ಎಂ. ಪೆರಾಜೆ, ಉದ್ಯಮಿಗಳಾದ ಹರೀಶ್ ಶೆಟ್ಟಿ ಮಾಣಿ, ಸದಾಶಿವ ಶೆಟ್ಟಿ ದತ್ತ ಕೃಪಾ, ಪುರುಷೋತ್ತಮ ಪಾಟೀಲ ಸೂರಿಕುಮೇರು ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ಕ್ರೀಡಾಕೂಟದಲ್ಲಿ ಸೀಮಿತ ವಲಯ ಮಟ್ಟದ ಕಬಡ್ಡಿ, ವಾಲಿಬಾಲ್ ಹಾಗೂ ಮುಕ್ತ ವಿಭಾಗದ ಕ್ರಿಕೆಟ್ ಮತ್ತು ವಾಲಿಬಾಲ್ ಪಂದ್ಯಾಟಗಳು ನಡೆಯಿತು. ಕಬಡ್ಡಿ ಪಂದ್ಯಾಟದ ತೀರ್ಪುಗಾರರಾಗಿ ಹಬೀಬ್ ಕೆ. ಮಾಣಿ, ಸಂದೀಪ್, ಜಗದೀಶ್ ಸಹಕರಿಸಿದರು. ಮಾಣಿ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಲಕೃಷ್ಣ ಆಳ್ವ ಕೊಡಾಜೆ ಸ್ವಾಗತಿಸಿ, ಮಜೀದ್ ಮಾಣಿ ವಂದಿಸಿದರು, ಲತೀಫ್ ನೇರಳಕಟ್ಟೆ, ಗಝಾಲಿ ಕುಡ್ತಮುಗೇರು, ನಿಹಾಲ್ ನೇರಳಕಟ್ಟೆ ವಿವಿಧ ಕಾರ್ಯಕ್ರಮ ನಿರೂಪಿಸಿದರು.

ಕಬಡ್ಡಿ ಮಾಣಿ ಯುವಕ ಮಂಡಲಕ್ಕೆ ಪ್ರಶಸ್ತಿ : ಸೀಮಿತ ವಲಯದ 8 ತಂಡಗಳಷ್ಟೇ ಮಾದರಿ ಲೀಗ್ ಕಬಡ್ಡಿ ಪಂದ್ಯಾಟದಲ್ಲಿ ಯುವಕ ಮಂಡಲ ಮಾಣಿ ತಂಡ ಪ್ರಥಮ, ಫ್ರೆಂಡ್ಸ್ ಕೆದಿಲ ತಂಡವು ದ್ವಿತೀಯ, ಪಿಂಕ್ ಪ್ಯಾಂಥರ್ಸ್ ಪೆರಾಜೆ ತಂಡವು ತೃತೀಯ ಹಾಗೂ ಫ್ರೆಂಡ್ಸ್ ಗೋಳಿಕಟ್ಟೆ ತಂಡವು ಚತುರ್ಥ ಸ್ಥಾನವನ್ನು ಪಡೆದುಕೊಂಡಿತು. ಮಾಣಿ ಯುವಕ ಮಂಡಲ ತಂಡದ ನವೀನ ಆಲ್‍ರೌಂಡರ್, ತಮ್‍ಸೀರ್ ಹಿಡಿತಗಾರ ಹಾಗೂ ಕೆದಿಲ ತಂಡದ ಅಬ್ದುಲ್ ರಹಿಮಾನ್ ಅದ್ದು ಉತ್ತಮ ದಾಳಿಗಾರ ಪ್ರಶಸ್ತಿಗಳನ್ನು ಪಡೆದುಕೊಂಡರು.

Quality 1
ಬೊಳ್ಳಾರ್ ತಂಡಕ್ಕೆ ವಾಲಿಬಾಲ್ : ವಾಲಿಬಾಲ್ ಪಂದ್ಯಾಟದದಲ್ಲಿ ಸತ್ಯದೇವತಾ ಬೊಳ್ಳಾರ್ ತಂಡ ಪ್ರಥಮ, ಯುವಕ ಮಂಡಲ ಮಾಣಿ ತಂಡ ದ್ವಿತೀಯ, ಪ್ಲೇ ಬಾಯ್ಸ್ ಕರಿಮಜಲು ತಂಡ ತೃತೀಯ ಹಾಗೂ ಅಯೋಧ್ಯಾ ಫ್ರೆಂಡ್ಸ್ ಪೆರ್ನೆ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.
ಕಾಡಬೆಟ್ಟು ತಂಡಕ್ಕೆ ಹಗ್ಗಜಗ್ಗಾಟ : ಹಗ್ಗ ಜಗ್ಗಾಟ ಪಂದ್ಯಾಟದಲ್ಲಿ ಕಾಡಬೆಟ್ಟು ಎ ತಂಡ ಪ್ರಥಮ, ಬೆಳ್ತಂಗಡಿ ತಂಡ ದ್ವಿತೀಯ, ನೀರುಮಾರ್ಗ ತಂಡ ತೃತೀಯ ಹಾಗೂ ಕಾಡಬೆಟ್ಟು ಸಿ ತಂಡ ಚತುರ್ಥ ಸ್ಥಾನ ಪಡೆದುಕೊಂಡಿತು.
ಫ್ರೆಂಡ್ಸ್ ಪುತ್ತೂರು ತಂಡಕ್ಕೆ ಕ್ರಿಕೆಟ್ : 36 ತಂಡಗಳು ಭಾಗವಹಿಸಿದ ಕ್ರಿಕೆಟ್ ಪಂದ್ಯಾಟದಲ್ಲಿ ಫ್ರೆಂಡ್ಸ್ ಪುತ್ತೂರು ತಂಡ ಪ್ರಥಮ ಹಾಗೂ ಫ್ರೆಂಡ್ಸ್ ಇರ್ತಡ್ಕ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು.

By suddi9

Leave a Reply

Your email address will not be published. Required fields are marked *