ಬಂಟ್ವಾಳ: ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ, ವಕೀಲರ ಸಂಘ ಬಂಟ್ವಾಳ, ಕಾರ್ಮಿಕ ಇಲಾಖೆ ಬಂಟ್ವಾಳ ಹಾಗೂ ಹಜಾಜ್ ಬೀಡಿ ವಕ್ರ್ಸ್ ಗೋಳ್ತಮಜಲು ಇದರ ಜಂಟಿ ಆಶ್ರಯದಲ್ಲಿ ಕಾರ್ಮಿಕ ದಿನಾಚರಣೆಯ ಅಂಗವಾಗಿ ಕಾನೂನು ಮಾಹಿತಿ ಕಾರ್ಯಕ್ರಮ ಗೋಳ್ತಮಜಲಿನ ಹಜಾಜ್ ಸ್ಪೋಟ್ರ್ಸ್ ಕ್ಲಬ್‍ನಲ್ಲಿ ನಡೆಯಿತು.

BTW_MAY3_8

ಹಿರಿಯ ಸಿವಿಲ್ ನ್ಯಾಯಾಧೀಶ ಚಂದ್ರಶೇಖರ ಯು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹಜಾಜ್ ಬೀಡಿ ವಕ್ರ್ಸ್‍ನ ಪಾಲುದಾರ ಮಹಮ್ಮದ್ ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಕೀಲರ ಸಂಘದ ಅಧ್ಯಕ್ಷ ಬಿ. ವೆಂಕಟರಮಣ ಶೆಣೈ, ಸಹಾಯಕ ಸರಕಾರಿ ಅಭಿಯೋಜಕ ಎಂ.ಎಸ್.ಅಲಿ, ಸಹಾಯಕ ಸರಕಾರಿ ವಕೀಲ ಸತೀಶ್ ಕುಮಾರ್ ಶಿವಗಿರಿ, ಹಾಜರಿದ್ದರು. ಕಾರ್ಮಿಕ ಕಾಯ್ದೆ ಮತ್ತು ಸವಲತ್ತುಗಳ ಬಗ್ಗೆ ನ್ಯಾಯವಾದಿ ಶ್ರೀನಿವಾಸ ದೈಪಲ ಮಾಹಿತಿ ನೀಡಿದರು. ಚಂದ್ರಶೇಖರ ಬೈರಿಕಟ್ಟೆ ಸ್ವಾಗತಿಸಿದರು. ವೀರೇಂದ್ರ ಎಂ. ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

By Suddi9

Leave a Reply

Your email address will not be published. Required fields are marked *