ಬಂಟ್ವಾಳ; ಪುರಸಭಾ ವ್ಯಾಪ್ತಿ ಗೊಳ ಪಟ್ಟ ಮೂಡಗ್ರಾಮದ ತಲಪಾಡಿಯ ವಿವಾದಿತ ಮಫತ್ ಲಾಲ್ ಲೇಔಟ್ ನ ವಸತಿ ವಿನ್ಯಾಸದ ನಕ್ಷೆಗೆ ಅನುಮೋದನೆ ನೀಡಿರುವ ಅಧಿಕಾರಿಯ ಮಾಹಿತಿ ನೀಡುವಂತೆ ದ.ಕ.ಜಿಲ್ಲಾ ನಗರಾಭಿವ್ರದ್ದಿ ಕೋಶದ ಯೋಜನಾ ನಿರ್ದೇಶಕರು ಮಂಗಳೂರು ನಗರ ಯೋಜನಾ ಪ್ರಾಧಿಕಾರಕ್ಕೆ (ಮೂಡಾ) ಪತ್ರ ಬರೆದಿರುವ ವಿಚಾರ ಬೆಳಕಿಗೆ ಬಂದಿದ್ದು,ತನ್ಮೂಲಕ ಪ್ರಕರಣ ಕುತೂಹಲದತ್ತ ಸಾಗಿದೆ. ಉದ್ಯಾನವನ ನಿರ್ಮಾಣ ಸಹಿತ ವಿವಿಧ ಅಭಿವ್ರದ್ದಿ ಕಾರ್ಯಕ್ಕಾಗಿ ಇಲ್ಲಿ ಒಟ್ಟು 107 ಸೆಂಟ್ಸ್ ಗೆ 2003 ರ ಜೂನ್ 20 ರಂದು ಅಂದಿನ ಮೂಡಾ ಅಧಿಕಾರಿಗಳು ನಕ್ಷೆಗೆ ಅನುಮೋದನೆ ನೀಡಿದ್ದರು.ಕರಾವಳಿ ಅಭಿವ್ರದ್ದಿ ಪ್ರಾಧಿಕಾರ ಇಲ್ಲಿ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿ ಶಿಲಾನ್ಯಾಸವನ್ನು ನೆರವೇರಿಸಲಾಗಿತ್ತು.ಬಳಿಕ ಪುರಸಭೆಗ ಹಸ್ತಾಂತರಿಸುವ ನಿಟ್ಟಿನಲ್ಲಿ ಜಮೀನಿನ ಅಳತೆ ಮಾಡುವಾಗ ಅಲ್ಲಿ ಕೇವಲ 43 ಸೆಂಟ್ಸ್ ನಷ್ಟು ಮಾತ್ರ ಕಂಡು ಬಂದಿತ್ತು. ಈ ನಡುವೆ ವಿಪಕ್ಷ ಬಿಜೆಪಿ ಸದಸ್ಯರು ಸೇರಿದಂತೆ ಹಲವು ಮಂದಿ ಈ ಖಾಸಗಿ ಜಮೀನಿಗೆ ಸರಕಾರಿ ಅನುದಾನ ಬಳಕೆ ಮಾಡುವುದನ್ನು ಆಕ್ಷೇಪಿಸಿ ನಗರಾಭಿವ್ರದ್ದಿಕೋಶದ ಯೋಜನಾ ನಿರ್ದೇಶಕರು,ಜಿಲ್ಲಾಧಿಕಾರಿಯವರಿಗೂ ದೂರು ಸಲ್ಲಿಸಿದ್ದರು.

IMG-20170502-WA0040 IMG-20170502-WA0041ಜೊತೆಗೆ ಮಫತ್ ಲಾಲ್ ಲೇಔಟ್ ವಿಚಾರದಲ್ಲಿ ಪುರಸಭೆಯ ಪ್ರತಿ ಸಾಮಾನ್ಯ ಸಭೆಯಲ್ಲೂ ಬಿಸಿ ಬಿಸಿ ಚರ್ಚೆಯು ನಡೆಯುತ್ತಿತ್ತು.ಲೇಔಟ್ ಬಳಿ ಎಂದು ನಮೂದಿಸಿ ಇಲ್ಲಿ ಪುರಸಭೆ ರಸ್ತೆ ನಿರ್ಮಿಸಿದ್ದು,ದೂರಿನ ತನಿಖಾ ಹಂತದಲ್ಲೆ ಇದರ ಹತ್ತು ಲಕ್ಷ ಹಣವನ್ನು ಗುತ್ತಿಗೆದಾರನಿಗೆ ಪಾವತಿಸಿರುವುದು ಮತ್ತಷ್ಟು ವಿವಾದವನ್ನುಂಟು ಮಾಡಿತ್ತು.ಕಳೆದ ಗುರುವಾರ ಬಿಜೆಪಿ ಸದಸ್ಯರು ಸದನದ ಭಾವಿಯಲ್ಲಿ ಧರಣಿ ಕುಳಿತಿದ್ದಾಗ ಸಂಧಾನಕ್ಕೆಂದು ಅಗಮಿಸಿದ್ದ ಯೋಜನಾ ನಿರ್ದೇಶಕರಲ್ಲೂ ಸದಸ್ಯರಾದ ಗೋವಿಂದಪ್ರಭು,ದೇವದಾಸ ಶೆಟ್ಟಿಯವರು ಈ ವಿಚಾರದಲ್ಲಿ ಪುರಸಭೆ,ಜಿಲ್ಲಾಡಳಿತ,ನಗರಾಭಿವ್ರದ್ದಿ ಕೋಶ ತೆಗೆದುಕೊಂಡ ನಿಲುವುಗಳ ಬಗ್ಗೆ ಆಕ್ರೋಶ,ಅಸಮಾಧಾನ ಹೊರಹಾಕಿದ್ದರು.ಇಲ್ಲಿ ರಸ್ತೆ ನಿರ್ಮಿಸಿದ ಗುತ್ತಿಗೆದಾರನಿಗೆ ಪಾವತಿಸಿದ ಬಿಲ್ಲು ವಾಪಾಸು ಪಡೆಯಬೇಕು,ಪಾವತಿಗೆ ಉಳಿಕೆ ಹಣದ ಬಿಲ್ಲನ್ನು ತಡೆ ಹಿಡಿಯಬೇಕಂದು ಆಗ್ರಹಿಸಿದ್ದರು.ಇದಕ್ಕೆ ಯೋಜನಾ ನಿರ್ದೇಶಕರಿಂದ ಯಾವುದೇ ಪ್ರತಿಕ್ರಿಯೇ ವ್ಯಕ್ತವಾಗದಿದ್ದಾಗ ಸದಸ್ಯರು ಈವಿಚಾರದಲ್ಲಿ ಬಿಗಿ ಪಟ್ಟು ಹಿಡಿದು ಕುಳಿತರು.ಕೊನೆಗೆ ದಾರಿಕಾಣದ ಪಿ.ಡಿ.ಅವರು ಈ ಪ್ರಕರಣದ ಬಗ್ಗೆ ಸಂಬಂಧಿಸಿದ ಅಗಿನ ಅಧಿಕಾರಿಗಳ ವಿರುದ್ದ ಕ್ರಮ ಕೈ ಗೊಳ್ಳುವ ಭರವಸೆ ನೀಡಿದ್ದರೆ.ಬಿಲ್ಲು ಪಾವತಿ ತಡೆಹಿಡಿಯುವ ಬಗ್ಗೆ ಮುಖ್ಯಾಧಿಕಾರಿಯವರಿಗೆ ಸೂಚಿಸಿದ್ದರು. ಇದರ ಬೆನ್ನಲ್ಲೇ ಯೋಜನಾನಿರ್ದೇಶಕರು ಮೂಡಾ ಅಧಿಕಾರಿಗೆ ಪತ್ರ ಬರೆದಿದ್ದು,ಮಫತ್ ಲಾಲ್ ಲೇಔಟ್ ನ ವಸತಿ ನಕ್ಷೆ ಅನುಮೋದನೆ ವೇಳೆ ಅವ್ಯವಹಾರ ನಡೆದಿರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದ್ದು,ಇದಕ್ಕೆ ಮಂಜೂರಾತಿ ನೀಡಿದ ಕಾಲದ ಅಧಿಕಾರಿಗಳ ಮಾಹಿತಿ ನೀಡುವಂತೆ ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಿಗದ ಪತ್ರ ; ಕಳೆದ ಗುರುವಾರ ಪುರಸಭೆಯ ಸದನದಲ್ಲಿ ಧರಣಿ ಕುಳಿತುಕೊಂಡ ಬಿಜೆಪಿ ಸದಸ್ಯರಿಗೆ ಮಫತ್ ಲಾಲ್ ಲೇಔಟ್ ರಸ್ತೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬಿಲ್ಲು ತಡೆ ಹಿಡಿಯುವ ಬಗ್ಗೆ ಮುಖ್ಖಾಧಿಕಾರಿ ಸುಧಾಕರ್ ಅವರು ಲಿಖಿತ ಪತ್ರ ನೀಡುವ ಭರವಸೆಯಂತೆ ಧರಣಿ ಹಿಂತೆಗೆದಿದ್ದರು.ಆದರೆ ಮುಖ್ಯಾಧಿಕಾರಿಯವರು ಕೊಟ್ಟ ಮಾತಿನಂತೆ ಈ ವರೆಗೂ ಧರಣಿ ಕುಳಿತಿದ್ದ ಸದಸ್ಯರಿಗೆ ಲಿಖಿತ ಪತ್ರ ನೀಡಿಲ್ಲ ಎಂದು ತಿಳಿದು ಬಂದಿದೆ.

By Suddi9

Leave a Reply

Your email address will not be published. Required fields are marked *