ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವರ ಮಹೋತ್ಸವದ “20 ನೇ ದಂಡಮಾಲೆ”ಯು ಏ.3ರಂದು ಸೋಮವಾರ ಜರುಗಲಿದೆ. ಅಂದು ದೇವರ ಬಳಿ ಉತ್ಸವದ ಬಳಿಕ “ನವಿಲು ರಥೊತ್ಸವ” ಜರುಗಲಿದೆ.
ಸಾಂಸ್ಕೃತಿಕದ ಅಂಗವಾಗಿ ಸಂಜೆ 6.30 ರಿಂದ ಶಿವರಂಜಿನಿ ಮ್ಯೂಜಿಕಲ್ಸ್ ಪೊಳಲಿ ಇವರಿಂದ “ಗಾನ- ನೃತ್ಯ- ಸಂಭ್ರಮ” ಹಾಗೂ ರಾಜಶ್ರೀ ಮೋಕೆದ ಕಲಾವಿದೆರ್ ಪೊಳಲಿ ಸಾಮಾಜಿಕ ಹಾಸ್ಯಮಯ ನಾಟಕ “ಇಂಚಾಯೆರೆ ಬಲ್ಲಿ” ಜರುಗಲಿದೆ.
