ಕೈಕಂಬ: ಮಕ್ಕಳಲ್ಲಿರುವ ನಿಷ್ಕಳಂಕ ಪ್ರೀತಿ ಅವರನ್ನು ದೈವತ್ವಕ್ಕೇರಿಸುತ್ತದೆ. ವಿಶೇಷ ಸಾಮರ್ಥ್ಯದ ವಿದ್ಯಾರ್ಥಿಗಳ ಮನಸ್ಥಿತಿಯನು ಹಾಗೂ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಅವರ ಬಾಳನ್ನು ಬೇಳಗುವ ಪ್ರಯತ್ನವಾಗಬೇಕು ಎಂದು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದ ಖ್ಯಾತ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದ ನಿರ್ದೇಶಕರಾದ ದೇವದಾಸ್ ಕಾಪಿಕಾಡ್ ಹೇಳಿದರು . ಮುಂದಿನ ದಿನಗಳಲ್ಲಿ ತನ್ನ ರಂಗಭೂಮಿ ಚಟುವಟಿಕೆಗಳ ಮೂಲಕ ಆಟಿಸಂ ಜಾಗೃತಿಯ ಸಂದೇಶವನ್ನು ಪಸರಿಸರಿಸುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಭಾನುವಾರ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯಲ್ಲಿ ವಿಶ್ವ ಆಟಿಸಂ ದಿನಾಚರಣೆಯನ್ನು ದೀಪ ಬೆಳಗಿಸಿ ಮಾತನಾಡಿದರು.2vp mangala jhyothi

DSC_0838 (1)ಚೇರ್ಮನ್ ಹಾಗೂ ಆಡಳಿತ ನಿರ್ದೇಶಕರು, ಮಾಂಡವಿ ಹಾಗೂ ಅರವಿಂದ ಮೋಟಾರ್ಸ್ ಸಮೂಹ ಸಂಸ್ಥೆಗಳ ಆರೂರು ಕಿಶೋರ್ ರಾವ್ ಮಾತನಾಡಿ ಜನರಲ್ಲಿ ಆಟಿಸಂ ನ ಅರಿವು ಹೆಚ್ಚಾಗಬೇಕಾಗಿದೆ, ಆಟಿಸಂ ಬಾಧಿತ ಮಕ್ಕಳಿಗೆ ವಾಕ್ ಶ್ರವಣ ತರಬೇತಿ ಹಾಗೂ ವರ್ತನೆಯ ತರಬೇತಿಯನ್ನು ಕೊಟ್ಟು ಸಾಮಾನ್ಯ ಮಕ್ಕಳೊಂದಿಗೆ ಬೆರೆಸಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕು ಮುಖ್ಯ ಅತಿಥಿಯಾಗಿ ಮಾತನಾಡಿದರು. ದ. ಕ ಜಿಲ್ಲಾ ರೆಡ್ ಕ್ರಾಸ್ ಸೊಸೈಟಿ ಅಧ್ಯಕ್ಷ ಚಾರ್ಟೆಡ್ ಅಕೌಂಟೆಂಟ್ ಶಾಂತಾರಾಮ್ ಶೆಟ್ಟಿ ಇವರು ರೆಡ್ ಕ್ರಾಸ್ ಸೊಸೈಟಿಯ ಮೂಲಕ ಆಟಿಸಂ ಬಗ್ಗೆ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿ ಕೊಳ್ಳುವುದಾಗಿ ಘೋಷಿಸಿದರು.

ಎಸ್ ಡಿ ಎಂ ಉದ್ಯಮಾಡಳಿತ ಕಾಲೇಜಿನ ನಿರ್ದೇಶಕರಾದ ಡಾ ಕೆ ದೇವರಾಜ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಮಂಗಳಜ್ಯೋತಿ ಸಂಸ್ಥೆಯ ವಿಶೇಷ ವಿದ್ಯಾರ್ಥಿಗಳ ಉಪಯೋಗಕ್ಕೆ ಒಂದು ಟಾಟಾ ವಿಂಗರ್ ವಾಹನವನ್ನು ಅರವಿಂದ ಮೋಟಾರ್ಸ್ ಸಂಸ್ಥೆಯ ಕಾರ್ಪೋರೆಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ ಕಾರ್ಯಕ್ರಮದ ಅಂಗವಾಗಿ ಆರೂರು ಕಿಶೋರ್ ರಾವ್ ಅವರು ಹಸ್ತಾಂತರಿಸಿದರು. ಅರೂರು ಕಿಶೋರ್ ರಾವ್ ಅವರನ್ನು ಈ ಸಂದರ್ಭದಲ್ಲಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ಫ್ರೋ. ಎ ರಾಜೇಂದ್ರ ಶೆಟ್ಟಿ ವಹಿಸಿದ್ದರು. ವೇದಿಕೆಯಲ್ಲಿ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆಯ ಮುಖ್ಯೋಪಾಧ್ಯಾಯ ಅಶೋಕ್ ಕುಮಾರ್, ಮಾರ್ಯಟ್ ಮಸ್ಕರೇನಸ್, ಎಸ್ ಡಿ ಎಂ ಮಂಗಳಜ್ಯೋತಿ ಐ ಟಿ ಐ ವಿಭಾಗದ ಪ್ರಾಂಶುಪಾಲರಾದ ನರೇಂದ್ರ ಇವರು ಉಪಸ್ಥಿತರಿದ್ದರು.

ಸಂಸ್ಥೆಯ ಆಡಳಿತಾಧಿಕಾರಿ ಗಣೇಶ್ ಭಟ್ ವಿ ಸ್ವಾಗತಿಸಿದರು. ಸಂಸ್ಥೆಯ ವಾಕ್ ಶ್ರವಣ ವಿಭಾಗದ ಮುಖ್ಯಸ್ಥರಾದ ಗುರುಪ್ರಸಾದ್ ಅವರು ಧನ್ಯವಾದ ಸಲ್ಲಿಸಿದರು. ಶಿಕ್ಷಕ ರಮೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಸಭಾಕಾರ್ಯಕ್ರಮದ ನಂತರ ಮಂಗಳೂರಿನ ವಿವಿಧ ಶಿಕ್ಷಕ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಗೆ ಆಟಿಸಂ ಕುರಿತು ಮಾಹಿತಿ ಕಾರ್ಯಾಗಾರ ಜರಗಿತು. ಕೆ ಎಂ ಸಿ ಯ ವಾಕ್ ಶ್ರವಣ ವಿಭಾಗದ ಮುಖ್ಯಸ್ಥ ರಾದ ಡಾ ಜಯಶ್ರೀ ಭಟ್ ಹಾಗೂ ಸುದಿನ್ ಅವರು ಸಂಪನ್ಮೂಲವ್ಯಕ್ತಿಗಳಾಗಿ ಭಾಗವಹಿಸಿದರು.

By suddi9

Leave a Reply

Your email address will not be published. Required fields are marked *