
ಬಜ್ಪೆ: ನೀವು ಕೇಳಿದ್ದೂ ನಿಜ… ನಾವು ಹೇಳಿದ್ದೂ ನಿಜ… ಆದರೆ ನಡೆದದ್ದೇ ಬೇರೆ
ಎಡಪದವು ಗ್ರಾಮ ಪಂಚಾಯತಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸಲಾಗದೆ ಗ್ರಾ.ಪಂ. ಅಧ್ಯಕ್ಷ ಗ್ರಾಮ ಸಭೆಯುದ್ದಕ್ಕೂ ನೀವು ಕೇಳಿದ್ದೂ ನಿಜ .. ನಾವು ಹೇಳಿದ್ದೂ ನಿಜ. ನಡೆದದ್ದು ಮಾತ್ರ ನಿಜವಲ್ಲ ಹರಿಯೇ!
ಎಂದು ಹರಿನಾಮ ಜಪಿಸುತ್ತಾ ಕಠಿಣ ಸವಾಲುಗಳಿಂದ ನುಣುಚಿಕೊಳ್ಳಲು ಯತ್ನಿಸಿದರು.
ವಾಡರ್್ನಲ್ಲಿ ಕಾಮಗಾರಿ, ಯೋಜನೆಗಳ ಅನುಷ್ಠಾನಕ್ಕೆ ವಾಡರ್್ ಸದಸ್ಯರು ಅಡ್ಡಿಪಡಿಸುತ್ತಿರುವುದಾಗಿ ಅಧ್ಯಕ್ಷರು ತಿಳಿಸಿದ್ದಾರೆ. ಸಂಸದರ, ಶಾಸಕರ, ಜಿ.ಪಂ., ತಾ.ಪಂ. ಸದಸ್ಯರುಗಳ ನಿಯಿಂದ ಪಂಚಾಯತ್ ವ್ಯಾಪ್ತಿಗೆ ಬರುವ ಅನುದಾನ ಯೋಜನೆಗಳ ಬಗ್ಗೆ ತಿಳಿದಿಲ್ಲವೆಂದು ಹೇಳಿ ಯೋಜನೆಗೆ ಅಡ್ಡಿಪಡಿಸುವುದು ಸದಸ್ಯರ ತಪ್ಪಲ್ಲವೇ ಎಂದು ಗ್ರಾಮಸ್ಥರೊಬ್ಬರು ಆರೋಪಿಸಿದಾಗ 5ನೇ ವಾಡರ್್ನ ಎಲ್ಲಾ ಸದಸ್ಯರು ಎದ್ದು ನಿಂತು ಆಕ್ರೋಶ ವ್ಯಕ್ತಪಡಿಸಿ ಆರೋಪ ವ್ಯಕ್ತಪಡಿಸಿದ ಗ್ರಾಮಸ್ಥರು ಕ್ಷಮೆ ಕೆಳಬೇಕು. ಅಥವಾ ಅಂತಹ ಸದಸ್ಯರು ಯಾರೆಂದು ಈಗಲೇ ಹೇಳಬೇಕೆಂದು ಪಟ್ಟು ಹಿಡಿದು ಆಕ್ರೋಶಿತರಾಗಿ ಮಾತನಾಡಲಾರಂಭಿಸಿದಾಗ ಕೆಲಕಾಲ ಗೊಂದಲದ ವಾತಾವರಣವುಂಟಾದರೂ ನೋಡೆಲ್ ಅಕಾರಿಯವರು ಮಧ್ಯೆ ಪ್ರವೇಶಿಸಿ ವಾತಾವರಣ ತಿಳಿಗೊಳಿಸಿದರು.
ಬೋರುಗುಡ್ಡೆ-ಮಡಪಾಡಿ ರಸ್ತೆ ನವೀಕರಣ ಹಲವು ಬಾರಿ ಗಮನ ಸೆಳೆದರೂ ಯಾವುದೇ ಪ್ರಯೋಜನವಾಗಿಲ್ಲ. ಯಾಕೆ ಹೀಗೆ ಈ ರಸ್ತೆ ದುರಸ್ತಿ ಆಗುವುದಿಲ್ಲವೇ? ಎಂದು ಆ ಭಾಗದ ಗ್ರಾಮಸ್ಥರು ಸುಕುಮಾರ್ ಅಮೀನ್ ನೇತೃತ್ವದಲ್ಲಿ ಅಹವಾಲು ಮಂಡಿಸಿದರೂ *ನೀವು ಕೇಳಿದ್ದೂ ನಿಜ ನಾವು ಹೇಳಿದ್ದೂ ನಿಜ..* ಎನ್ನುತ್ತಾ ಸಮಸ್ಯೆಯ ಗಂಭೀರತೆಯನ್ನು ಮರೆಸುವಲ್ಲಿ ಅಧ್ಯಕ್ಷರು ಶಕ್ತರಾದರು.
ಗಿರಿಜನ ಕಲ್ಯಾಣ ಯೋಜನೆಯ ದುರುಪಯೋಗವಾಗಿದೆ ಎಂಬ ಆರೋಪ ಮಾಜಿ ತಾ.ಪಂ. ಸದಸ್ಯ ಮಥಾಯಸ್ ಅವರದ್ದು.
ಮೆಸ್ಕಾಂ ಅಧಿಕಾರಿ ಗೈರು: ಮೆಸ್ಕಾಂ ಅಕಾರಿ ಗ್ರಾಮಸಭೆಗೆ ಆಗಮಿಸದೇ ಇದ್ದುದು ಗ್ರಾಮಸ್ಥರನ್ನು ಇನ್ನಷ್ಟು ಆಕ್ರೋಶಿತರನ್ನಾಗಿಸಿತು. ಪ್ರತ್ಯೇಕವಾಗಿ ಮೆಸ್ಕಾಂ ಅಕಾರಿಗಳಿಗೆ ನೋಟೀಸು ಹೊರಡಿಸಬೇಕು ಹಾಗೂಈ ತಿಂಗಳೊಳಗೆ ಪ್ರತ್ಯೇಕ ಗ್ರಾಮಸ್ಥರ ಸಭೆ ಕರೆದು ಮೆಸ್ಕಾಂ ಅಕಾರಿಗಳ ಉಪಸ್ಥಿತಿಯಲ್ಲಿ ಮೆಸ್ಕಾಂ ಸಮಸ್ಯೆಗಳ ಮುಖಾಮುಖಿ ಚಚರ್ೆಯಾಗಬೇಕು ಎಂಬ ಗ್ರಾಮಸ್ಥರ ಒತ್ತಾಯ ಹಾಗೂ ನೋಡಲ್ ಅಕಾರಿಯವರ ಸಲಹೆ ಮೇರೆಗೆ ನಿರ್ಣಯ ಕೈಗೊಳ್ಳಲಾಯಿತು.
ಕ್ಷಮೆ ಯಾಚಿಸಿದ ಗ್ರಾ.ಪಂ ಅಧ್ಯಕ್ಷರು:
ಬೋರ್ವೆಲ್ ಕಾಮಗಾರಿಗಳ ಅವ್ಯವಸ್ಥೆ ಬಗ್ಗೆ ಗಂಭೀರ ಚಚರ್ೆಯಾದಾಗ *ಮಿಜಾರ್ ಬೋರ್ವೆಲ್*ನ ಮಾಲಕ ಯಾರು ಎಂಬ ಪ್ರಶ್ನೆಗೆ *ಅದು ತಾಲೂಕು ಪಂಚಾಯಿತಿ ಸದಸ್ಯ ಪ್ರಕಾಶ್ ಗೌಡ* ಎಂದು ಅಧ್ಯಕ್ಷ ರಾಮಣ್ಣ ಶೆಟ್ಟಿ ಅವರು ಸಭೆಯಲ್ಲಿ ತಿಳಿಸಿದಾಗ *ಜನಪ್ರತಿನಿಯೋರ್ವ ಈ ರೀತಿ ಗುತ್ತಿಗೆ ನಡೆಸುವುದು ಎಷ್ಟು ಸರಿ ಎಂಬ ಬಗ್ಗೆ ಚಚರ್ೆ ಗದ್ಧಲಕ್ಕೆ ತಿರುಗಿದಾಗ ದಾಖಲೆ ಪುಸ್ತಕಗಳನ್ನು ಪರಿಶೀಲಿಸಿದ ಪಿಡಿಓ ಅವರು *ದಾಖಲೆಗಳಲ್ಲಿ ಮಿಜಾರ್ ಬೋರ್ವೆಲ್ ನ ಮಾಲಕರ ಹೆಸರು ವಿಜಯಲಕ್ಷ್ಮಿ ಎಂದು ನಮೂದಿಸಿಸಲಾಗಿದ್ಧರೂ ಪಾವತಿ ಚೆಕ್ಗಳು ಸಂಸ್ಥೆಯ ಹೆಸರಿಗೆ ನೀಡಲಾಗುತ್ತದೆ.*ಎಂದು ಸ್ಪಷ್ಟೀಕರಣ ನೀಡಿದೊಡನೆ ಗ್ರಾ.ಪಂ.ಅಧ್ಯಕ್ಷ ರಾಮಣ್ಣ ಶೆಟ್ಟಿ ಅವರು ತಾ.ಪಂ.ಸದಸ್ಯ ಪ್ರಕಾಶ್ ಗೌಡ ಅವರಲ್ಲಿ ಕ್ಷಮೆ ಯಾಚಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಜನಾರ್ದನ ಗೌಡ ಉಪಸ್ಥಿತರಿದ್ಧರು. ಗ್ರಾಮ ಪಂಚಾಯಿತಿನ 26 ಸದಸ್ಯರ ಪೈಕಿ 18 ಸದಸ್ಯರು ಮಾತ್ರ ಗ್ರಾಮ ಸಭೆಗೆ ಹಾಜರಾಗಿದ್ದು 8 ಸದಸ್ಯರು ಗೈರು ಹಾಜರಾಗಿದ್ಧರು.
