ಕೈಕಂಬ:ವೀರ ಯೋಧ ಯಾದವ ಫ್ರೆಂಡ್ಸ್ ಅಮ್ಮುಂಜೆ “ದಶ ಪಂಚಮೋತ್ಸವ” ಸಮಾರಂಭ ವು ಮಾ. 12 ರಂದು ಭಾನುವಾರ ಶ್ರೀ ವಿನಾಯಕ ದೇವಸ್ಥಾನದ ಬಳಿ ಜರಗಲಿರುವುದು.ಬೆಳಗ್ಗೆ 10 ಗಂಟೆಗೆ ” ರಕ್ತದಾನ ಶಿಬಿರ “ಫಾದರ್ ಮುಲ್ಲರ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆ ಇದರ ಸಹಭಾಗಿತ್ವದಲ್ಲಿ ಜರಗಲಿದೆ ಇದರ ಉದ್ಘಾಟನೆಯನ್ನು ಅಮ್ಮುಂಜೆ ಗ್ರಾ. ಪಂ.ಅಧ್ಯಕ್ಷೆ ಪ್ರೇಮಲತಾ ಲಕ್ಷ್ಮಣ್ ಮಾಡಲಿದ್ದಾರೆ ಅಧ್ಯಕ್ಷತೆಯನ್ನು ಬಂಟ್ವಾಳ ತಾ.ಪಂ ಸದಸ್ಯ ಶಿವಪ್ರಸಾದ್ ವಹಿಸಲಿದ್ದಾರೆ ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಎ.ವಿನೋದ್ ನಾೈಕ್ , ವಿರಯೋಧ ಯಾಧವ ಫ್ರೆಂಡ್ಸ್ ಇದರ ಸ್ಥಾಪಕಾಧ್ಯಕ್ಷ ಜನಾರ್ದನ ಬಾರಿಂಜೆ,ಅಮ್ಮುಂಜೆ ಗ್ರಾ.ಪಂ.ಉಪಾಧ್ಯಕ್ಷ ವಾಮನ ಆಚಾರ್ಯ, ನಿವೃತ ಯೋಧ ಭಾರತೀಯ ಭೂಸೇನೆ ಹನೀಶ್ ಬಡಕಬೈಲ್ ಉಪಸ್ಥಿತರಿರುವರು. ಸಾಯಾಂಕಾಲ 5ಗಂಟೆಗೆ “ಯಕ್ಷ- ಗಾನ- ವೈಭವ” 7ಗಂಟೆಯಿಂದ ದಶಪಂಚಮೋತ್ಸವ ದ ಸಮಾರಂಭದಲ್ಲಿ ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಆರ್ಶೀವಚನ ನೀಡಲಿದ್ದಾರೆ. ಅಧ್ಯಕ್ಷತೆvಯನ್ನು ಅರಣ್ಯ ಸಚಿವ ರಮಾನಾಥ ರೈ ವಹಿಸಲಿದ್ದದಾರೆ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ .ದಿಕ್ಸೂಚಿ ಭಾಷಣವನ್ನು ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ನೀಡಲಿದ್ದಾರೆ. ಮುಖ್ಯ ಅತಿಥಿದಗಳಾಗಿ ಪೊಳಲಿ ದೇವಳದ ಆಡಳಿತ ಮೊಕ್ತೇಸರ ಡಾ.ಮಂಜಯ್ಯ ಶೆಟ್ಟಿ ಅಮ್ಮುಂಜೆಗುತ್ತು, ಜಿ.ಪಂ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಿಜೆಪಿ ಮುಖಂಡ ರಾಜೇಶ್ ನಾೈಕ್ ಉಳಿಪಾಡಿಗುತ್ತು, ಬಂಟ್ವಾಳ ಆರಕ್ಷಕ ಠಾಣೆ ಉಪನಿರೀಕ್ಷಕ ರಕ್ಷಿತ್ ಎ.ಕೆ., ಅಡ್ಯಾರ್ ಸಹ್ಯಾದ್ರಿ ಕಾಲೇಜು ಪ್ರಾಂಶುಪಾಲ ಡಾ.ಉಮೇಶ್ ಭೂಷಿ, ಅಡ್ಯಾರ್ ಸಹ್ಯಾದ್ರಿ ಕಾಲೇಜು ನಿರ್ದೇಶಕ ದೇವುದಾಸ್ ಹೆಗ್ಡೆ ಅಮ್ಮುಂಜೆಗುತ್ತು, ಉದ್ಯಮಿಗಳಾದ ಎ.ಜೀವರಾಜ್ ಶೆಟ್ಟಿಅಮ್ಮುಂಜೆಗುತ್ತು. ಸೋಮಶೇಖರ್ ಶೆಟ್ಟಿ ಅಮ್ಮುಂಜೆಗುತ್ತು, ಅಜಿತ್ ಚೌಟ ದೇವಸ್ಯ , ರಾಜೇಶ್ ಹೆಗ್ಡೆ ಮಂಗಾಜೆ, ವಿನಾಯಕಕ ದೇವಸ್ಥಾನದ ಆಡಳಿತ ಮೊಕ್ತೇಸರ ಡಿ.ಎ.ನಾಗೇಶ್ ರಾವ್ , ಇಂಜಿನಿಯರ್ ಡಿ. ಅಬ್ದುಲ್ ಖಾದರ್ ದೊಂಪ ಬಿಇ., ಗ್ರಾ. ಪಂ ಸದಸ್ಯ .ಚಂದ್ರಶೇಖರ್ ಭಂಡಾರಿ, ಉಮೇಶ್ ಪೂಜಾರಿ ಬಾರಿಂಜೆ, ಕರುಣಾಕರ ಆಳ್ವ, ಸತೀಶ್ ಕಣಿಯೂರು ಇವರುಗಳು ಭಾಗವಹಿಸಲಿದ್ದಾರೆ.
ಸನ್ಮಾನ ಸಮಾರಂಭ.
ಸಂದರ್ಭದಲ್ಲಿ ರೇಖಿ ಮಾಸ್ತರ್ ವಿಜಯ ಸುವರ್ಣ ಪೊಳಲಿ , ಹಿರಿಯ ನಾಟಿ ವೈದ್ಯ ಶಿನ ಪೂಜಾರಿ ಬಡಗಬೆಳ್ಳೂರು , ಕಲಾಯಿ ನಾಟೀ ವೈದ್ಯ ಈಶ್ವರ ಪೂಜಾರಿ, ಪ್ರಸಿದ್ಧ ರಂಗ ನಟ ಯಂ.ಜೆ.ಟೈಲರ್ ಅಮ್ಮುಂಜೆ, ಕಟ್ಟಡ ಸ್ಥಳದಾನಿ ಇವರುಗಳನ್ನು ಸನ್ಮಾನಿಸಲಾಗುವುದು. ರಾತ್ರಿ 9ರಿಂದ 10ರವರೆಗೆ “ನೃತ್ಯ ವೈವಿಧ್ಯ” ರಾತ್ರಿ 10ರಿಂದ ತೆಲಿಕೆದ ಬೊಳ್ಳಿ ಲ/ದೇವ್ ದಾಸ್ ಕಾಪಿಕಾಡ್ ರವರ”ಚಾ ಪರ್ಕ” ಕಲಾವಿದರಿಂದ“ಕೊಡೆ ಬುಡ್ಪಾಲೆ”ತುಳು ಹಾಸ್ಯಮಯ ನಾಟಕ ಜರಗಲಿದೆ ಎಂದು ವೀರಯೋಧ ಯಾದವ ಫ್ರೆಂಡ್ಸ ಅಧ್ಯಕ್ಷಪ್ರಶಾಂತ್ ಕುಲಾಲ್ ತಿಳಿಸಿದ್ದಾರೆ.

