ಶ್ರೀ ಬ್ರಹ್ಮಬೈದರ್ಕಳ ಪಂಚಧೂಮವತೀ ದೈವದ ಕೋಲೋತ್ಸವ
ಮುಂಬಯಿ, ಫೆ.28:ಉಡುಪಿ ಜಿಲ್ಲೆಯ ಕಲ್ಯಾಣ್ಫುರ ತೋನ್ಸೆ ಇಲ್ಲಿನ ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮವತೀ ಗರೋಡಿ ಇದರ ವಾರ್ಷಿಕ ನೇಮೋತ್ಸವವು ಇದೇ ಮಾರ್ಚ್.04-07ರ ಎರಡು ದಿನಗಳಲ್ಲಿ ನೇರವೇರಲಿದೆ ಎಂದು ತೋನ್ಸೆ ಸಂಜೀವ ಪೂಜಾರಿ ಮುಂಬಯಿ ತಿಳಿಸಿದ್ದಾರೆ.

ಮಾ.4ನೇ ಶನಿವಾರ ಬೆಳಿಗ್ಗೆ 8.00 ಗಂಟೆಯಿಂದ ಶ್ರೀ ಬ್ರಹ್ಮ ಬೈದರ್ಕಳರಿಗೆ ಹರಿಕಾಯಿ ಒಪ್ಪಿಸುವುದು. 9.00 ಗಂಟೆಗೆ ನಾಗತನು ಸೇವೆ, 10.00 ಗಂಟೆಗೆ ವೇದಮೂರ್ತಿ ಶ್ರೀ ರಾಮಚಂದ್ರ ಕುಂಜತ್ತಾಯ ಕಲ್ಲಂಗಳ ಅವರಿಂದ ಆಶ್ಲೇಷ ಬಲಿ ಮತ್ತು ನಾಗ ದರ್ಶನ ನಡೆಯಲಿದೆ. ರಾತ್ರಿ 9.00 ಗಂಟೆಗೆ ಅನ್ನ ನೈವೇದ್ಯ ಸಮರ್ಪಣೆ, ಮಹಾಪೂಜೆ, ತಡರಾತ್ರಿ 12.00 ಗಂಟೆಗೆ ಬೈದರ್ಕಳ ದರ್ಶನ ಮತ್ತು ಭಂಡಾರವು ನೇಮೋತ್ಸವದ ಚಪ್ಪರಕ್ಕೆ ಹೊರಡುವುದು ಬಳಿಕ ಪ್ರಸಾದ ವಿತರಣೆ ಜರಗಲಿದೆ.

Thonse Brama Baidarkala Garadi

Thonse Nemotsava 2017 Invtn

ಮಾ.5ನೇ ಆದಿತ್ಯವಾರ ಮಧ್ಯಾಹ್ನ 12.00 ಗಂಟೆಯಿಂದ ಮಹಾ ಅನ್ನಸಂತರ್ಪಣೆ. ಸಂಜೆ 6.30 ಗಂಟೆಯಿಂದ ತೋನ್ಸೆ ಗರೋಡಿಯ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ. ಮಾ.6ನೇ ಸೋಮವಾರ ಮುಂಜಾನೆ 1.30 ಗಂಟೆಗೆ ಶ್ರೀ ಬೈದರ್ಕಳ ದರ್ಶನ ನೇರವೇರಲಿದೆ. ಮಾ.7ನೇ ಮಂಗಳವಾರ ಸಂಜೆ 5.00 ಗಂಟೆಯಿಂದ ಶ್ರೀ ಪಂಚಧೂಮವತೀ ದೈವದ ಭಂಡಾರ ಚಪ್ಪರಕ್ಕೆ ಹೊರಡುವುದು ತದಾನಂತರ ಶ್ರೀ ಪಂಚಧೂಮವತೀ ದೈವದ ಕೋಲೋತ್ಸವವು ಜರಗಲಿದೆ.

ಆ ಪ್ರಯುಕ್ತ ಮುಂಬಯಿ ಸಮಿತಿಯ ಸರ್ವರೂ ಹಾಗೂ ಮಹಾನಗರದ ಎಲ್ಲಾ ಸದ್ಭಕ್ತರು ಈ ಧಾರ್ಮಿಕ ಪುಣ್ಯಾಧಿ ಕಾರ್ಯಕ್ರಮದಲ್ಲಿ ಭಾಗವಹಿಸುರೇ ನಾಲ್ಕುಕರೆ ಗುರಿಕಾರರು ಮತ್ತು ಗುರಿಕಾರರು, ಅಭಿವೃದ್ಧಿ ಸಮಿತಿ ತೋನ್ಸೆ, ಆಡಳಿತ ಮೊಕ್ತೇಸರರು, ಬಿಲ್ಲವ ಒಕ್ಕೂಟ (ರಿ.) ತೋನ್ಸೆ ಮತ್ತು ಅರ್ಚಕ ವರ್ಗವು ತಿಳಿಸಿದ್ದು, ಶ್ರೀ ಬ್ರಹ್ಮ ಬೈದರ್ಕಳ ಪಂಚಧೂಮಾವತೀ ಗರೋಡಿ ತೋನ್ಸೆ ಇದರ ಮುಂಬಯಿ ಉಪಸಮಿತಿಯ ಅಧ್ಯಕ್ಷ ನಿತ್ಯಾನಂದ ಡಿ.ಕೋಟ್ಯಾನ್ ಈ ಮೂಲಕ ವಿನಂತಿಸಿದೆ. ವಿವರಗಳಿಗಾಗಿ ತೋನ್ಸೆ ಸಂಜೀವ ಪೂಜಾರಿ (9821869128 ಅಥವಾ 28594730) ಸಂಖ್ಯೆಗಳನ್ನು ಸಂಪರ್ಕಿಸುವಂತೆ ಕೋರಲಾಗಿದೆ.

By suddi9

Leave a Reply

Your email address will not be published. Required fields are marked *