ಕಲ್ಲಡ್ಕ : ಯುವ ಜನತೆ ದೇಶದ ಅಭಿವೃದ್ದಿ ಕಾರ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಯೋಜನೆಗೆ ಕೈ ಜೋಡಿಸಬೇಕು. ಸಮಾಜದ ಅಭಿವೃದ್ದಿಯೇ ದೇಶದ ಅಭಿವೃದ್ದಿ ಎಂದು ನ್ಯಾಯವಾಧಿ ಅನಿಲ್ ಕುಮಾರ್ ಉಪ್ಪಿನಂಗಡಿ ಹೇಳಿದರು.
ಅವರು ಯುವ ವೇದಿಕೆ ಪೆರಾಜೆ ಇದರ ವತಿಯಿಂದ ಏರ್ಪಡಿಸಲಾದ ಶ್ರೀರಾಮಚಂದ್ರಾಪುರ ಮಠದ ಜನ ಭವನ ಸಭಾಂಗಣದಲ್ಲಿ ‘ಕ್ಯಾಶ್ಲೆಸ್ ವ್ಯವಹಾರದತ್ತ ನಮ್ಮ ಜೀವನ’ ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಕ್ಯಾಶ್ಲೆಸ್ ವ್ಯವಹಾರದಿಂದ ದೇಶಕ್ಕೆ ದೊಡ್ಡ ಲಾಭವಾಗಲಿದೆ. ಭ್ರಷ್ಟಾಚಾರ ರಹಿತ ವ್ಯವಹಾರಕ್ಕೆ ಪೂರಕವಾಗಲಿದೆ. ವಿದ್ಯಾಭಿಮಾನಿ, ಸ್ವಾಭಿಮಾನಿ ಭಾರತ ನಿರ್ಮಾಣವಾಗಲು ಯುವ ಜನತೆ ದೇಶದ ಪ್ರಧಾನಿಯವರೊಂದಿಗೆ ಕೈ ಜೋಡಿಸಬೇಕು . ಸ್ವಚ್ಚತಾ ಕಾರ್ಯಕ್ರಮ ಜನಾಂದೋಲನವಾಗಿ ರೂಪುಗೊಳ್ಳಬೇಕು. ಭಾರತÀದ ಯುವಶಕ್ತಿ ಜಗತ್ತಿಗೆ ಸಂಪನ್ಮೂಲವಾಗುತ್ತಿದೆ. ಆದರೆ ನೆರೆಯ ಪಾಕಿಸ್ತಾನದ ಯುವಕರು ಭಯೋತ್ಪಾದಕರಾಗುತ್ತಿರುವುದು ವಿಪರ್ಯಾಸ ಎಂದು ಸಂಸ್ಕಾರ ಭಾರತಿಯ ಕೃಷ್ಣ ಉಪಾಧ್ಯಾಯ ಹೇಳಿದರು.
ಮುಖ್ಯ ಅಥಿತಿಯಾಗಿ ಹಾರೆಕೆರೆ ನಾರಾಯಣ ಭಟ್ ಮಾತನಾಡಿ ಯುವ ವೇದಿಕೆ ವತಿಯಿಂದ ಅಲ್ಪ ಸಮಯದಲ್ಲಿ ಪೆರಾಜೆ ಗ್ರಾಮದಲ್ಲಿ 250 ಕ್ಕಿಂತಲೂ ಹೆಚ್ಚು ಇಂಗು ಗುಂಡಿಗಳನ್ನು ಮಾಡಿರುವುದಲ್ಲದೆ ಹಲವು ಉತ್ತಮ ಸಾಮಾಜಿಕ ಕಾರ್ಯಕ್ರಮಗಳಿಗೆ ಮಠದ ಸಹಕಾರವಿದೆ ಎಂದು ಅಭಿನಂದಿಸಿ ವೇದಿಕೆಯ ಕಾರ್ಯಕ್ರಮಗಳಿಗೆ ಶುಭ ಹಾರೈಸಿದರು . ಸಂಪನ್ಮೂಲ ವ್ಯಕ್ತಿಯಾಗಿ ಸಾಮಾಜಿಕ ಕಾರ್ಯಕರ್ತ ಅನಿಲ್ ಕೊಪ್ಪ ಮಾಹಿತಿ ನೀಡಿದರು. ನಗದು ರಹಿತ ವ್ಯವಹಾರ ಮತ್ತು ಅದರಿಂದಾಗುವ ಪ್ರಯೋಜನಗಳನ್ನು ಪಿ.ಪಿ.ಟಿ ಮೂಲಕ ಪ್ರದರ್ಶಿಸಿದರು. ಮೊಬೈಲ್ನಲ್ಲಿ ವ್ಯವಹಾರವನ್ನು ನಡೆಸುವುದು ತುಂಬಾ ಸುಲಭ ಎಂದು ಪ್ರಾತ್ಯಕ್ಷಿಕೆ ನೀಡಿದರು. ವೇದಿಕೆಯಲ್ಲಿ ಡಾ. ಶ್ರೀನಾಥ್ ಆಳ್ವ ಪೆರಾಜೆ ಗುತ್ತು, ನಾರಾಯಣ ಎಮ್.ಪಿ. ಪಾಳ್ಯ ಉಪಸ್ಥಿತರಿದ್ದರು. ಹಿರಿಯರಾದ ಬಿ.ಟಿ ನಾರಾಯಣ ಭಟ್, ಶ್ರೀಕಾಂತ ಆಳ್ವ , ಜಯಾನಂದ ಪೆರಾಜೆ, ಯುವ ವೇದಿಕೆ ಅಧ್ಯಕ್ಷ ಅಜಿತ್, ರಾಜಾರಾಮ ಕಾÀಡೂರು ಉಪಸ್ಥಿತರಿದ್ದರು. ಯತಿರಾಜ್ ಪ್ರಸ್ತಾವನೆ ಗೈದು ಸ್ವಾಗತಿಸಿದರು. ದಿವಾಕರ ಶಾಂತಿಲ ನಿರೂಪಿಸಿದರು.

