ಉಡುಪಿ:- ಅರ್.ಎಸ್.ಬಿ ಯುವ ಜನಾ ಸಭಾ ಮಣಿಪಾಲ ಇದರ ವತಿಯಿಂದ ಫೆ.5 ಆದಿತ್ಯವಾರದಂದು ಮಣಿಪಾಲದ ಆರ್.ಎಸ್.ಬಿ ಸಭಾ ಭವನದಲ್ಲಿ ಉಡುಪಿ ತಾಲೂಕಿನ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳಿಗೆ ಪರೀಕ್ಷೆಯನ್ನು ಎದುರಿಸುವ ಬಗ್ಗೆ ತರಬೇತಿ ಕಾರ್ಯಾಗಾರ ನಡೆಯಿತು.

ಕಾರ್ಯಕ್ರಮವನ್ನು ಸಂಘದ ಅದ್ಯಕ್ಷ ಶ್ರೀಶ ನಾಯಕ್ ಉದ್ಘಾಟಿಸಿ ಮಾತನಾಡಿ ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸಿ ಅದರಲ್ಲಿ ಹೆಚ್ಚಿನ ಅಂಕಗಳನ್ನು ಪಡೆದು ಉತ್ತಮ ನಿರ್ವಹಣೆ ಮಾಡಿದರೆ ಜೇವನದಲ್ಲಿ ಯಶಸ್ಸು ಗಳಿಸಲು ಸಾದ್ಯ ಎಂದರು.
ಕಾರ್ಯಕ್ರಮದಲ್ಲಿ ದುರ್ಗಾಪರಮೇಶ್ವರಿ ಸೊಸೈಟಿಯ ವ್ಯವಸ್ಥಾಪಕ ನಿತ್ಯಾನಂದ ನಾಯಕ್,ಮಾಜಿ ಜಿ.ಪಂ ಅದ್ಯಕ್ಷ ಉಪೇಂದ್ರ ನಾಯಕ್,ಯುವಜನ ಸಭಾ ಅದ್ಯಕ್ಷ ಪ್ರವೀಣ್ ಪ್ರಭು,ಕಾರ್ಯದರ್ಶಿ ದೇವೇಂದ್ರ ನಾಯಕ್,ಮಹಿಳಾ ವೇದಿಕೆಯ ಅದ್ಯಕ್ಷೆ ಸುಮೀತ್ರಾ ನಾಯಕ್,ಪಾಡುರಂಗ ಕಾಮತ್,ದುರ್ಗಾ ಪರಮೇಶ್ವರಿ ಸೋಸೈಟಿ ಅದ್ಯಕ್ಷ ರಾಮಕೃಷ್ಣ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಜೇಸಿ ರಾಷ್ಟೀಯ ತರಬೇತುದಾರ ರಾಜೇಶ್ ಶೆಣೈ ಪರ್ಕಳ, ಮತ್ತು ರಾಘವೇಂದ್ರ ಪ್ರಭು ಕರ್ವಾಲು ರವರು ತರಬೇತಿ ನಡೆಸಿಕೊಟ್ಟರು.ಉದಯ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.ನಾಗರಾಜ ನಾಯಕ್ ಸ್ವಾಗತಿಸಿದರು.
ವಿವಿಧ ಶಾಲೆಗಳಿಂದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
