ಉಡುಪಿ:- ಜೇಸಿಐ ಉಡುಪಿ ಸಿಟಿ ಇದರ ನಿಕಟಪೂರ್ವ ಅದ್ಯಕ್ಷ ಹಾಗೂ ಜೇಸಿ ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು ರವರಿಗೆ ಸಾಮಾಜಿಕ ಸೇವಾ ಕ್ಷೇತ್ರ ವಿಭಾಗದಲ್ಲಿ ಬಿಜಾಪುರದ ಬಸವ ಸಾಹಿತ್ಯ ಮತ್ತು ಸಾಂಸ್ಕøತಿ ವೇದಿಕೆ ಇವರು ಕೊಡಮಾಡುವ ಬಸವ ಸೇವಾ ಶ್ರೀ ರಾಜ್ಯ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ಇವರು ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳಲ್ಲಿ ತನ್ನನ್ನು ತಾನು ಗುರುತಿಸಿಕೊಂಡಿದ್ದು ವಿವಿಧ ರೀತಿಯ ಕಾರ್ಯಕ್ರಮಗಳನ್ನು ಜಿಲ್ಲೆಯಾದ್ಯಂತ ನಡೆಸಿರುತ್ತಾರೆ.ಪ್ರಶಸ್ತಿ ಪುರಸ್ಕಾರ ಸಮಾರಂಭವು ಬಿಜಾಪುರದಲ್ಲಿ ಮುಂದಿನ ವಾರದಲ್ಲಿ ಫೆ.26 ರಂದು ನಡೆಯಲಿದ್ದು,ಸಚಿವರಾದ ಎಸ್.ಎಸ್ ಪಾಟೀಲ್,ಬೇಲಿ ಮಠದ ಶ್ರೀಗಳು ಭಾಗವಹಿಸಲಿರುವರು.
