ಕಟೀಲು: ಶ್ರೀ ದುಗಾಪರಮೇಶ್ವರೀ ದೇವಸ್ಥಾನದ ಅನುವಂಶಿಯ ಮೊಕ್ತೇಸರ ಹಾಗೂ ಚೆನೈಯ ಪ್ರಸಿದ್ಧ ವೈದ್ಯ ಕೊಡೆತ್ತೂರು ಗುತ್ತು ಡಾ| ರವೀಂದ್ರನಾಥ ಪೂಂಜ ( 74 ) ಅವರು ಜ. 2 ರಂದು ಮಂಗಳೂರಿನ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಪತ್ನಿ , ಇಬ್ಬರು ಪುತ್ರಿಯರು, ಪುತ್ರನ್ನು ಅಗಲಿದ್ದಾರೆ. ಚೆನೈಯಲ್ಲಿ ಕಳೆದ 50 ವರ್ಷಗಳಿಂದ ವೈದ್ಯರಾಗಿದ್ದು ಜನಾನುರಾಗಿಯಾಗಿದ್ದರು. ಕಳೆದ 2016 ಜೂ. 1 ರಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಕೊಡೆತ್ತೂರು ಗುತ್ತು ಮನೆತನದ ಪರವಾಗಿ ಅನುವಂಶಿಯ ಮೊಕ್ತೇಸರರಾಗಿ ಅಧಿಕಾರವಹಿಸಿಕೊಂಡಿದ್ದರು.
ದೇವಸ್ಥಾನದ ಅಭಿವೃದ್ಧಿಯ ಬಗ್ಗೆ ಅತೀವ ಕಾಳಜಿ ಹಾಗೂ ಆಸಕ್ತಿ ವಹಿಸಿದ್ದರು. ಬುಧವಾರ ಕಟೀಲಿನಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆಯಲ್ಲಿ ಬಾಗವಹಿಸಿದ್ದರು. ಮಂಗಳೂರಿನಲ್ಲಿ ಹುಟ್ಟಿ ಬಳಿಕ ಮದ್ರಾಸನಲ್ಲಿ ಶಿಕ್ಷಣ ಪಡೆದು ವೈದ್ಯರಾಗಿದ್ದರು. ಕಟೀಲು ಶಿಕ್ಷಣ ಸಂಸ್ಥೆಗಳ ಸಂಚಾಲಕರಾಗಿದ್ದರು, ಚೆನೈ ಬಂಟರ ಸಂಘದ ಮಾಜಿ ಅಧ್ಯಕ್ಷರಾಗ್ದಿರು, ಕರ್ನಾಟಕ ಸಂಘದದಿಂದ ಸೇವಾ ರತ್ನ ಪ್ರಶಸ್ತಿ, ತಮಿಳು ಸಂಘದಿಂದ ಮದರ್ ತೇರೆಸಾ ಪ್ರಶಸ್ತಿ, ವೈದ್ಯರ ಸಂಘದಿಂದ ಪ್ರಶಸ್ತಿ, ಸಹಿತ ಇವರ ವೈದ್ಯಕೀಯ ಸೇವೆಗಾಗಿ ಹಲವಾರು ಪ್ರತಿಷ್ಠಿತ ಪುರಸ್ಕಾರ , ಗೌರವ ಪ್ರಶಸ್ತಿ ಸಹಿತ ಸಮ್ಮಾನಗಳು ಸಂದಿವೆ, ಸಂತಾಪ ಸೂಚಕವಾಗಿ ಕಟೀಲು ಶಿಕ್ಷಣ ಸಂಸ್ಥೆಗಳಿಗೆ ರಜೆ ಸಾರಲಾಗಿದೆ.
