ಉಳ್ಳಾಲ: ಶಿಲ್ಪಿ ಕಲ್ಲನ್ನು ಕೆತ್ತಿದಾಗ ಉಂಟಾಗುವ ಸುಂದರ ಶಿಲ್ಪದಂತೆ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳನ್ನು ಪೋಷಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಾರೆ. ದೇಶ ಒಂದು ಹೂದೋಟವಿದ್ದಂತೆ, ವೈವಿದ್ಯತೆಯಲ್ಲಿ ಏಕತೆ ಇಲ್ಲಿನ ವಿಶೇಷತೆಯಾಗಿದ್ದು, ಅದರಂತೆ ಕಾರ್ಯಚರಿಸುತ್ತಿರುವ ಹಿರಾ ಶಾಲೆಯ ಕಾರ್ಯವೈಖರಿ ಶ್ಲಾಘನೀಯ ಎಂದು ದೇರಳಕಟ್ಟೆಯ ವಿದ್ಯಾರತ್ನ ಅಂಗ್ಲ ಮಾಧ್ಯಮ ಶಾಲೆಯ ನಿರ್ದೇಶಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅಭಿಪ್ರಾಯಪಟ್ಟರು.
ಅವರು ಹಿರಾ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಹಿರಾ ಕಿಡ್ಸ್ ಶಾಲೆ ಬಬ್ಬುಕಟ್ಟೆ ಇಲ್ಲಿ ಶಾಲಾ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅನುಪಮ ಮಹಿಳಾ ಮಾಸಿಕ ಇದರ ಸಹ ಸಂಪಾದಕಿಯಾದ ಸಾಜಿದ ಮೊಮಿನ್ ವಹಿಸಿದ್ದರು. ಸನ್ಮಾರ್ಗ ಪಬ್ಲಿಕೇಶನಿನ ಅಧ್ಯಕ್ಷರು ಹಾಗೂ ಶಾಂತಿ ಎಜುಕೇಶನಲ್ ಟ್ರಸ್ಟ್ನ ಮಾಜಿ ಅಧ್ಯಕ್ಷರಾದ ಕೆ.ಎಂ. ಶರೀಫ್, ಶಾಂತಿ ಎಜುಕೇಶನಲ್ ಟ್ರಸ್ಟ್ನ ಅಧ್ಯಕ್ಷರಾದ ಅಬ್ದುಲ್ ರಹಮಾನ್, ಉಪಾಧ್ಯಕ್ಷರಾದ ಎ.ಎಚ್.ಮಹ್ಮೂದ್, ಕಾರ್ಯದರ್ಶಿ ಅಬ್ದುಲ್ ಕರೀಮ್, ಶಾಲಾ ಸಂಚಾಲಕರಾದ ರಹಮತುಲ್ಲಹ, ಟ್ರಸ್ಟಿಗಳಾದ ಅಬ್ದುಲ್ ಖಾದರ್, ಅಬ್ಬಾಸ್ ಉಳ್ಳಾಲ್, ಹಸನಬ್ಬ, ಹಸನ್ ಪಿಲಾರ್, ಉಮರ್ ಬಾವ, ಹಿರಾ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಭಾರತಿ, ಹಿರಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಕನೀಝ್ ಫಾತೀಮ ಮತ್ತು ಹಿರಾ ಹೆಣ್ಮಕ್ಕಳ ಪ್ರೌಢ ‹ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ವನಜ ವಿಜಯ ಉಪಸ್ಥಿತರಿದ್ದರು. ಅನುಗ್ರಹ ಎಜುಕೇಶನಲ್ ಟ್ರಸ್ಟ್ ಇದರ ಉಪಾಧ್ಯಕ್ಷರಾದ ಮೊಹಮ್ಮದ್ ಇಸ್ಹಾಕ್ ವಾರ್ಷಿಕೋತ್ಸವದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿದರು.
ಹಿರಾ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ದೀಪಾ ಲತೀಶ್ರವರು ಶಾಲಾ ವಾರ್ಷಿಕ ವರದಿಯನ್ನು ಮಂಡಿಸಿದರು. ಶಿಕ್ಷಕಿ ನೌಶಿನ್ರವರು ಸ್ವಾಗತಿಸಿದರು. ಶಾಲಾ ವಿದ್ಯಾರ್ಥಿಗಳಾದ ಮೊಹಮ್ಮದ್ ಇಫಾಮ್ ಮತ್ತು ಮೊಹಮ್ಮದ್ ಮಝೂನ್ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಗುಲ್ಶನ್ರವರು ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿತು.

