ಬಜಪೆ:ಬಿರುವೆರ್  ಕುಡ್ಲ(ರಿ)ಇದರ ಬಜಪೆ ಘಟಕದ ಸಮಾಲೋಚನೆ ಸಭೆಯು ಬಜಪೆಯಲ್ಲಿ ಬಿರುವೆರ್ ಕುಡ್ಲದ ಘಟಕ ಸ್ಥಾಪನೆಯ ಕುರಿತಾಗಿ ಜ.29 ಅದಿತ್ಯವಾರ ಬಜಪೆ ಸುಂಕದಕಟ್ಟೆಯ ಅಂಬಿಕಾ ಅನ್ನಪೂರ್ಣೇಶ್ಚರೀ ದೇವಸ್ಥಾನದ ವಠಾರದಲ್ಲಿ ನಡೆಯಿತು. ಒಂದೇ ಜಾತಿ,ಒಂದೇ ಮತ, ಒಂದೇ ದೇವರು ಎಂಬ ತತ್ವದ ಮೂಲಕ ಸ್ಥಾಪನೆಗೊಂಡ ಬಿರುವೆರ್ ಕುಡ್ಲ ಸಂಘಟನೆಯ ಹಲವಾರು ಘಟಕಗಳು ಈಗ ಬೇರೆ ಬೇರೆ ಊರುಗಳಲ್ಲಿ ಸ್ಥಾಪನೆಗೊಂಡಿರುವ ನಿಟ್ಟಿನಲ್ಲಿ ಬಜ್ಪೆ ವಲಯದಲ್ಲೂ ಒಂದು ಘಟಕ ನಿರ್ಮಾನಗೊಂಡು ಬಜ್ಪೆ ಪ್ರದೇಶವನ್ನು ಸಮಾಜಮುಖಿ ಕೆಲಸಗಳ ಮೂಲಕ ಸರ್ವಾಂಗೀಣ ಅಭಿವೃದ್ಧಿ ಪಡಿಸುವ ಕೆಲಸಗಳ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು.

02

01
03

06

05

07 ಬಿರುವೆರ್ ಕುಡ್ಲ(ರಿ) ಮಾತೃ ಸಂಘದ ಸ್ಥಾಪನೆ ಬಗ್ಗೆ,ಉದಯ ಪೂಜಾರಿಯವರ ಬಗ್ಗೆ ಮತ್ತು ಅದರ ಮೂಲ ಉದ್ದೇಶದ ಬಗ್ಗೆ ಸಂಕೇತ್ ಪೂಜಾರಿಯವರು ಮಾತನಾಡಿದರು.ಬಿರುವೆರ್ ಕುಡ್ಲದ ಯಶಸ್ಸಿನ ಬಗ್ಗೆ ನಿತೇಶ್ ಮಾರ್ನಾಡ್ ಮಾತನಾಡಿ ಬಜ್ಪೆಯಲ್ಲಿ ಯಾವ ರೀತಿ ಬಿರುವೆರ್ ಕುಡ್ಲ ಸಂಘಟನೆ ಕಾರ್ಯಪ್ರವೃತ್ತರಾಗಬೇಕೆಂಬ ಬಗ್ಗೆ ಮಾಹಿತಿ ನೀಡಿದರು.

ಲೋಕೇಶ್ ಪೂಜಾರಿ ಮತ್ತು ಚಂದ್ರಶೇಖರ್ ಅಮೀನ್ ಅವರು ಮಾತನಾಡಿ ಯುವಕರಿಗೆ ಸಲಹೆ ಸೂಚನೆಗಳನ್ನು ನೀಡಿದರು. ಗಣೇಶ್ ಅರ್ಬಿ ಕಾರ್ಯಕ್ರಮ ನಿರೂಪಿಸಿದರು.ಈ ಕಾರ್ಯಕ್ರಮದಲ್ಲಿ ಮಹೇಶ್ ಕೋಟ್ಯಾನ್, ಶರತ್ ಬಜ್ಪೆ, ಪ್ರದೀಪ್ ಸುವರ್ಣ ಬಜ್ಪೆ, ಕಿಶೋರ್ ಪೂಜಾರಿ, ಅನಿಲ್ ಕುಮಾರ್ ಸುಂಕದಕಟ್ಟೆ, ವಿಜಯ ಕುಮಾರ್ ಕೆಂಜಾರ್-ಕಾನ, ಕಿರಣ್ ಕುಮಾರ್ ಅತ್ತೊಲಿಗೆ, ಗೋಪಾಲ ಪೂಜಾರಿ,ಪ್ರಕಾಶ್ ಕುಕ್ಯಾನ್, ಸುದೀಪ್ ಅಮೀನ್ ಎಕ್ಕಾರ್ ಸುದೇಶ್ ಕೆಂಜಾರ್ ಮತ್ತಿತ್ತರ ಗಣ್ಯರು ಉಪಸ್ಥಿತರಿದ್ದರು.

By suddi9

Leave a Reply

Your email address will not be published. Required fields are marked *