ಬಜಪೆ: ದೈವ ದೇವರುಗಳ ಜೀರ್ಣೋದ್ದರದಿಂದ ನಮ್ಮ ಸಂಸ್ಕ್ರತಿ ಸಂಸ್ಕ್ರರಗಳನ್ನು ಉಳಿಸಿ ಬೆಳೆಸಿದಂತಾಗಿದೆ ಎಂದು ಮುಲ್ಕಿ ಸೀಮೆ ಅರಸರಾದ ದುಗ್ಗಣ ಸಾವಂತರು ಹೇಳಿದರು ಅವರು ಕಿನ್ನಿಗೋಳಿ ಸಮೀಪದ ಏಳಿಂಜೆ ಲಕ್ಷೀಜನಾರ್ದನ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಪೂರ್ವಭಾವಿಯಾಗಿ ನಡೆದ ಸಭಾಕಾರ್ಯದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

yelinje 111

ಕಟೀಲು ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣ ಆಶೀರ್ವಾಚನ ನೀಡಿದರು ಈ ಸಂದರ್ಭ ದೇವಳದ ತಂತ್ರಿಗಳಾದ ಶಿಬರೂರು ವೇದವ್ಯಾಸ ತಂತ್ರಿ, ಅನುವಂಶಿಕ ಅರ್ಚಕರಾದ ವೈ ವಿ ಗಣೇಶ್ ಭಟ್, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ, ಶಿಬರೂರು ಗುತ್ತು ಗುತ್ತಿನಾರ್ ಉಮೇಶ್ ಶೆಟ್ಟಿ, ಅಂಗಡಿ ಗುತ್ತು ಗುತ್ತಿನಾರ್ ಬಾಲಕೃಷ್ಣ ಶೆಟ್ಟಿ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್ ಕುಮಾರ್ ಬೋಳ್ಳೂರು, ತಾಲೂಕು ಪಂಚಾಯತ್ ಸದಸ್ಯೆ ರಶ್ಮಿ ಆಚಾರ್ಯ, ಸುರಗಿರಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಕ್ತೇಸರ ಸೀತಾರಾಮ ಶೆಟ್ಟಿ, ಏಳತ್ತೂರು ದೇವಳದ ಆಡಳಿತ ಮುಕ್ತೇಸರ ಸಂತೋಷ್ ಕುಮಾರ್ ಹೆಗ್ಡೆ, ಉಳೆಪಾಡಿ ದೇವಳದ ಆಡಳಿತ ಮುಕ್ತೇಸರ ಚಿತ್ತರಂಜನ್ ಶೆಟ್ಟಿ, ಏಳಿಂಜೆ ಜಾರಂದಾಯ ದೈವಸ್ಥಾನದ ಆಡಳಿತ ಮುಕ್ತೇಸರ ಸದಾನಂದ ಶೆಟ್ಟಿ ಭಂಡಸಾಲೆ, ಜಾರಂದಾಯ ದೈವಸ್ಥಾನ ಪಟ್ಟೆ ಆಡಳಿತ ಮುಕ್ತೇಸರ ರಘರಾಮ ಅಡ್ಯಂತಾಯ, ಐಕಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿವಾಕರ ಚೌಟ, ಅನಿಲ್ ಶೆಟ್ಟಿ ಕೋಂಜಾಲಗುತ್ತು, ಭುವನಾಭಿರಾಮ ಉಡುಪ, ಸದಾನಂದ ಭಟ್, ಧರ್ಮದರ್ಶಿ ಮೋಹನ್ ದಾಸ್ ಸುರತ್ಕಲ್, ಕಿಟ್ಟಣ್ಣ ಶೆಟ್ಟಿ ಶಿಬರೂರು ಗುತ್ತು, ದೊಡ್ಡಣ್ಣ ಶೆಟ್ಟಿ, ವೈ ಕೃಷ್ಣ ಸಾಲಿಯಾನ್ ಮತ್ತಿತರರು ಇದ್ದರು. ಯೋಗೀಶ್ ರಾವ್ ಸ್ವಾಗತಿಸಿ, ದೇವಳದ ಅರ್ಚಕ ಸದಾನಂದ ಭಟ್ ಧನ್ಯವಾದ ಸಮರ್ಪಿಸಿದರು ಶರತ್ ಶೆಟ್ಟಿ ಮತ್ತು ಸಾಯಿನಾಥ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

By suddi9

Leave a Reply

Your email address will not be published. Required fields are marked *