ದೇಶದ ಎಲ್ಲಾ ಸಮುದಾಯದ ಜನರನ್ನು ಮುಂದಿಟ್ಟು ಅರುಣ್ ಜೇಟ್ಲಿ ಮಂಡಿಸಿದಬಜೆಟ್`ನ  ಕೆಲವೊಂದು ಮುಖ್ಯ ಹೈಲೈಟ್ಸ್ ಇಲ್ಲಿದೆ. ಆರಾಮವಾಗಿ ಓದ್ತಾ ಓದ್ತಾ ನಿಮ್ಮ ನಿಮ್ಮ ಒಳಗೆ ಡಿಸ್ಕಸ್ ಮಾಡ್ಕೊಳ್ಳಿ.

jetli1

ಅರುಣ್ ಜೇಟ್ಲಿ ಬಜೆಟ್`ನ ಹೊಸ ಯೋಜನೆಗಳು
– ‘ಬೇಟಿ ಬಚಾವೋ, ಬೇಟಿ ಪಡಾವೋ’ ಮೂಲಕ ಮಹಿಳೆಯರ ಬಲವರ್ಧನೆ
– ದೃಷ್ಟಿ ವಿಕಲಚೇತನರಿಗಾಗಿ ನೋಟುಗಳ ಮೇಲೆ ಬ್ರೈಲ್‌ ಲಿಪಿ ಮುದ್ರಣ
– ಈಶಾನ್ಯ ರಾಜ್ಯಗಳಿಗಾಗಿ ಪ್ರತ್ಯೇಕ ‘ಅರುಣ ಪ್ರಭ’ ಟಿವಿ ಚಾನೆಲ್
– ಈ ವರ್ಷದಿಂದಲೇ 100 ಕೋಟಿ ವೆಚ್ಚದಲ್ಲಿ ಕಿಸಾನ್‌ ವಾಹಿನಿ ಪ್ರಾರಂಭ
– 7 ಹೊಸ ಸ್ಮಾರ್ಟ್ ಸಿಟಿಗಳ ನಿರ್ಮಾಣಕ್ಕೆ 7060 ಕೋಟಿ ರೂ. ಮೀಸಲು
– ಮುಂದಿನ ದಿನಗಳಲ್ಲಿ 100 ಸ್ಮಾರ್ಟ್​ ಸಿಟಿಗಳ ನಿರ್ಮಾಣಕ್ಕೆ ಒತ್ತು
– 12 ಹೊಸ ದಂತ ಕಾಲೇಜುಗಳ ಸ್ಥಾಪನೆಗೆ ಯೋಜನೆ

– ಗ್ರಾಮೀಣ ಭಾಗಗಳಲ್ಲಿ 15 ನೂತನ ಸಂಶೋಧನಾ ಕೇಂದ್ರಗಳ ಆರಂಭ
– ರಾಷ್ಟ್ರೀಯ ಗ್ರಾಮೀಣ ಅಂತರ್ಜಾಲ ಮತ್ತು ತಂತ್ರಜ್ಞಾನಕ್ಕಾಗಿ 500 ಕೋಟಿ
– ರೈತರಿಗಾಗಿ ‘ಸಾಯಿಲ್ ಕಾರ್ಡ್​’ ಯೋಜನೆ ಪ್ರಕಟ
– ‘ಸಾಯಿಲ್ ಕಾರ್ಡ್’​ಗಾಗಿ 100 ಕೋಟಿ ಪ್ರಕಟ
– ಸಮುದಾಯ ರೇಡಿಯೋ ಕೇಂದ್ರಗಳ ನಿರ್ಮಾಣಕ್ಕೆ 100 ಕೋಟಿ
– ಗುಜರಾತ್​ನ ಸರ್ದಾರ್​ ಪಟೇಲ್​​ ‘ಏಕತಾ ಪ್ರತಿಮೆ’ ನಿರ್ಮಾಣಕ್ಕೆ 200 ಕೋಟಿ
-5 ಐಐಎಂ ಮತ್ತು 5 ಐಐಟಿಎಸ್​ ಕಾಲೇಜುಗಳ ನಿರ್ಮಾಣಕ್ಕೆ ಆದ್ಯತೆ
– ಆಂಧ್ರ, ಪ.ಬಂಗಾಳ, ವಿದರ್ಭ, ಪೂರ್ವಾಂಚಲಗಳಲ್ಲಿ ಮೆಡಿಕಲ್ ಕಾಲೇಜುಗಳು
– 4 ಎಐಎಂಎಸ್​​ (ಮೆಡಿಕಲ್ ಸೈನ್ಸ್ ಕಾಲೇಜು)ಸ್ಥಾಪನೆಗಾಗಿ 500 ಕೋಟಿ ಪ್ರಕಟ
– ಯುದ್ಧ ಸ್ಮಾರಕಕ್ಕಾಗಿ 100 ಕೋಟಿ ಮೀಸಲು
– ನದಿ ಜೋಡಣೆಗೆ 100 ಕೋಟಿ; ಗಂಗಾ ನದಿ ಜೋಡಣೆಗೆ 6,237 ಕೋಟಿ
-ಗಂಗಾ ನದಿಯ ಶುದ್ಧೀಕರಣಕ್ಕೆ 2,370 ಕೋಟಿ ರೂ. ನಿಗದಿ
– ಅಲಹಬಾದ್​​ನಿಂದ ಹಲ್ದಿವೆರೆಗೆ 1620 ಕಿಮಿ ‘ಜಲ ವಿಕಾಸ’ಯೋಜನೆ
– ‘ಜಲಮಾರ್ಗ ವಿಕಾಸ’ ಯೋಜನೆಗೆ 4200 ಕೋಟಿ ಮೀಸಲು
– ಎಲ್ಲ ಹಣಕಾಸಿನ ವಹಿವಾಟಿಗೆ ಏಕ ಡಿ-ಮ್ಯಾಟ್‌ ಅಕೌಂಟ್‌
– ಸಣ್ಣ ಬ್ಯಾಂಕ್‌ಗಳ ಆರಂಭಕ್ಕೆ ಆರ್​​ಬಿಐ ಹೊಸ ಸೂತ್ರ
– ಇ-ಪಿಎಫ್​​​ಗಾಗಿ ಏಕೀಕೃತ ಖಾತೆಯ ಆರಂಭ
– ಉದ್ಯೋಗಕ್ಕಾಗಿ ‘ಸ್ಕಿಲ್ ಡೆವೆಲಪ್​ಮೆಂಟ್​ ತರಬೇತಿ’ಗೆ ಒತ್ತು
– ಖಾಸಗಿ ಸಹಭಾಗಿತ್ವದಲ್ಲಿ ಹೊಸ ವಿಮಾನ ನಿಲ್ದಾಣಗಳ ಅಭಿವೃದ್ಧಿ
– ಟೈರ್ 1, ಟೈರ್‌ 2 ಸಿಟಿಗಳಲ್ಲಿ ಹೊಸ ವಿಮಾನ ನಿಲ್ದಾಣಗಳ ಸ್ಥಾಪನೆ
– 9 ವಿಮಾನ ನಿಲ್ದಾಣಗಳಲ್ಲಿ ಇ-ವೀಸಾ ಪರಿಚಯ
– 16 ಹೊಸ ಬಂದರುಗಳ ನಿರ್ಮಾಣಕ್ಕೆ 11 ಸಾವಿರ ಕೋಟಿ
– ರಾಯ್​ ಬರೇಲಿಯಲ್ಲಿ 6 ಜವಳಿ ಉದ್ಯಮ ಆರಂಭ
– ಜಮ್ಮು ಕಾಶ್ಮೀರದ ಕ್ರೀಡಾ ಪ್ರತಿಭೆಗಳಿಗೆ ವೇದಿಕೆ ಒದಗಿಸಲು 200 ಕೋಟಿ
– ಕರಕುಶಲ ಕಲೆಗಳ ಪುನಶ್ಚೇತನಕ್ಕೆ ಹಸ್ತಕಲಾ ಅಕಾಡೆಮಿ ಸ್ಥಾಪನೆ 30 ಕೋಟಿ ಮೀಸಲು
– ಅತ್ಯಾಧುನಿಕ ಸೌರ ಶಕ್ತಿ ಘಟಕಗಳ ನಿರ್ಮಾಣಕ್ಕೆ ಆದ್ಯತೆ
– ಮಣಿಪುರದಲ್ಲಿ ಕ್ರೀಡಾ ವಿಶ್ವದ್ಯಾನಿಲಯ ಸ್ಥಾಪನೆಗೆ 100 ಕೋಟಿ
– ರಾಜಸ್ಥಾನ, ತಮಿಳುನಾಡು, ಲಡಾಕ್​ನಲ್ಲಿ ‘ಅಲ್ಟ್ರಾ ಮಾಡರ್ನ್​ ಪ್ರಾಜೆಕ್ಟ್’
– ‘ಅಲ್ಟ್ರಾ ಮಾಡರ್ನ್​ ಪ್ರಾಜೆಕ್ಟ್’ಗಾಗಿ 500 ಕೋಟಿ ಮೀಸಲು
– ವಿಮಾವಲಯದಲ್ಲಿ ಶೇ.49 ವಿದೇಶಿ ನೇರ ಬಂಡವಾಳ ಹೂಡಿಕೆಗೆ ಅವಕಾಶ

By suddi9

Leave a Reply

Your email address will not be published. Required fields are marked *