ಉಳ್ಳಾಲ: ಯುವಸಮುದಾಯ ಸಮಾಜಕ್ಕೆ ಪೂರಕವಾಗಿರುವ ಕೆಲಸದಲ್ಲಿ ತೊಡಗಿಕೊಳ್ಳುವ ಮೂಲಕ ಹೆತ್ತವರ ಆಸ್ತಿ ಜತೆಗೆ ಸಮಾಜದ ಆಸ್ತಿ ಆಗುವುದರಿಂದ ಜೀವನ ಯಶಸ್ವಿಯಾಗಲು ಸಾಧ್ಯ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಹಾಗೂ ಚಾಮರಾಜನಗರದ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು.

22ullal1

Blood Camp (1)
Blood Camp (4)

ಅವರು ಬ್ಲಡ್ ಹೆಲ್ಪ್‍ಲೈನ್ ಕರ್ನಾಟಕ, ಸೋಕರ್ಸ್ ಉಳ್ಳಾಲ ಹಾಗೂ ಮೇಲಂಗಡಿ ಕಲ್ಚರಲ್ ಅಸೋಸಿಯೇಶನ್ ಇವರ ಸಂಯುಕ್ತ ಆಶ್ರಯದಲ್ಲಿ ವೆನ್ಲಾಕ್ ಜಿಲ್ಲಾ ಆಸ್ಪತ್ರೆ ಇದರ ಸಹಯೋಗದೊಂದಿಗೆ ಉಳ್ಳಾಲದ ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ ಭಾನುವಾರ ಜರಗಿದ ಬೃಹತ್ ರಕ್ತದಾನ ಶಿಬಿರ ಹಾಗೂ ಸಾರ್ವಜನಿಕ ಶುದ್ಧ ಕುಡಿಯುವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

Blood Camp (5)

Blood Camp (6)

ರಕ್ತದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಮಾಜದಲ್ಲಿನ ಇನ್ನೊಂದು ಕುಟುಂಬದ ಕಣ್ಣೀರು ಒರೆಸುವ ಕಾರ್ಯಕ್ರಮ ಶ್ಲಾಘನೀಯ. ಇದನ್ನು ಹಮ್ಮಿಕೊಂಡ ಯುವಜನಾಂಗ ಸಂಘಟಿತರಾಗಿ, ಸಾಮಾಜಿಕ ಚಿಂತನೆ ಮುಂದಿಟ್ಟಾಗ ಅವರು ಸಮಾಜದಲ್ಲಿ ಗೌರವಯುತ ಜೀವನ ಸಾಗಿಸಲು ಸಾಧ್ಯ. ಉಳ್ಳಾಲದ ಹೃದಯಭಾಗದ ಮಾಸ್ತಿಕಟ್ಟೆ ಪ್ರದೇಶ ಸ್ವಚ್ಛತೆ ಮತ್ತು ಏಕತೆಗೆ ಹೆಸರಾಗಿದೆ. ಇಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ತೆರೆದಿರುವುದನ್ನು ಸಾರ್ವಜನಿಕರು ಉತ್ತಮವಾಗಿ ನಿರ್ವಹಿಸಿ ಸದುಪಯೋಗಪಡಿಸಿಕೊಳ್ಳಿ ಎಂದರು.

Blood Camp (9)

Blood Camp (2)

ವಾಟ್ಸ್ಯಾಪ್ ಗುಂಪಿನ ಅಡ್ಮಿನ್ ನವಾಝ್ ಉಳ್ಳಾಲ ಮಾತನಾಡಿ, ಬ್ಲಡ್ ಹೆಲ್ಪ್‍ಲೈನ್ ಕರ್ನಾಟಕ ದೇಶ- ವಿದೇಶಗಳಲ್ಲಿರುವ ಸದಸ್ಯರನ್ನು ಒಳಗೊಂಡಿರುವ ಸಂಘಟನೆ. ಮೂರು ತಿಂಗಳಿಂದ ಕರ್ನಾಟಕದಾದ್ಯಂತ ಕಾರ್ಯಾಚರಿಸುತ್ತಿದೆ. ವಾಟ್ಸ್ಯಾಪ್ ಮೂಲಕ ಆರಂಭಗೊಂಡಿರುವ ಸಂಘಟನೆ , ಯಾವುದೇ ಕ್ಷಣದಲ್ಲೂ ರಕ್ತವನ್ನು ಒದಗಿಸುವ ಪ್ರಯತ್ನವನ್ನು ನಡೆಸುತ್ತಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಆರನೇ ಕ್ಯಾಂಪ್ ಇದಾಗಿದ್ದು, ಪ್ರತಿ ಕ್ಯಾಂಪ್ ವಾಟ್ಸ್ಯಾಪ್‍ನಲ್ಲಿ ಸಂಘಟನೆಯಾದ ಸದಸ್ಯರ ಸಹಕಾರದ ಜತೆಗೆ ನಡೆಯುತ್ತಲೇ ಬಂದಿದೆ ಎಂದು ಹೇಳಿದರು.Blood Camp (8)

Blood Camp (11)

ಸೈಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧ್ಯಕ್ಷತೆ ವಹಿಸಿದ್ದರು. ಚೆಂಬುಗುಡ್ಡೆ ಜುಮಾ ಮಸೀದಿಯ ಖತೀಬರಾದ ಖಲಂದರ್ ಸಖಾಫಿ ದುಆ ನೆರವೇರಿಸಿದರು. ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ ಮುಖ್ಯಸ್ಥ ಡಾ.ಶರತ್ ಕುಮಾರ್, ಉಳ್ಳಾಲ ನಗರಸಭೆ ಸದಸ್ಯರಾದ ಮುಸ್ತಾಫ ಅಬ್ದುಲ್ಲ, ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಸೈಯ್ಯಿದ್ ಮದನಿ ಅರೆಬಿಕ್ ಟ್ರಸ್ಟಿನ ಮಾಜಿ ಉಪಾಧ್ಯಕ್ಷ ಬಿ.ಜಿ.ಹನೀಫ್ ಹಾಜಿ, ಕರ್ನಾಟಕ ಬ್ಲಡ್ ಹೆಲ್ಪ್ ಲೈನ್ ಸ್ಥಾಪಕ ನಿಸಾರ್ ಉಳ್ಳಾಲ್ ದಮಾಮ್, ಜಿಲ್ಲಾ ಯುವಕಾಂಗ್ರೆಸ್ ಉಪಾಧ್ಯಕ್ಷ ಲುಕ್ ಮನ್, ಮುಸ್ಲಿಂ ಸೆಂಟ್ರಲ್ ಕಮಿಟಿ ದ.ಕ ಮತ್ತು ಉಡುಪಿ ಕಾರ್ಯದರ್ಶಿ ಸಲೀಂ ಯು.ಬಿ, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಅಡ್ಮಿನ್‍ಗಳಾದ ಆಶೀಕ್ ಕುಕ್ಕಾಜೆ, ಮುಸ್ತಾಫ ಅಡ್ಡೂರು ದೆಮ್ಮೆಲೆ, ಇಕ್ಬಾಲ್ ಕೆನರಾ, ಸದಸ್ಯರಾದ ಗಝಲ್ ಅಲಿ, ಹೆಲ್ಪ್ ಇಂಡಿಯಾ ಚಾರಿಟೇಬಲ್ ಟ್ರಸ್ಟಿನ ಸ್ಥಾಪಕ ಕಾರ್ಯದರ್ಶಿ ರಾಝಿಕ್ ಉಳ್ಳಾಲ್, ಉದ್ಯಮಿ ಯು.ಹೆಚ್.ಹಸೈನಾರ್ ಉಪಸ್ಥಿತರಿದ್ದರು. ಸಲಾಂ ಮದನಿ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

By Suddi9

Leave a Reply

Your email address will not be published. Required fields are marked *