ಕೈಕಂಬ: ಶ್ರೀ ಮುಖ್ಯಪ್ರಾಣ ದೇವಸ್ಥಾನ ಅಗ್ರಹಾರ ಅಡ್ಡೂರು ಮತ್ತು ಹಿಂದೂ ಜಾಗರಣಾ ವೇದಿಕೆ ಅಡ್ಡೂರು ಇದರ ವತಿಯಿಂದ ತಂತ್ರಿಗಳಾದ ಕೋಡಿಮಜಲು ವೇದಮೂರ್ತಿ ಶ್ರೀ ಅನಂತಪದ್ಮನಾಭ ಉಪಾಧ್ಯಾಯರ ನೇತೃತ್ವದಲ್ಲಿ 24ನೇ ವರ್ಷದ ಸಾರ್ವಜನಿಕ “ಶ್ರೀ ಶನೀಶ್ವರ ಪೂಜೆ“ಯು ಮಾರ್ಚ್.4 ಶನಿವಾರದಂದು ಜರುಗಲಿದೆ.
ಮಾ.4ರಂದು ಬೆಳಿಗ್ಗೆ 8.30ಕ್ಕೆ ಪವಮಾನ ಅಭಿಷೇಕ, 9ಕ್ಕೆ ಗಣಹೋಮ, 9.30ಕ್ಕೆ ಶನಿಪೂಜೆ, 12.30ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, ಹಾಗೂ ಸಂಜೆ 5.30ಕ್ಕೆ ಭಜನೆ, 6.30ಕ್ಕೆ ಆಶ್ಲೇಶ ಬಲಿ ಪೂಜೆ, 7ಕ್ಕೆ ರಂಗಪೂಜೆ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

