ನವದೆಹಲಿ: ನವದೆಹಲಿಯ ಅಶೋಕ ರಸ್ತೆಯಲ್ಲಿರುವ ಬಿಜೆಪಿ ಬಿಜೆಪಿ ಪ್ರಧಾನ ಕಾರ್ಯಾಲಯದ ಮುಂದೆ ಬುಧವಾರ ಬೆಳಿಗ್ಗೆ 3 ಗಂಟೆಗೆ ಅನುಮಾನಾಸ್ಪದವಾಗಿ 3 ಬ್ಯಾಗ್ಗಳು ಕಂಡು ಬಂದಿದ್ದು ಭಯದ ವಾತಾವರಣವನ್ನು ಸೃಷ್ಟಿಸಿತು. ಸ್ಥಳಕ್ಕಾಗಮಿಸಿದ ದೆಹಲಿ ಪೋಲಿಸ್ ಮತ್ತು ಬಾಂಬ್ ನಿಷ್ಕೃೀಯ ದಳ ಪರಿಶೀಲನೆ ನಡೆಸಿತು.
ಬೆಳಿಗ್ಗೆ ಸುಮಾರು 8 ಗಂಟೆಗೆ ಘಟನೆಯ ಮಾಹಿತಿ ಪಡೆದ ಪೋಲಿಸರು ಬಾಂಬ್ ನಿರೋಧಕ ದಳ ಮತ್ತು ಪೋಲಿಸ್ ನಾಯಿಗಳೊಂದಿಗೆ ಸ್ಥಳಕ್ಕೆ ಆಗಮಿಸಿದರು. ಆದರೆ ಬ್ಯಾಗ್ನಲ್ಲಿ ಅನುಮಾನಾಸ್ಪದ ವಸ್ತುಗಳೇನು ಇರಲಿಲ್ಲ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿದ ಬಿಜೆಪಿ ಕಾರ್ಯಕರ್ತರೊಬ್ಬರು ದಂಪತಿಗಳಿಬ್ಬರು ಅಲ್ಲಿಗೆ ಬಂದು ಅದು ತಮ್ಮ ಚೀಲ ಎಂದು ತೆಗೆದುಕೊಂಡು ಹೋದರು ಎಂದು ತಿಳಿಸಿದ್ದಾರೆ.
ಬಿಜೆಪಿ ಮುಖ್ಯ ಕಾರ್ಯಾಲಯದ ಮುಂದೆ ಚೀಲವನ್ನಿಟ್ಟ ದಂಪತಿಗಳು ತಿಂಡಿ ತಿನ್ನಲು ಅಲ್ಲೇ ಹತ್ತಿರದಲ್ಲಿದ್ದ ಆಂಧ್ರಭವನಕ್ಕೆ ಹೋಗಿದ್ದರು. ಆದರೆ ವಾರಸುದಾರರಿಲ್ಲದ ಬ್ಯಾಗ್ ನೋಡಿದ ದಾರಿಹೋಕರೊಬ್ಬರು ಪಿಸಿಆರ್ಗೆ ಕರೆ ಮಾಡಿದರು.
ಆ ದಂಪತಿಗಳಿಬ್ಬರನ್ನು ಠಾಣೆಗೆ ತಂದು ವಿಚಾರಣೆ ನಡೆಸಲಾಯಿತು. ಆದರೆ ಇದು ಗಂಭೀರವಾದುದಲ್ಲ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆಯನ್ನು ಮುಂದುವರೆಸಿದ್ದೇವೆ ಎಂದು ಪೋಲಿಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

